ಉಪಸಮರದಲ್ಲಿ ಮಾತಿನ ಕಿಚ್ಚು ಹಚ್ಚಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅದ್ಯಾಕೋ ಮೌನಕ್ಕೆ ಶರಣಾಗಿದ್ದಾರೆ. ಯಾರ ವಿರುದ್ಧವೂ ಮಾತನಾಡಲ್ಲ ಅಂತಿದ್ದಾರೆ. ಟೀಕೆಗಳಿಂದ ಮತ ಸೆಳೆಯಲು ಸಾಧ್ಯವಿಲ್ಲ ಎಂದು ಅರಿತಿರೋ ಕುಮಾರಸ್ವಾಮಿ ಏಕಾಏಕಿ ಮೌನಮುನಿಯಾಗಿದ್ದಾರೆ.
ಮಾತು ಮನೆ ಕೆಡಿಸಿದ್ದಾಯ್ತು, ಉಪ ಚುನಾವಣೆಯಲ್ಲಿ ಠೇವಣಿ ಜಪ್ತಿ ಆಗಿದ್ದು ಆಯ್ತು. ಈ ಎಲ್ಲಾ ಪರಿಣಾಮಗಳು ದಳಪತಿಗೆ ಸೋಲಿನ ಪಾಠ ಕಲಿಸಿದೆ. ಕುಮಾರಸ್ವಾಮಿ ಏಕಾಏಕಿ ಮೌನಧಾರಣ ಮಾಡಿದ್ದಾರೆ. ಯಾರ ವಿರುದ್ಧವೂ ಮಾತನಾಡಲ್ಲ ಅಂತ ಸದ್ಯಕ್ಕೆ ಶಪಥ ಮಾಡಿದ್ದಾರೆ.
ಹೌದು, ಮಾತು ಮನೆ ಕೆಡಿಸಿತು. ತೂತು ಒಲೆ ಕೆಡಿಸಿತು. ಇದು ಕನ್ನಡ ಪ್ರಸಿದ್ಧ ಗಾದೆ. ಸದ್ಯಕ್ಕೆ ಈ ಗಾದೆ ಕುಮಾರಸ್ವಾಮಿಗೆ ಹೇಳಿ ಮಾಡಿಸಿದಂತಿದೆ. ಮಾತಿನ ಸಂಘರ್ಷ ಚುನಾವಣೆಯಲ್ಲಿ ಜೆಡಿಎಸ್ ಅನ್ನು ತಳಕಾಣಿಸಿದೆ. ಎರಡೂ ಕ್ಷೇತ್ರಗಳಲ್ಲಿ ಠೇವಣಿ ಜಪ್ತಿಯಾಗಿ ದಳಪತಿ ಘೋರ ಮುಖಭಂಗ ಅನುಭವಿಸಿದ್ದಾರೆ. ಈ ಅವಮಾನ ದಳಪತಿಯನ್ನು ಮಹಾಮೌನಕ್ಕೆ ಜಾರುವಂತೆ ಮಾಡಿದೆ.
ಉಪ ಚುನಾವಣೆಯ ಸೋಲಿನ ಬಳಿಕ ದಳಪತಿ ಸೈಲೆಂಟ್ ಆಗ್ತಿದ್ದಾರೆ. ಸೋಲಿನಿಂದ ಮಾಜಿ ಸಿಎಂ ಕುಮಾರಸ್ವಾಮಿ ಪಾಠ ಕಲಿತಂತಿದೆ. ಟೀಕೆ ಟಿಪ್ಪಣಿಗಳಿಂದ ಮತ ಸೆಳೆಯಲು ಸಾಧ್ಯವಿಲ್ಲ ಅನ್ನೋದು ದಳಪತಿಗೆ ಅರಿವಾದಂತಿದೆ. ಇದಕ್ಕೆ ಕಾರಣಗಳು ಹೀಗಿವೆ..
ದಳಪತಿಗೆ ಜ್ಞಾನೋದಯ!
ಕಾರಣ 1 : ವ್ಯಕ್ತಿ, ಪಕ್ಷ ಸಂಘಟನೆಗಳ ಬಗ್ಗೆ ಮಾತನಾಡೋದು ಬೇಡ
ಕಾರಣ 2 : ಟೀಕೆಗಳಿಂದ ಸಂಘಟನೆ ಮೇಲೆ ಪ್ರತಿಕೂಲ ಪರಿಣಾಮ
ಕಾರಣ 3 : ಜೆಡಿಎಸ್ನ ಮಹತ್ವಾಕಾಂಕ್ಷಿ ಮಿಷನ್ – 123ಗೆ ಹೊಡೆತ
ಕಾರಣ 4 : ಸಂಘಟನೆ ಬಗ್ಗೆ ಮಾತನಾಡಿದರೆ, ಕಾರ್ಯಕರ್ತರು ದೂರ
ಕಾರಣ 5 : ಟೀಕೆ – ಟಿಪ್ಪಣಿಗಳಿಂದ ಪಕ್ಷಕ್ಕೆ ಯಾವ ಪ್ರಯೋಜನ ಇಲ್ಲ
ಕಾರಣ 6 : ಜನರ ಭಾವನಾತ್ಮಕ ನಂಬಿಕೆಗೆ ಘಾಸಿ ಮಾಡೋದು ಬೇಡ
ಕಾರಣ 7 : ತಮ್ಮ ಟೀಕೆ – ಟಿಪ್ಪಣಿಗಳು ಎದುರಾಳಿಗಳಿಗೆ ಲಾಭ ಆಗ್ತಿದೆ
ಕಾರಣ 8 : ಮತಗಳ ಕ್ರೋಢೀಕರಣಕ್ಕೆ ಮಾತಿನ ಜಗಳ ಮಾರಕವಾಗ್ತಿದೆ
ವ್ಯಕ್ತಿ, ಪಕ್ಷ ಸಂಘಟನೆಗಳ ಬಗ್ಗೆ ಮಾತನಾಡೋದು ಬೇಡ. ಈ ಟೀಕೆಗಳಿಂದ ಸಂಘಟನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಜೆಡಿಎಸ್ನ ಮಹತ್ವಾಕಾಂಕ್ಷಿ ಮಿಷನ್ – 123ಗೆ ಹೊಡೆತ ಬೀಳುತ್ತೆ ಅಂತ ಹೆಚ್ಡಿಕೆಗೆ ಜ್ಞಾನೋದಯವಾಗಿದೆ. ಸಂಘಪರಿವಾರದ ಬಗ್ಗೆ ಮಾತನಾಡಿದರೆ, ಕಾರ್ಯಕರ್ತರು ದೂರವಾಗುವ ಭಯ ಆವರಿಸಿದೆ.
ಇನ್ನು, ಜನರ ಭಾವನಾತ್ಮಕ ನಂಬಿಕೆಗೆ ಘಾಸಿ ಮಾಡೋದು ಬೇಡ, ತಮ್ಮ ಟೀಕೆ – ಟಿಪ್ಪಣಿಗಳು ಎದುರಾಳಿಗಳಿಗೆ ಲಾಭ ಆಗ್ತಿದೆ. ಮತಗಳ ಕ್ರೋಢೀಕರಣಕ್ಕೆ ಮಾತಿನ ಜಗಳ ಮಾರಕವಾಗ್ತಿದೆ ಅಂತ ಹೆಚ್ಡಿಕೆ ಕಡೆಗೂ ಪಾಠ ಕಲಿತಿದ್ದಾರೆ.
ಒಟ್ನಲ್ಲಿ ಎರಡೂ ಬೈ ಎಲೆಕ್ಷನ್ನಲ್ಲಿ ಸುಖಾಸುಮ್ಮನೆ ಮಾತಾಡಿ ಠೇವಣಿ ಕಳೆದುಕೊಂಡ ದಳಪತಿಗೆ ತಾನು ಮಾಡಿದ ತಪ್ಪಿನ ಅರಿವಾದಂತಿದೆ. ಮತ್ತೆ ಅದನ್ನೇ ಮುಂದುವರೆಸಿದ್ರೆ ಮಿಷನ್-123ಗೆ ಭಾರೀ ಪೆಟ್ಟು ಬೀಳುತ್ತೆ ಅನ್ನೋ ಜ್ಞಾನೋದಯವಾಗಿದೆ. ಹೀಗಾಗಿಯೇ ಹೆಚ್ಡಿಕೆ ಯಾರ ವಿರುದ್ಧವೂ ಮಾತನಾಡಲ್ಲ ಅಂತ ಹೇಳೋ ಮೂಲಕ ಮೌನಮುನಿಯಾಗಿದ್ದಾರೆ.