ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಗೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರು ಲೋಕಸಭೆಯಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ಕಳೆದ ವಾರ ರಾಹುಲ್ ಗಾಂಧಿ ಅವರು ಮಾಡಿದ್ದ ‘ಎರಡು ಭಾರತ’ ಎಂಬ ಭಾಷಣ ಉಲ್ಲೇಖಿಸಿ ಸಂಸದ ತೇಜಸ್ವಿ ಸೂರ್ಯ ರಾಹುಲ್ ಗಾಂಧಿ ವಿರುದ್ಧ ಕುಟುಂಬ ರಾಜಕಾರಣದ ಹೆಸರಿನಲ್ಲಿ ಮುಗಿ ಬಿದ್ದಿದ್ದರು.
“ಕಾಂಗ್ರೆಸ್ ಮತ್ತು ಅದರ ಕುಟುಂಬ ರಾಜಕಾರಣದ ನಾಯಕರು ತಮ್ಮ ರಾಜಕೀಯ ನಿರುದ್ಯೋಗವನ್ನು ದೇಶದ ನಿರುದ್ಯೋಗ ಎಂದು ಬಿಂಬಿಸುತ್ತಿದ್ದಾರೆ. ಈ ದೇಶದಲ್ಲಿ ನಿರುದ್ಯೋಗಿಯೊಬ್ಬರು ಇದ್ದರೆ ಅದು ಕಾಂಗ್ರೆಸ್ ಪಕ್ಷದ ಯುವರಾಜ ಮತ್ತು ಕಾಂಗ್ರೆಸ್ ಪಕ್ಷದ ವಂಶಸ್ಥರು” ಎಂದು ತೇಜಸ್ವಿ ಸೂರ್ಯ ಲೋಕಸಭೆಯಲ್ಲಿ ಹೇಳಿದ್ದರು.
ಇದನ್ನು ಉಲ್ಲೇಖಿಸಿ ಮಾತನಾಡಿದ ಸುಪ್ರಿಯಾ ಸುಲೆ, ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಹಾಗೂ ತೇಜಸ್ವಿ ಸೂರ್ಯ ಅವರ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾರೆ. ತೇಜಸ್ವಿ ಸೂರ್ಯ ಅವರು ಬೆಂಗಳೂರು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸೋದರ ಸಂಬಂಧಿಯಾಗಿದ್ದಾರೆ. ಮಾತ್ರವಲ್ಲದೆ, ಪ್ರೀತಮ್ ಮುಂಡೆ, ಪೂನಂ ಮಹಾಜನ್, ಹೀನಾ ಗಾವಿತ್, ರಕ್ಷಾ ಖಡ್ಸೆ, ಸುಜಯ್ ವಿಖೆ ಪಾಟೀಲ್ ಸೇರಿದಂತೆ ರಾಜಕೀಯ ಕುಟುಂಬಗಳಿಗೆ ಸೇರಿದ ಹಲವು ಬಿಜೆಪಿ ನಾಯಕರ ಹೆಸರನ್ನು ಸುಪ್ರಿಯಾ ಉಲ್ಲೇಖಿಸಿದ್ದಾರೆ.
“ರವಿ ಸುಬ್ರಹ್ಮಣ್ಯ ಕರ್ನಾಟಕದ ಬಿಜೆಪಿ ಶಾಸಕ. ನಾನು ತೇಜಸ್ವಿ ಸೂರ್ಯ ಅವರನ್ನು ಕೇಳಲು ಬಯಸುತ್ತೇನೆ, ಅವರಿಗೆ ರವಿ ಸುಬ್ರಹ್ಮಣ್ಯ ಅವರ ಬಗ್ಗೆ ತಿಳಿದಿದೆಯೇ. ಒಂದು ವೇಳೆ ಅವರು ಅವರನ್ನು ತಿಳಿದಿದ್ದರೆ, ಅವರು ಅವರೊಂದಿಗೆ ಯಾವುದೇ ದೂರದ ಸಂಬಂಧ ಹೊಂದಿದ್ದಾರೆಯೇ?” ಸುಪ್ರಿಯಾ ಸುಲೆ ಪ್ರಶ್ನಿಸಿದ್ದಾರೆ.
ರಾಜಕೀಯ ಕುಟುಂಬದಲ್ಲಿ ಹುಟ್ಟಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡ ಸುಪ್ರಿಯಾ, “ನಾವೆಲ್ಲರೂ ರಾಜಕೀಯ ಕುಟುಂಬಗಳಲ್ಲಿ ಹುಟ್ಟಿದ್ದೇವೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ನಾನು ರಾಜಕೀಯ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಯಾರ ಮಗಳು ಎಂಬ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದು ಅವರು ಹೇಳಿದ್ದಾರೆ.
ಸಾಧಾರಣವಾಗಿ, ಬಿಜೆಪಿ ʼಕುಟುಂಬ ರಾಜಕಾರಣʼದ ಹೆಸರು ಹೇಳಿಕೊಂಡೇ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳ ಮೇಲೆ ಮುಗಿ ಬೀಳುತ್ತಿರುತ್ತದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮೇಲೆ, ಕರ್ನಾಟಕದಲ್ಲಿ ಜನತಾ ದಳದ ಮೇಲೆ ಇದೇ ರೀತಿ ಆರೋಪ ಮಾಡುತ್ತಿರುತ್ತದೆ.
2014 ರ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಂತೂ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ, ರಾಹುಲ್ ಗಾಂಧಿಯನ್ನು “ಶೆಹಜಾದಾ” ಎಂದೂ ಆಗಿನ ಯುಪಿಎ ಸರ್ಕಾರವನ್ನು “ದೆಹಲಿ ಸುಲ್ತಾನೇಟ್” ಎಂದು ಉಲ್ಲೇಖಿಸಿ ಗಾಂಧಿ ಕುಟುಂಬವನ್ನು ಲೇವಡಿ ಮಾಡಿದ್ದರು.
“ತಾಯಿ ಮತ್ತು ಮಗನ ಸರ್ಕಾರದಿಂದ ದೇಶವು ನಾಶವಾಗಿದ್ದರೆ, ತಂದೆ-ಮಗನ ಸರ್ಕಾರದಿಂದ ಉತ್ತರ ಪ್ರದೇಶವನ್ನು ನಾಶಪಡಿಸಲಾಗಿದೆ” ಎಂದು ಮೋದಿ ಉತ್ತರ ಪ್ರದೇಶದಲ್ಲಿ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಉದ್ದೇಶಿಸಿ ಹೇಳಿದ್ದರು. ಇದು ಬಿಜೆಪಿಯ ಪ್ರಚಾರದ ಮುಖ್ಯ ಸರಕಾಗಿತ್ತು. ಕುಟುಂಬ ರಾಜಕಾರಣ ಅನ್ನುವ ಆಯುಧವನ್ನು ಪ್ರತಿಪಕ್ಷಗಳ ಮೇಲೆ ಸಮರ್ಪಕವಾಗಿ ಬಳಸಲಾಗುತ್ತಿದೆ.
ಇದೀಗ ಪ್ರತಿಪಕ್ಷಗಳು ಬಿಜೆಪಿಯಲ್ಲಿನ ಕುಟುಂಬ ರಾಜಕಾರಣವನ್ನು ಬೊಟ್ಟು ಮಾಡಲು ಆರಂಭಿಸಿದ್ದು, ಬಿಜೆಪಿ ರೀತಿಯಲ್ಲೇ ಉತ್ತರಿಸಲು ಶುರು ಮಾಡಿದೆ. ಕರ್ನಾಟಕದ ಸಿಎಂ ಬೊಮ್ಮಾಯಿ ಕೂಡಾ ರಾಜಕೀಯ ಕುಟುಂಬ ಹಿನ್ನೆಲೆ ಇರುವವರೇ. ಯಡಿಯೂರಪ್ಪ ಮತ್ತು ಕುಟುಂಬಸ್ಥರ ರಾಜಕಾರಣವಂತೂ ರಾಜ್ಯದ ಜನರಿಗೆ ಗೊತ್ತಿದೆ.
ಇದರ ಹೊರತಾಗಿಯೂ ಬಿಜೆಪಿ ಇತರೆ ಕುಟುಂಬ ರಾಜಕಾರಣಿಗಳ ವಿವರ ಇಂತಿದೆ.
ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವ:- ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಆಗಿರುವ ಸಿಂಧಿಯಾ ಅವರು ಮಾಜಿ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಸಚಿವರಾಗಿದ್ದ ದಿವಂಗತ ಮಾಧವರಾವ್ ಸಿಂಧಿಯಾ ಅವರ ಪುತ್ರ. ಹಾಗೂ ಜನಸಂಘ/ಜನತಾ ಪಕ್ಷ/ಬಿಜೆಪಿ ಕಟ್ಟಾಳು ದಿವಂಗತ ವಿಜಯರಾಜೇ ಸಿಂಧಿಯಾ ಅವರ ಮೊಮ್ಮಗ.
ಅನುರಾಗ್ ಠಾಕೂರ್, ಕೇಂದ್ರ ಸಚಿವ:- ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ರು ಹಿಮಾಚಲ ಪ್ರದೇಶದ ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಮಗ.
ಪಿಯೂಷ್ ಗೋಯಲ್, ಕೇಂದ್ರ ಸಚಿವ:– ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಬಿಜೆಪಿಯ ಮಾಜಿ ರಾಷ್ಟ್ರೀಯ ಖಜಾಂಚಿ ಮತ್ತು ಕೇಂದ್ರ ಸಚಿವ ದಿವಂಗತ ವೇದ್ ಪ್ರಕಾಶ್ ಗೋಯಲ್ ಅವರ ಪುತ್ರ.
ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ:- ಕೇಂದ್ರ ಶಿಕ್ಷಣ ಸಚಿವ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಿಜೆಪಿ ನಾಯಕ ದೇಬೇಂದ್ರ ಪ್ರಧಾನ್ ಅವರ ಪುತ್ರರಾಗಿದ್ದಾರೆ. ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕಿರಣ್ ರಿಜಿಜು, ಕೇಂದ್ರ ಸಚಿವ:- ಅವರು ಇತ್ತೀಚೆಗೆ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು ಮತ್ತು ಅರುಣಾಚಲ ಪ್ರದೇಶದ ಮೊದಲ ಹಂಗಾಮಿ ಸ್ಪೀಕರ್ ಆಗಿದ್ದ ರಿಂಚಿನ್ ಖರು ಅವರ ಪುತ್ರರಾಗಿದ್ದಾರೆ.
ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ:- ನಿರ್ಮಲಾ ಅವರ ಪತಿ ಪರಕಾಲ ಪ್ರಭಾಕರ್ ಅವರು ಕಾಂಗ್ರೆಸ್‌ನಲ್ಲಿದ್ದರು. ಆಂಧ್ರಪ್ರದೇಶದ ನರಸಾಪುರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಫಲರಾದರು.
ಪೆಮಾ ಖಂಡು, ಮುಖ್ಯಮಂತ್ರಿ:- ಪೆಮಾ ಖಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಮತ್ತು ರಾಜ್ಯದ ಮಾಜಿ ಸಿಎಂ ದೋರ್ಜಿ ಖಂಡು ಅವರ ಪುತ್ರ.
ಸುವೆಂದು ಅಧಿಕಾರಿ:- ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸುವೆಂದು ಮಾಜಿ ಸಚಿವ ಮತ್ತು ಸಂಸದ ಸಿಸಿರ್ ಅಧಿಕಾರಿ ಅವರ ಪುತ್ರ.
ದೇವೇಂದ್ರ ಫಡ್ನವೀಸ್:_ ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕ ಫಡ್ನವೀಸ್ ಮಹಾರಾಷ್ಟ್ರದ ಮಾಜಿ ಸಿಎಂ ಮಹಾರಾಷ್ಟ್ರ, ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಗಂಗಾಧರಪಂತ್ ಫಡ್ನವೀಸ್ ಅವರ ಪುತ್ರ. ದೇವೇಂದ್ರ ಅವರ ಚಿಕ್ಕಮ್ಮ ಶೋಬಾ ಫಡ್ನವಿಸ್ ರಾಜ್ಯ ಸಚಿವರಾಗಿದ್ದರು.
ವಿವೇಕ್ ಠಾಕೂರ್, ಸಂಸದ:- ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಸಿ.ಪಿ. ಠಾಕೂರ್ ಅವರ ಪುತ್ರ.
ಇನ್ನು ಬಿಜೆಪಿ ಸಂಸದರಾಗಿರುವ ನೀರಜ್ ಶೇಖರ್, ನಬಮ್ ರೆಬಿಯಾ, ಪರ್ವೇಶ್ ವರ್ಮಾ, ದುಷ್ಯಂತ್ ಸಿಂಗ್, ಪೂನಂ ಮಹಾಜನ್, ಜಯಂತ್ ಸಿನ್ಹಾ, ವರುಣ್ ಗಾಂಧಿ, ಹೀನಾ ಗಾವಿತ್, ಸನ್ನಿ ಡಿಯೋಲ್, ರೀಟಾ ಬಹುಗುಣ ಜೋಶಿ, ದಿಯಾ ಕುಮಾರಿ, ಸಂಗೀತಾ ಸಿಂಗ್ ದೇವು, ಪ್ರೀತಮ್ ಮುಂಡೆ, ಪಂಕಜ್ ಸಿಂಗ್ ಮೊದಲಾದವರಿಗೆ ರಾಜಕೀಯ ಕುಟುಂಬದ ಇತಿಹಾಸವಿದೆ.