• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌ಗೆ ಮತ್ತೆ ಸಂಕಷ್ಟ: ಇನ್ನಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಗೆ ಅರ್ಜಿ

ಪ್ರತಿಧ್ವನಿ by ಪ್ರತಿಧ್ವನಿ
August 7, 2026
in Top Story, ಕರ್ನಾಟಕ, ಸಿನಿಮಾ
0
ದರ್ಶನ್‌ಗೆ ಮತ್ತೆ ಸಂಕಷ್ಟ: ಇನ್ನಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಗೆ ಅರ್ಜಿ
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆರೋಪಿ ಪ್ರದೋಷ್ ಬಳಿಕ ಇದೀಗ ಎ8 ರವಿಶಂಕರ್ ಹಾಗೂ ಎ10 ವಿನಯ್ ಮಾಫಿ ಸಾಕ್ಷಿಯಾಗಲು ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Renukaswamy case: ಸತ್ಯ ಹೇಳ್ತೀನಿ ಕ್ಷಮಿಸಬೇಕು ಅಂತ  ಕೊರ್ಟ್ ನಲ್ಲಿ ಪ್ರದೋಷ್ ಅರ್ಜಿ | Darshan | pratidhvani

ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಇದರ ನಡುವೆಯೇ ಮತ್ತಿಬ್ಬರು ಆರೋಪಿಗಳನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವಂತೆ ಅವರ ಪರ ವಕೀಲರು ಕೋರ್ಟ್‌ಗೆ ಮನವಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಇನ್ನು ಪ್ರದೋಷ್ ಸಲ್ಲಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಪ್ರದೋಷ್ ಪರ ವಕೀಲರು, ತಮ್ಮ ಅರ್ಜಿಯೊಂದಿಗೆ ಇತರ ಆರೋಪಿಗಳ ಅರ್ಜಿಯನ್ನು ಸೇರಿಸಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದರು. ಮೊದಲು ಪ್ರದೋಷ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ವಾದಿಸಿದ್ದಾರೆ ಎನ್ನಲಾಗಿದೆ.

Shree Chamundeshwari Karaga Mahotsava 2026 | Gilli Nata | Kiccha Sudeep| Dboss|CMKarnataka |DARSHAN

ಪ್ರದೋಷ್ ಪರ ವಕೀಲರು ಮತ್ತೊಂದು ಅರ್ಜಿಯನ್ನೂ ಸಲ್ಲಿಸಿದ್ದು, ದರ್ಶನ್ ಇರುವ ಜೈಲು ಕೊಠಡಿಯಿಂದ ಪ್ರತ್ಯೇಕವಾಗಿ ತಮ್ಮ ಕಕ್ಷಿದಾರರನ್ನು ವಿಚಾರಣೆಗೆ ಹಾಜರುಪಡಿಸಬೇಕು ಎಂದು ಕೋರಿದ್ದಾರೆ. ದರ್ಶನ್ ಅವರಿಂದ ಬೆದರಿಕೆ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಈ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

DBoss ರಚಿತಾ ತಗೊಂಡ ಧಿಡೀರ್ ನಿರ್ಧಾರ.? Rachita Ram |Ramanagara karaga Utsava|  #pratidhvani #rachitaram

ಇನ್ನು ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್, ಸಿಆರ್‌ಪಿಸಿ ಸೆಕ್ಷನ್ 306 ಹಾಗೂ 307ರ ಅಡಿಯಲ್ಲಿ ಮಾಫಿ ಸಾಕ್ಷಿಗೆ ಅವಕಾಶವಿದೆ ಎಂದು ವಾದಿಸಿದರು. ಮಾಫಿ ಸಾಕ್ಷಿಯಾಗಲು ಬಯಸುವ ಆರೋಪಿ ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಅವರು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲರು ಆರೋಪಿಗಳಿಗೆ ತಮ್ಮ ವಾದ ಮಂಡಿಸುವ ಹಕ್ಕು ಇದೆ. ಮಾಫಿ ಸಾಕ್ಷಿಗೆ ಸಂಬಂಧಿಸಿದ ಅರ್ಜಿಯ ಪ್ರತಿಯನ್ನು ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಕೇವಲ ಸಾಕ್ಷಿ ಹೇಳಲು ಸಿದ್ಧ ಎಂದು ಹೇಳಿದ ಕಾರಣಕ್ಕೆ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂದು ವಾದಿಸಿದರು ಎಂದು ವರದಿಯಾಗಿದೆ. ಸದ್ಯ ವಾದ ಪ್ರತಿವಾದ ಆಲಿಸಿದ 59ನೇ ಸೆಷನ್ಸ್ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ಮುಂದೂಡಿದೆ. ಪ್ರಕರಣದ ಮುಂದಿನ ವಿಚಾರಣೆ ಬಳಿಕ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.

Kavya ಎಲ್ಲಿ ಎಂದು ಗಿಲ್ಲಿನ ಕೇಳಿದ ರಾಮನಗರ ಜನರು..! |  | Ramanagara karaga Utsava | pratidhvani
Previous Post

ಎಸ್ಐಆರ್ ಪ್ರಕ್ರಿಯೆ: ಪ್ರಜಾಪ್ರಭುತ್ವ ಮತ್ತು ಸಮಾಜದ ಮೇಲೆ ಪರಿಣಾಮ

Next Post

ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ: ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ಹಿಗ್ಗಾಮುಗ್ಗಾ ತರಾಟೆ

Related Posts

ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ
Top Story

ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ

by ಪ್ರತಿಧ್ವನಿ
August 7, 2026
0

ಬೆಂಗಳೂರು, ಆಗಸ್ಟ್ 7: ಕರ್ನಾಟಕದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಂಬರುವ...

Read moreDetails
NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

August 7, 2026
ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

August 7, 2026
ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

August 7, 2026
ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

August 7, 2026
Next Post
ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ: ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ಹಿಗ್ಗಾಮುಗ್ಗಾ ತರಾಟೆ

ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ: ತಂಗಡಗಿ, ರಾಯರೆಡ್ಡಿ ವಿರುದ್ಧ ಇಕ್ಬಾಲ್ ಅನ್ಸಾರಿ ಹಿಗ್ಗಾಮುಗ್ಗಾ ತರಾಟೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada