• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಘರ್ ವಾಪ್ಸಿ: ಟಿಎಂಸಿಗೆ ಮರಳಿದ ಬಿಜೆಪಿ ಶಾಸಕ

ಪ್ರತಿಧ್ವನಿ by ಪ್ರತಿಧ್ವನಿ
August 30, 2021
in ದೇಶ
0
ಘರ್ ವಾಪ್ಸಿ: ಟಿಎಂಸಿಗೆ ಮರಳಿದ ಬಿಜೆಪಿ ಶಾಸಕ
Share on WhatsAppShare on FacebookShare on Telegram

ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ತನ್ಮಯ್ ಘೋಷ್, ಟಿಎಂಸಿ ಸೇರಿದ್ದಾರೆ. ಸೋಮವಾರದಂದು ಬಿಜೆಪಿ ತೊರೆದು ಅಧಿಕೃತವಾಗಿ ಟಿಎಂಸಿಯ ಧ್ವಜವನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ತನ್ಮಯ್ ಬಿಜೆಪಿ ತೊರೆದ ಎರಡನೇ ಶಾಸಕರಾಗಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದ ಬಿಶ್ನುಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತನ್ಮಯ್ ಅವರು ಬಿಜೆಪಿ ಟಿಕೆಟ್ ಪಡೆದಿದ್ದರು. ಚುನಾವಣೆಗೂ ಮುನ್ನ ಟಿಎಂಸಿಯಲ್ಲೇ ಇದ್ದ ತನ್ಮಯ್, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈಗ ಹಿರಿಯ ಟಿಎಂಸಿ ನಾಯಕ ಹಾಗೂ ಸಚಿವ ಬ್ರಾತ್ಯ ಬಸು ನೇತೃತ್ವದಲ್ಲಿ ಮತ್ತೆ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

ಜೂನ್ ತಿಂಗಳಲ್ಲಿ ಕೃಷ್ಣನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಹಿಂದೆ ಟಿಎಂಸಿಯಲ್ಲಿ ಇದ್ದಂತಹ ಹಿರಿಯ ರಾಜಕಾರಣಿ ಮುಕುಲ್ ರಾಯ್ ಅವರು ಪಕ್ಷಕ್ಕೆ ಮರಳಿದ್ದರು. ಒಂದು ಕಾಲದಲ್ಲಿ ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ಬಳಿಕ ಅತೀ ಹೆಚ್ಚು ಮನ್ನಣೆ ಪಡೆದ ನಾಯಕರಾಗಿದ್ದ ಮುಕುಲ್ ರಾಯ್ 2017ರಲ್ಲಿ ಬಿಜೆಪಿ ಸೇರಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಬಳಿಕ ಮತ್ತೆ ಟಿಎಂಸಿಗೆ ಮರಳಿದ್ದಾರೆ.

ಚುನಾವಣೆಯ ಫಲಿತಾಂಶ ಘೋಷಿಸುವ ವೇಳೆ 77 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯ ಬಲ ಈಗ 73ಕ್ಕೆ ಕುಗ್ಗಿದೆ. ಲೋಕಸಭಾ ಸದಸ್ಯರಾಗಿದ್ದುಕೊಂಡು ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಇಬ್ಬರು ನಾಯಕರು, ತಮ್ಮ ವಿಧಾನಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮುಕುಲ್ ರಾಯ್ ಹಾಗೂ ತನ್ಮಯ್ ಘೋಷ್ ಟಿಎಂಸಿಗೆ ಮರಳಿದ್ದಾರೆ.

ಇವರಿಬ್ಬರು ಮಾತ್ರವಲ್ಲದೇ, ಬಿಜೆಪಿಯ ಇತರೆ ಶಾಸಕರು ಕೂಡಾ ಟಿಎಂಸಿ ಪಕ್ಷದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಮತಾ ಬ್ಯಾನರ್ಜಿ ಅನುಮತಿ ಸಿಕ್ಕ ಕ್ಷಣವೇ ಟಿಎಂಸಿಗೆ ಸೇರುವ ಅಭಿಲಾಷೆ ಹೊಂದಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಇನ್ನು ಚುನಾವಣಾ ಸಮಯದಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದವರನ್ನು ವಾಪಾಸ್ ಕರೆಸಿಕೊಳ್ಳಲಾಗುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರೂ, ತನ್ಮಯ್ ಘೋಷ್ ಅವರಿಗೆ ಅವಕಾಶ ನೀಡಿದ್ದರಿಂದ ಉಳಿದವರಲ್ಲಿಯೂ ಟಿಎಂಸಿ ಸೇರುವ ಆಸೆ ಚಿಗುರೊಡೆದಿದೆ.

Tags: Amit ShahBJPMamata BanerjeeTMC PartyWest Bengalಕೃಷ್ಣನಗರತನ್ಮಯ್ನರೇಂದ್ರ ಮೋದಿಬಿಜೆಪಿಬಿಶ್ನುಪುರ್
Previous Post

ತಾಲಿಬಾನ್ ನೀಡಿದ ಗಡುವು ಅಂತ್ಯವಾಗುವ ವೇಳೆ ಚುರುಕು ಪಡೆದ ಸ್ಥಳಾಂತರ ಕಾರ್ಯಾಚರಣೆ

Next Post

ಬೆಂಗಳೂರು ಮೆಟ್ರೋ: ನೇರಳೆ ಮಾರ್ಗ ಕೆಂಗೇರಿವರೆಗೂ ವಿಸ್ತರಣೆ: ನೀವು ತಿಳಿದುಕೊಳ್ಳಬೇಕಾದದ್ದು ಏನು ಗೊತ್ತೇ?

Related Posts

ಮೊಬೈಲ್‌ನಲ್ಲೇ ಲಕ್ಷಾಂತರ ರೂಪಾಯಿ ಶಾಪಿಂಗ್; ದೀಪಾವಳಿಯಲ್ಲಿ ಭಾರತೀಯರು ಖರೀದಿಸಿದ್ದೇನು?
ದೇಶ

ಮೊಬೈಲ್‌ನಲ್ಲೇ ಲಕ್ಷಾಂತರ ರೂಪಾಯಿ ಶಾಪಿಂಗ್; ದೀಪಾವಳಿಯಲ್ಲಿ ಭಾರತೀಯರು ಖರೀದಿಸಿದ್ದೇನು?

by Shivakumar
November 10, 2026
0

ಹಬ್ಬದ ಸಂಭ್ರಮ ಆರಂಭವಾಯಿತೆಂದರೆ ಮನೆಗಳಲ್ಲಿ ಸಿದ್ಧತೆಗಳೂ ಶುರುವಾಗುತ್ತವೆ. ಹೊಸ ಬಟ್ಟೆ, ಸಿಹಿತಿಂಡಿ, ಹೂವಿನ ಅಲಂಕಾರ, ಪೂಜಾ ಸಾಮಗ್ರಿ, ಉಡುಗೊರೆಗಳ ಖರೀದಿ ಹೀಗೆ ಹಲವು ಕೆಲಸಗಳಲ್ಲಿ ಜನರು ತೊಡಗಿಸಿಕೊಳ್ಳುತ್ತಾರೆ....

Read moreDetails
War with Iran has ended: Donald Trump's significant statement

ಇರಾನ್ ಜೊತೆಗಿನ ಯುದ್ಧ ಅಂತ್ಯಗೊಂಡಿದೆ : ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

November 10, 2026
Thick smoke blankets India and Pakistan: Scene captured by NASA satellite

ಭಾರತ-ಪಾಕಿಸ್ತಾನವನ್ನು ಆವರಿಸಿರುವ ದಟ್ಟವಾದ ಹೊಗೆ: ನಾಸಾ ಉಪಗ್ರಹದಲ್ಲಿ ದೃಶ್ಯ ಸೆರೆ

November 10, 2026
A grandson does not have a birthright over his grandfather's property... Supreme Court's significant verdict

ಅಜ್ಜನ ಆಸ್ತಿಯ ಮೇಲೆ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ… ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

November 10, 2026
Why did Sonia Gandhi decline the post of Prime Minister? Surprising details revealed in her autobiography!

ಸೋನಿಯಾ ಗಾಂಧಿ  ಪ್ರಧಾನಿ ಹುದ್ದೆ ನಿರಾಕರಿಸಿದ್ದೇಕೆ? ಆತ್ಮಕಥೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ!

November 10, 2026
Next Post
ಬೆಂಗಳೂರು ಮೆಟ್ರೋ: ನೇರಳೆ ಮಾರ್ಗ ಕೆಂಗೇರಿವರೆಗೂ ವಿಸ್ತರಣೆ: ನೀವು ತಿಳಿದುಕೊಳ್ಳಬೇಕಾದದ್ದು ಏನು ಗೊತ್ತೇ?

ಬೆಂಗಳೂರು ಮೆಟ್ರೋ: ನೇರಳೆ ಮಾರ್ಗ ಕೆಂಗೇರಿವರೆಗೂ ವಿಸ್ತರಣೆ: ನೀವು ತಿಳಿದುಕೊಳ್ಳಬೇಕಾದದ್ದು ಏನು ಗೊತ್ತೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada