ಸ್ವಿಸ್ ಬ್ಯಾಂಕ್ ಅಂದಾಕ್ಷಣ ನೆನಪಾಗೋದೇ ಬ್ಲಾಕ್ ಮನಿ, ಶ್ರೀಮಂತರು ಅಡಗಿಸಿಟ್ಟ ಹಣ. ಈ ಬ್ಯಾಂಕ್ನಲ್ಲಿ ಭಾರತೀಯರು ಅಪಾರ ಪ್ರಮಾಣದಲ್ಲಿ ಕಪ್ಪು ಹಣ ಇರಿಸಿರುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೆ ಈಗ ಕಪ್ಪು ಕುಳಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸ್ವಿಸ್ ಬ್ಯಾಂಕ್ ಮುಂದಾಗಿದೆ. ಈ ತಿಂಗಳಾಂತ್ಯಕ್ಕೆ ಕಳ್ಳ ಹಣದ ಪಕ್ಕ ಲೆಕ್ಕಾ ಭಾರತದ ಕೈ ಸೇರಲಿದೆ.
ಹೌದು, ಸ್ವಿಸ್ ಬ್ಯಾಂಕ್ ಅನ್ನ ತೆರಿಗೆ ಕಳ್ಳರ ಸ್ವರ್ಗ ಅಂತ ಕರೆಯಲಾಗುತ್ತೆ. ಅತಿ ಹೆಚ್ಚು ಭದ್ರತೆ ನೀಡುವ ಬ್ಯಾಂಕ್ ಇದಾಗಿದ್ದು, ತಮ್ಮ ಗ್ರಾಹಕರ ಹಣ ಹಾಗೂ ಗ್ರಾಹಕರ ವಿವರಗಳಿಗೆ ಹೆಚ್ಚಿನ ರಕ್ಷಣೆ ನೀಡುತ್ತೆ. ಇದೇ ಕಾರಣಕ್ಕೆ ಜಗತ್ತಿನಾದ್ಯಂತ ಹಲವು ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಅನೇಕರು ಈ ಬ್ಯಾಂಕ್ನಲ್ಲಿ ಖಾತೆ ತೆರೆಯುತ್ತಾರೆ. ಹಾಗೇನೇ ಭಾರತದ ಅನೇಕ ಉದ್ಯಮಿಗಳು, ರಾಜಕಾರಣಿಗಳು, ಮತ್ತು ಸೆಲೆಬ್ರೆಟಿಗಳು ಕೂಡ ಖಾತೆ ತೆರೆದಿದ್ದರು. ಆದ್ರೆ ಈಗ ಕಪ್ಪು ಕುಳಗಳಿಗೆ ಸ್ವಿಸ್ ಬ್ಯಾಂಕ್ ಶಾಕ್ ನೀಡಿದೆ. ತನ್ನ ಗ್ರಾಹಕ ಮಾಹಿತಿಯನ್ನು ಭಾರತದೊಂದಿದೆ ಹಂಚಿಕೊಳ್ಳಲು ಒಪ್ಪಿಕೊಂಡಿದೆ.
ಸ್ವಿಟ್ಜರ್ಲೆಂಡ್ನೊಂದಿಗೆ ಭಾರತ ಮಾಡಿಕೊಂಡ ಒಪ್ಪಂದದ ಪ್ರಕಾರ ಭಾರತೀಯರ ಖಾತೆ ವಿವರವನ್ನು ನೀಡಲು ಸ್ವಿಸ್ ಬ್ಯಾಂಕ್ ಒಪ್ಪಿಕೊಂಡಿದೆ. ಅದರಂತೆ ತೆರಿಗೆ ವಂಚಕರ ಮೂರನೇ ಪಟ್ಟಿ ಈ ತಿಂಗಳಾಂತ್ಯಕ್ಕೆ ಭಾರತದ ಕೈ ಸೇರಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಸ್ವಿಟ್ಜರ್ಲ್ಯಾಂಡ್ನಲ್ಲಿರುವ ಭಾರತೀಯರ ಮಾಲೀಕತ್ವದ ಫ್ಲಾಟ್ಗಳು, ಅಪಾರ್ಟ್ಮೆಂಟ್ಗಳು ಮತ್ತು ಮನೆಗಳ ಸಂಪೂರ್ಣ ವಿವರ ಕೂಡ ಲಭ್ಯವಾಗಲಿದೆ.
ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರು ಇಟ್ಟಿರುವ ಹಣವೆಷ್ಟು?
- ಸ್ವಿಸ್ ಬ್ಯಾಂಕ್ನಲ್ಲಿ 2006ರಲ್ಲಿದ್ದ ಹಣ 23,000 ಕೋಟಿ
- 2019ರಲ್ಲಿ ಭಾರತೀಯ ಹಣ 6,625 ಕೋಟಿಗೆ ಕುಸಿದಿತ್ತು
- 2020ರಲ್ಲಿ ಬರೋಬ್ಬರಿ 20,700 ಕೋಟಿಗೆ ತಲುಪಿದ ಹಣ
- ಹೆಚ್ಚು ಠೇವಣಿ ಇಟ್ಟಿರುವ ದೇಶಗಳ ಪೈಕಿ ಭಾರತ 51ನೇ ಸ್ಥಾನ
ಸ್ವಿಸ್ ಬ್ಯಾಂಕ್ನಲ್ಲಿ 2006ರ ವೇಳೆ ಸುಮಾರು 23,000 ಸಾವಿರ ಕೋಟಿಯಷ್ಟು ಭಾರತೀಯರ ಠೇವಣಿ ಹಣ ಪತ್ತೆಯಾಗಿದ್ದು, ಇದು ಆವರೆಗಿನ ಗರಿಷ್ಠ ಮೊತ್ತವಾಗಿತ್ತು. ಆದ್ರೆ ನಂತರದ ವರ್ಷಗಳಲ್ಲಿ ಇದು ಇಳಿಕೆಯ ಹಾದಿಯಲ್ಲಿ ಸಾಗಿದ್ದು, 2019ರ ವೇಳೆಗೆ ಸ್ವಿಜ್ ಬ್ಯಾಂಕ್ನಲ್ಲಿ ಇಡಲಾಗಿದ್ದ ಭಾರತೀಯರ ಹಣ 6,625 ಕೋಟಿಗೆ ಕುಸಿದಿತ್ತು. 2020ರಲ್ಲಿ ಸ್ವಿಜ್ ಬ್ಯಾಂಕ್ನಲ್ಲಿ ಭಾರತೀಯರು ಇಟ್ಟಿರುವ ಹಣ ಬರೋಬ್ಬರಿ 20,700 ಕೋಟಿಗೆ ತಲುಪಿದೆ ಎಂದು ಸ್ವತಃ ಸ್ವಿಜ್ ಬ್ಯಾಂಕ್ ತಿಳಿಸಿದೆ.
ಸ್ವಿಸ್ ಬ್ಯಾಂಕ್ನಲ್ಲಿರುವ ಭಾರತೀಯರ 20,700 ಕೋಟಿ ಠೇವಣಿ ಹಣ ಯಾವ ಮಾದರಿಯದ್ದು?
- ಬಾಂಡ್, ಸೆಕ್ಯುರಿಟೀಸ್ 13500 ಕೋಟಿ ರೂಪಾಯಿ
- ವೈಯಕ್ತಿಕ ಹಣ 4000 ಕೋಟಿ ರೂಪಾಯಿ
- ಇತರೆ ಬ್ಯಾಂಕ್ ಠೇವಣಿ 3,100 ಕೋಟಿ ರುಪಾಯಿ
- ಟ್ರಸ್ಟ್ಗಳ ಹೆಸರಲ್ಲಿ 16.5 ಕೋಟಿ ರೂಪಾಯಿ
ಭಾರತ ಮೂಲದ 20,700 ಕೋಟಿ ರೂಪಾಯಿ ಠೇವಣಿಯಲ್ಲಿ ಬಾಂಡ್ ಹಾಗೂ ಸೆಕ್ಯೂರಿಟೀಸ್ ರೂಪದಲ್ಲಿ ಶೇಕಡಾ 13,500 ರೂಪಾಯಿಯಷ್ಟಿದೆ. ಇನ್ನು ವೈಯಕ್ತಿಕ ಹಣ ಶೇಕಡಾ 4000 ಸಾವಿರ ಕೋಟಿ ರೂಪಾಯಿಯಷ್ಟಿದೆ. ಇತರೆ ಬ್ಯಾಂಕ್ ಠೇವಣಿ ರೂಪದಲ್ಲಿ ಶೇಕಡಾ 31,000 ಕೋಟಿ ರೂಪಾಯಿಯಷ್ಟಿದೆ. ಇನ್ನು ಟ್ರಸ್ಟ್ಗಳ ಹೆಸರಿನಲ್ಲಿ ಶೇಕಡಾ 16.5 ಕೋಟಿಯಷ್ಟಿದೆ.
ಇಷ್ಟು ದಿನ ರಹಸ್ಯವಾಗಿದ್ದ ಕಪ್ಪು ಕುಳಗಳ ಜಾತಕ ಭಾರತದ ಕೈ ಸೇರಲಿದೆ. ಅದರಲ್ಲಿ ಅದೆಷ್ಟೂ ತೆರಿಗೆ ವಂಚನೆಯ ಹಣವಿದ್ಯೋ, ಎಷ್ಟು ವೈಟ್ ಮನಿ ಇದಿಯೋ ಎನ್ನುವುದು ಪಟ್ಟಿ ಕೈ ಸೇರಿದ ಮೇಲೆ ತಿಳಿಯಲಿದೆ. ಆದ್ರೆ ಸ್ವಿಸ್ ಬ್ಯಾಂಕ್ ನಿರ್ಧಾರ ಮಾತ್ರ ಈಗ ತೆರಿಗೆ ವಂಚಕರ ನಿದ್ದೆಗೆಡಿಸಿದ್ದಂತು ಸುಳ್ಳಲ್ಲ.
Watch Live Video : 10 ದಿನಗಳ ವಿಧಾನ ಮಂಡಲ ಅಧಿವೇಶನ : ಅಧಿವೇಶನದ ಮೊದಲನೇ ದಿನದ ಕಲಾಪ ಲೈವ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ