ವಿಧಾನಸಭೆ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಹೊರಬಾರದ ರಾಜ್ಯ ಬಿಜೆಪಿ ನಾಯಕರು.ಸೋಲಿಗೆ ಕಾರಣಗಳನ್ನ ಹುಡುಕುತ್ತಿದ್ದು, ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಮುಂದುವರಿದಿದೆ ಎನ್ನಲಾಗಿದೆ, ಇದೀಗ ಸದ್ಯದ ಮಟ್ಟಿಗೆ ಬಿಜೆಪಿಯ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಹೀಗಾಗಿ ಹೇಗಾದರು ಮಾಡಿ ರಾಜ್ಯ ಬಿಜಪಿಯ ಆಂತರಿಕ ಕಚ್ಚಾಟವನ್ನ ತಡೆಯುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಪರದಾಡುತ್ತಿದೆ ಎನ್ನಲಾಗುತ್ತಿದೆ.

ಇನ್ನು ಕೆಲ ದಿನಗಳ ಹಿಂದೆ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಹೊಂದಾಣಿಕೆ ರಾಜಕೀಯ, ಇದೀಗ ಕೇಸರಿ ಕಲಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದ್ದು ಒಬ್ಬರ ಮೇಲೋಬ್ಬರು ಕೆಸರೆರಿಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹಿರಿಯ ನಾಯಕರ ಸಮ್ಮುಖದಲ್ಲೇ ಕಮಲ ಕಲಿಗಳು ಪರಸ್ಪರ ಕಚ್ಚಾಡುತ್ತಿರುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸುತ್ತಿರುವ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲೇ ಆಕ್ರೋಶ ಭುಗುಲೇಳುತ್ತಿದ್ದು, ಬಿಜೆಪಿ ನಾಯಕರ ನಡೆಗೆ ಇದೀಗ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು ಬರುವ ಸೋಮವಾರದಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ರೂ, ಇನ್ನೂ ಕೂಡ ಪ್ರತಿಪಕ್ಷ ನಾಯಕನನ್ನ ರಾಜ್ಯ ಬಿಜೆಪಿ ನಾಯಕರು ಆಯ್ಕೆ ಮಾಡಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ವಿರೋಧ ಪಕ್ಷದ ನಾಯಕನನ್ನ ನೇಮಕ ಮಾಡದೇ ನಗೆಪಾಟಲಿಗೀಡಾಗಿರುವ ಬಿಜೆಪಿ, ಮುಂದಿನ ದಿನಗಳಲ್ಲಿ ಯಾವ ರೀತಿಯಾದ ನಡೆಯನ್ ಅನುಸರಿಸ ಬೇಕು ಎಂಬ ದಾರಿ ಕಾಣದೆ ಕಂಗಾಲಾಗಿದೆ ಎಂಬ ಅಭಿಪ್ರಾಯವನ್ನ ರಾಜ್ಯ ಬಿಜೆಪಿ ನಾಯಕರು ಹೊರ ಹಾಕುತ್ತಿದ್ದಾರೆ.






