• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಸೆ.13ಕ್ಕೆ ಜಂಟಿ ಅಧಿವೇಶನ; ಸರ್ಕಾರವನ್ನು ಹಣಿಯಲು ಮುಂದಾದ ವಿಪಕ್ಷಗಳು; ಬೊಮ್ಮಾಯಿಗೆ ಸಾಲು ಸಾಲು ಸವಾಲುಗಳು

ನಚಿಕೇತು by ನಚಿಕೇತು
September 11, 2021
in ಕರ್ನಾಟಕ
0
ಆಗಸ್ಟ್ 23 ರಿಂದ 9 – 12ನೇ ತರಗತಿಗಳು ಆರಂಭ, ರಾಜ್ಯಾದ್ಯಂತ ನೈಟ್ ಕರ್ಫ್ಯೂ‌ ಜಾರಿ: ಸಿಎಂ  ಬೊಮ್ಮಾಯಿ
Share on WhatsAppShare on FacebookShare on Telegram

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೆಹಲಿ ಪ್ರವಾಸ ಮುಗಿಸಿಕೊಂಡು ಕರ್ನಾಟಕಕ್ಕೆ ವಾಪಸ್ಸಾಗಿದೆ. ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರೊಂದಿಗೆ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದರು. ಒಂದೆಡೆ ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಬಸವರಾಜ್ ಬೊಮ್ಮಾಯಿ ಭಾರೀ ಸರ್ಕಸ್ ನಡೆಸುತ್ತಿದ್ದಾರೆ. ಈ ಮಧ್ಯೆ ಬೊಮ್ಮಾಯಿಗೆ ಮತ್ತೊಂದು ಸವಾಲು ಎದುರಾಗಿದೆ. ಅದುವೇ ವಿಧಾನಮಂಡಲ ಅಧಿವೇಶನ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರವನ್ನ ಹಣಿಯಲು ಎಲ್ಲಾ ರೀತಿಯ ಅಸ್ತ್ರಗಳನ್ನ ಈಗಿನಿಂದಲೇ ಮಸಿಯುತ್ತಿವೆ. ಹೀಗಾಗಿ ಸಿಎಂಗೆ ಕಠಿಣ ಸವಾಲುಗಳು ಎದುರಾಗೋದು ಪಕ್ಕಾ ಎನ್ನಬಹುದು.

ADVERTISEMENT

ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಸೆಪ್ಟಂಬರ್ 13ರಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಈ ವೇಳೆ ವಿಪಕ್ಷ ನಾಯಕರು ಸಿಎಂ ಮತ್ತು ಸಚಿವರನ್ನ ಇಕ್ಕಟ್ಟಿಗೆ ಸಿಲುಕಿಸಲು ಭಾರೀ ರಣತಂತ್ರಗಳನ್ನ ಹೆಣೆಯುತ್ತಿವೆ. ಬೊಮ್ಮಾಯಿ ಸಿಎಂ ಆದ ಬಳಿಕ ಎದುರಾದ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಸರ್ಕಾರಕ್ಕೆ ಚಾಟಿ ಬೀಸಲು ಸಜ್ಜಾಗಿವೆ. ಹೀಗಾಗಿ ಅಧಿವೇಶನದತ್ತ ನಿಗಾವಹಿಸಲು ಸಿಎಂ ಬೊಮ್ಮಾಯಿ ಸಜ್ಜಾಗಿದ್ದಾರೆ.

ವಿಧಾನಮಂಡಲ ಅಧಿವೇಶದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ ಸಾಲು ಸಾಲು ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತವರ ತಂಡ ಈಗಾಗಲೇ ವಿಪಕ್ಷಗಳ ಬಾಣದಿಂದ ತಪ್ಪಿಸಿಕೊಳ್ಳಲು ರಕ್ಷಾ ಕವಚಗಳನ್ನ ಸಿದ್ಧಗೊಳಿಸಿಕೊಳ್ಳುತ್ತಿದೆ. ಜೊತೆಗೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು, ಪ್ರತಿಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ಕೊಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ.

ಸಿಎಂಗೆ ‘ಸದನ’ ಸವಾಲು

1 ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ವಿಚಾರ
2 ಸಂಪುಟ ರಚನೆಯ ಸಂದರ್ಭದಲ್ಲಾದ ಗೊಂದಲ
3 ಖಾತೆ ಹಂಚಿಕೆಯ ವೇಳೆ ಕೆಲ ಸಚಿವರ ಬಂಡಾಯ
4 ಸಂಪುಟದಲ್ಲಿ ಸ್ಥಾನಮಾನ ಬೇಡ ಎಂದಿದ್ದ ಶೆಟ್ಟರ್ ವಿಚಾರ
5 ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದ ಮಾಜಿ‌ ಸಿಎಂ ನಡೆ
6 ಭ್ರಷ್ಟಾಚಾರದ ಆರೋಪ ಹೊತ್ತ ಜೊಲ್ಲೆಗೆ ಸ್ಥಾನಮಾನ
7 ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಪ್ರಕರಣ
8 ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಇಲ್ಲದೇ ಇರುವ ಆರೋಪ

ರಾಜ್ಯದಲ್ಲಿ ನಡೆದ ನಾಯಕತ್ವ ಬದಲಾವಣೆ ವಿಚಾರವೇ ಸಿಎಂಗೆ ಮೊದಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಜೊತೆಗೆ ಸಂಪುಟ ರಚನೆಯ ಸಂದರ್ಭದಲ್ಲಾದ ಗೊಂದಲಗಳು. ಖಾತೆ ಹಂಚಿಕೆಯ ವೇಳೆ ಕೆಲ ಸಚಿವರ ಬಂಡಾಯ ಇದು ಮತ್ತೊಂದು ಬಗೆಯ ಸವಾಲಾಗಿ ಸಿಎಂಗೆ ಎದುರಾಗಲಿದೆ.

ಇನ್ನು ಸಂಪುಟದಲ್ಲಿ ಸ್ಥಾನಮಾನ ಬೇಡ ಎಂದಿದ್ದ ಶೆಟ್ಟರ್ ವಿಚಾರ ಕೂಡಾ ಸದನದಲ್ಲಿ ಸಿಡಿದೇಳುವ ಸಾಧ್ಯತೆ ಇದೆ. ಇದೆಲ್ಲದ ಮಧ್ಯೆ ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದ ಮಾಜಿ‌ ಸಿಎಂ ಯಡಿಯೂರಪ್ಪ ನಡೆಯನ್ನೂ ಕೂಡಾ ವಿಪಕ್ಷಗಳು ಸದನದಲ್ಲಿ ಎಳೆದು ತರುವ ಸಾಧ್ಯತೆ ಇದೆ.

ಈ ಮಧ್ಯೆ ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಆರೋಪ, ಕಳಂಕಿತ ಸಚಿವೆಗೆ ಮತ್ತೆ ಸಚಿವ ಸ್ಥಾನ ನೀಡಿದ್ದು ಕೂಡಾ ಭಾರೀ ಸದ್ದು ಮಾಡೋದು ಪಕ್ಕಾ ಎನ್ನುವಂತಾಗಿದೆ. ಜೊತೆಗೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನೇ ಇಟ್ಟುಕೊಂಡು ವಿಪಕ್ಷಗಳು ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಇಲ್ಲದೇ ಇರುವ ಆರೋಪವನ್ನು ಮಾಡೋದು ಗ್ಯಾರಂಟಿ ಎನ್ನಲಾಗಿದೆ.

ಇಷ್ಟೆಲ್ಲಾ ಸವಾಲುಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಮೊದಲ ಬಾರಿ ಎದುರಾಗಲಿವೆ. ಹೀಗಾಗಿ ವಿಪಕ್ಷಗಳ ಈ ಎಲ್ಲಾ ಏಟುಗಳಿಗೆ ಸಿಎಂ ಯಾವ ರೀತಿ ಉತ್ತರಿಸುತ್ತಾರೆ. ಬಿಎಸ್‌ವೈ ರೀತಿ ಸೇರಿಗೆ ಸವ್ವಾ ಸೇರು ಅಂತಾ ತಿರುಗೇಟು ನೀಡ್ತಾರಾ? ಅಥವಾ ಅವರದ್ದೇ ಶೈಲಿಯಲ್ಲಿ ಎಲ್ಲಾ ಚಾಲೆಂಜ್‌ಗಳನ್ನ ಸ್ವೀಕರಿಸಿ ಬಗೆಹರಿಸಲು ಮುಂದಾಗುತ್ತಾರಾ? ಎಂಬುದಕ್ಕೆ ಸದನದಲ್ಲೇ ಉತ್ತರ ಸಿಗಲಿದೆ.

Tags: Basavaraj BommaiBJPCovid 19ಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಚೇತನ್ ಅಹಿಂಸಾ ಹಿಂದೆ ಯಾರಿದ್ದಾರೆ?

Next Post

ಬಹುದಿನದ ಕನಸನ್ನು ನನಸು ಮಾಡಿಕೊಂಡ ನೀರಜ್: ಟ್ವೀಟ್ ಮಾಡಿವ ಮೂಲಕ ಸಂತಸ ಹಂಚಿಕೊಂಡ ಚಿನ್ನದ ಹುಡುಗ

Related Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು
ಕರ್ನಾಟಕ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

by ಪ್ರತಿಧ್ವನಿ
April 23, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3)...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
ಬಹುದಿನದ ಕನಸನ್ನು ನನಸು ಮಾಡಿಕೊಂಡ ನೀರಜ್: ಟ್ವೀಟ್ ಮಾಡಿವ ಮೂಲಕ ಸಂತಸ ಹಂಚಿಕೊಂಡ ಚಿನ್ನದ ಹುಡುಗ

ಬಹುದಿನದ ಕನಸನ್ನು ನನಸು ಮಾಡಿಕೊಂಡ ನೀರಜ್: ಟ್ವೀಟ್ ಮಾಡಿವ ಮೂಲಕ ಸಂತಸ ಹಂಚಿಕೊಂಡ ಚಿನ್ನದ ಹುಡುಗ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada