• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅರಸು ನಿರ್ದೇಶಕರ ಹೊಸ ಪ್ರಯೋಗ, ಜುಲೈ 14ಕ್ಕೆ ‘ಅಪರೂಪ’ ಸಿನಿಮಾ ಬಿಡುಗಡೆ

Any Mind by Any Mind
June 30, 2023
in Top Story, ಇತರೆ / Others, ಇದೀಗ, ಸಿನಿಮಾ
0
ಅರಸು ನಿರ್ದೇಶಕರ ಹೊಸ ಪ್ರಯೋಗ, ಜುಲೈ 14ಕ್ಕೆ ‘ಅಪರೂಪ’ ಸಿನಿಮಾ ಬಿಡುಗಡೆ
Share on WhatsAppShare on FacebookShare on Telegram

ADVERTISEMENT

ಆಕಾಶ್‌ ( Akash ), ಅರಸು ( Arasu ) ಅಜಿತ್‌ ( Ajith ), ಅಭಯ್‌ ( Abhay ), ಅತಿರಥ ( Atiratha ), ಸೇರಿದಂತೆ ಹಲವು ವಿಶಿಷ್ಟ ಹಾಗೂ ವಿಭಿನ್ನ ಪ್ರೇಮಕಥೆಗಳ ( Love Stories) ಸಿನಿಮಾವನ್ನ ನಿರ್ದೇಶಿಸಿ, ಯಶಸ್ವಿ ನಿರ್ದೇಶಕ ಎಂದು ಎನಿಸಿಕೊಂಡಿರುವ ಮಹೇಶ್ ಬಾಬು, ಇದೀಗ ಮತ್ತೋಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ, ಇದೀಗ ಅವರ ಸಾರಥ್ಯದಲ್ಲಿ ಅಪರೂಪ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜುಲೈ 14ರಂದು ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದ್ದು. ಅಪರೂಪ ಸಿನಿಮಾ ಮೂಲಕ ಸುಘೋಷ್‌ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಹೊಸ ರೀತಿಯ ಪ್ರೇಮಕಥೆಯಾಗಿರುವ ಅಪರೂಪ ಸಿನಿಮಾದಲ್ಲಿ ನಾಯಕ ನಾಯಕಿಯ ನಡುವೆ ಬರುವ ಅಹಂ ವಿಲನ್‌ ಆಗುತ್ತದೆ. ಅದರಿಂದ ಏನೇನು ತೊಂದರೆ ಉಂಟಾಗುತ್ತದೆ ಅನ್ನೋದು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಾಯಕ ಸುಘೋಷ್ ಮೂಲತಃ ಮಂಡ್ಯದವರು. ಚಿಕ್ಕಂದಿನಿಂದಲೇ ಸಿನಿಮಾ‌ ಕನಸು ಕಟ್ಟಿಕೊಂಡವರು. ಮಹೇಶ್ ನಿರ್ದೇಶನದ ಅತಿರಥ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರ ನಟನೆ ನೋಡಿ ಅಪರೂಪ ಸಿನಿಮಾಗೆ ನಾಯಕರನಾಗಿ ನಟಿಸುವ ಅವಕಾಶ ನೀಡಿದ್ದಾರೆ. ನೃತ್ಯದಲ್ಲಿಯೂ ಪರಿಣಿತರಾಗಿರುವ ಸುಘೋಷ್, ಕಷ್ಟಕರವಾದ ಸ್ಟೆಪ್ಸ್ ಗಳನ್ನು ಸರಾಗವಾಗಿ ಮಾಡಬಲ್ಲರು. ಅವರು ಹೆಜ್ಜೆ ಹಾಕಿರುವ ‘ಲವ್ ಗೆ ನೋ ನೋ’ ಎಂಬ ಹಾಡು ಈಗಾಗಲೇ ಸಖತ್ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಾಯಕಿ ಹೃತಿಕಾ ತೆಲುಗಿನ ಖ್ಯಾತ ನಟಿ ಅಮನಿ ಸಹೋದರನ ಪುತ್ರಿ. ವಿಷ್ಣುವರ್ಧನ್ ನಟನೆಯ ಅಪ್ಪಾಜಿ ಚಿತ್ರದಲ್ಲಿ ಅಮನಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಅಶೋಕ್ , ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್ , ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ‌ ಚಂದ್ರು, ಮೋಹನ್ ಜುನೇಜಾ ಅಪರೂಪ ಸಿನಿಮಾದ ಭಾಗವಾಗಿದ್ದಾರೆ. ಪ್ರಜ್ವಲ್‌ ಪೈ ಸಂಗೀತ ಹಾಡುಗಳಿಗೆ ಅರ್ಮನ್ ಮಲ್ಲಿಕ್, ಅನಿರುದ್ಧ್ ಶಾಸ್ತ್ರೀ, ಸಂಗೀತ ರವೀಂದ್ರನಾಥ್, ಪ್ರಜ್ವಲ್ ಪೈ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸೂರ್ಯಕಾಂತ್‌ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ತಯಾರಾಗಿರುವ ಅಪರೂಪ ಸಿನಿಮಾವನ್ನು ಕೆಆರ್ ಜಿ ಸ್ಟುಡಿಯೋಸ್ ರಾಜ್ಯಾದ್ಯಂತ ವಿತರಣೆ ಮಾಡಲಿದೆ.

Tags: kannada new moviemahesh babusandalwood
Previous Post

ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ- ಭಾಗ 2

Next Post

ರಾಜ್ಯ ಬಿಜೆಪಿಯಲ್ಲಿ ಮುಂದುವರಿದ ಬಣ ಬಡಿದಾಟ..!?

Related Posts

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ
ಸಿನಿಮಾ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

by ಪ್ರತಿಧ್ವನಿ
April 14, 2026
0

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ ಸೆನ್ಸಾರ್ ಸಂಬಂಧಿತ ಅಡಚಣೆಗಳು ಎದುರಾಗಿದ್ದು, ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂಬ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post
ರಾಜ್ಯ ಬಿಜೆಪಿಯಲ್ಲಿ ಮುಂದುವರಿದ ಬಣ ಬಡಿದಾಟ..!?

ರಾಜ್ಯ ಬಿಜೆಪಿಯಲ್ಲಿ ಮುಂದುವರಿದ ಬಣ ಬಡಿದಾಟ..!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada