• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸೋನಿಯಾ ಗಾಂಧಿ  ಪ್ರಧಾನಿ ಹುದ್ದೆ ನಿರಾಕರಿಸಿದ್ದೇಕೆ? ಆತ್ಮಕಥೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ!

Shivakumar by Shivakumar
November 10, 2026
in Top Story, Uncategorized, ದೇಶ
0
Why did Sonia Gandhi decline the post of Prime Minister? Surprising details revealed in her autobiography!
Share on WhatsAppShare on FacebookShare on Telegram

ನವದೆಹಲಿ: 2004ರಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi )ಪ್ರಧಾನಿಯಾಗಲು (Prime Minister) ಆರಂಭದಲ್ಲಿ ದೃಢವಾಗಿ ನಿರಾಕರಿಸಿದ್ದರು, ಬಳಿಕ ನಾಯಕರ ತೀವ್ರ ಒತ್ತಡಕ್ಕೆ ಮಣಿದು ಅರೆಮನಸ್ಸಿನಿಂದ ‘ಟೀಕ್ ಹೈ’ (ಸರಿ) ಎಂದಿದ್ದರು. ಆದರೆ ಅಂತಿಮವಾಗಿ ಆ ಹುದ್ದೆಯನ್ನು ಒಪ್ಪದಿರಲು ಗಟ್ಟಿ ನಿರ್ಧಾರ ಮಾಡಿದರು. ಈ ಮಹತ್ವದ ನಿರ್ಧಾರದ ಹಿಂದಿನ ಅಚ್ಚರಿಯ ಮಾಹಿತಿ ಇದೇ ಮೊದಲ ಬಾರಿಗೆ ಅವರು ಬಿಚ್ಚಿಟ್ಟಿದ್ದಾರೆ.

ADVERTISEMENT

ಮಂಗಳವಾರ ಬಿಡುಗಡೆಯಾದ ತಮ್ಮ ಹೊಸ ಆತ್ಮಚರಿತ್ರೆ ಕೃತಿ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ನಲ್ಲಿ ಸೋನಿಯಾ ಗಾಂಧಿ ಈ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ರಾಜೀವ್, ಇಂದಿರಾ ಹತ್ಯೆಯ ಆಘಾತವೇ ಕಾರಣ

ಅಜ್ಜಿ ಇಂದಿರಾ ಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿಯವರ ಕ್ರೂರ ಹತ್ಯೆಗಳ ಆಘಾತವನ್ನು ಅನುಭವಿಸಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ, ತಮ್ಮ ತಾಯಿ ಪ್ರಧಾನಿಯಾಗುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಅವರ ಮನಸ್ಸಿನಲ್ಲಿ, ಆ ಅತ್ಯುನ್ನತ ಹುದ್ದೆ ಎಂದರೆ ಅದು ಜೀವಕ್ಕೆ ಅಪಾಯ ತಂದೊಡ್ಡುವ ಸ್ಥಾನ ಎಂಬ ಆತಂಕವಿತ್ತು.

ಪುಸ್ತಕದಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶಗಳು

ಚುನಾವಣೆಗೂ ಮುನ್ನವೇ ‘ಖಂಡಿತಾ ಇಲ್ಲ’ ಎಂದಿದ್ದ ಸೋನಿಯಾ: 2004ರ ಚುನಾವಣೆಗೂ ಕೆಲವು ತಿಂಗಳ ಮುನ್ನ ಮನೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. “ಒಂದು ವೇಳೆ ನಮ್ಮ ಪಕ್ಷ ಗೆದ್ದರೆ ನೀವು ಪ್ರಧಾನಿ ಹುದ್ದೆ ಒಪ್ಪಿಕೊಳ್ಳುತ್ತೀರಾ?” ಎಂದು ಮಕ್ಕಳಲ್ಲಿ ಒಬ್ಬರು ಕೇಳಿದ್ದರು. ಆಗ ಸೋನಿಯಾ ‘ಖಂಡಿತಾ ಇಲ್ಲ’ (Absolutely not) ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದರಂತೆ. ಆ ಮಾತನ್ನು ಕೇಳಿ ಮಕ್ಕಳು ನಿರಾಳರಾಗಿದ್ದರು.

ನಾಯಕರ ಒತ್ತಡ : ಚುನಾವಣೆ ಗೆದ್ದ ಬಳಿಕ 10 ಜನಪಥ್ ನಿವಾಸದಲ್ಲಿ ಮೈತ್ರಿಕೂಟದ ನಾಯಕರ ಸಭೆ ನಡೆದಿತ್ತು. ಸೋನಿಯಾ ಅವರೇ ಪ್ರಧಾನಿಯಾಗಬೇಕೆಂದು ಎಲ್ಲರೂ ಪಟ್ಟು ಹಿಡಿದರು. “ನೀವು ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ, ನಾವು ನಿಮ್ಮ ನಿರಾಕರಣೆಯನ್ನು ಒಪ್ಪುವುದಿಲ್ಲ” ಎಂದು ನಾಯಕರು ಸ್ವಲ್ಪ ಆಕ್ರಮಣಕಾರಿಯಾಗಿ, ಒತ್ತಾಯಪೂರ್ವಕವಾಗಿ ಸುತ್ತುವರಿದಾಗ ದಂಗಾದ ಸೋನಿಯಾ ‘ಟೀಕ್ ಹೈ’ (ಸರಿ) ಎಂದು ಪಿಸುಗುಟ್ಟಿದ್ದರು. ತಕ್ಷಣವೇ ನಾಯಕರು ಅವರಿಗೆ ಅಭಿನಂದನೆ ಸಲ್ಲಿಸಲು ಆರಂಭಿಸಿದ್ದರು.

ಕಣ್ಣೀರು ಹಾಕಿದ್ದ ಪ್ರಿಯಾಂಕಾ: ಕೋಣೆಯ ಹೊರಗೇ ನಿಂತಿದ್ದ ಪ್ರಿಯಾಂಕಾ, ತಾಯಿ ನಾಯಕರ ಮಾತಿಗೆ ಒಪ್ಪಿಕೊಂಡಿದ್ದನ್ನು ಕೇಳಿ ಕಣ್ಣೀರು ಹಾಕುತ್ತಾ ರಾಹುಲ್ ಗಾಂಧಿ ಬಳಿ ಓಡಿದ್ದರು. “ಅವರು ಒಪ್ಪಿಕೊಂಡುಬಿಟ್ಟರು, ಅವರು ಹೀಗೇಕೆ ಮಾಡಿದರು!” ಎಂದು ಅತೀವ ಆತಂಕದಿಂದ ಇಬ್ಬರೂ ಒಟ್ಟಿಗೆ ತಾಯಿಯ ಬಳಿ ಧಾವಿಸಿದ್ದರು.

ಪಕ್ಷದ ಕಾರ್ಯಕರ್ತರ ನಿರೀಕ್ಷೆ, ನಾಯಕರ ಒತ್ತಡ ಮತ್ತು ತನ್ನ ಕುಟುಂಬದ ಮೇಲಿದ್ದ ಆತಂಕ – ಈ ಸಂಘರ್ಷಗಳ ನಡುವೆ ತಾವು ಅನುಭವಿಸಿದ ತೀವ್ರ ತುಮುಲವನ್ನು ಸೋನಿಯಾ ಗಾಂಧಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಂತಿಮವಾಗಿ ಅವರು ಮಕ್ಕಳ ಭಾವನೆಗಳಿಗೆ ಬೆಲೆ ಕೊಟ್ಟು, ಪ್ರಧಾನಿ ಹುದ್ದೆಯನ್ನು ಏರದಿರಲು ದೃಢವಾದ ನಿರ್ಧಾರ ಕೈಗೊಂಡರು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದ 50 ಅತಿ ಹೆಚ್ಚು ಮಲಿನ ನಗರಗಳ ಪೈಕಿ 49 ಭಾರತದಲ್ಲೇ: ರಾಜಸ್ಥಾನದ ಶ್ರೀ ಗಂಗಾನಗರಕ್ಕೆ ಮೊದಲ ಸ್ಥಾನ!

Tags: autobiographyPrime MinisterSonia Gandhi
Previous Post

ವಿಶ್ವದ 50 ಅತಿ ಹೆಚ್ಚು ಮಲಿನ ನಗರಗಳ ಪೈಕಿ 49 ಭಾರತದಲ್ಲೇ: ರಾಜಸ್ಥಾನದ ಶ್ರೀ ಗಂಗಾನಗರಕ್ಕೆ ಮೊದಲ ಸ್ಥಾನ!

Next Post

ಅಜ್ಜನ ಆಸ್ತಿಯ ಮೇಲೆ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ… ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Related Posts

ಮೊಬೈಲ್‌ನಲ್ಲೇ ಲಕ್ಷಾಂತರ ರೂಪಾಯಿ ಶಾಪಿಂಗ್; ದೀಪಾವಳಿಯಲ್ಲಿ ಭಾರತೀಯರು ಖರೀದಿಸಿದ್ದೇನು?
ದೇಶ

ಮೊಬೈಲ್‌ನಲ್ಲೇ ಲಕ್ಷಾಂತರ ರೂಪಾಯಿ ಶಾಪಿಂಗ್; ದೀಪಾವಳಿಯಲ್ಲಿ ಭಾರತೀಯರು ಖರೀದಿಸಿದ್ದೇನು?

by Shivakumar
November 10, 2026
0

ಹಬ್ಬದ ಸಂಭ್ರಮ ಆರಂಭವಾಯಿತೆಂದರೆ ಮನೆಗಳಲ್ಲಿ ಸಿದ್ಧತೆಗಳೂ ಶುರುವಾಗುತ್ತವೆ. ಹೊಸ ಬಟ್ಟೆ, ಸಿಹಿತಿಂಡಿ, ಹೂವಿನ ಅಲಂಕಾರ, ಪೂಜಾ ಸಾಮಗ್ರಿ, ಉಡುಗೊರೆಗಳ ಖರೀದಿ ಹೀಗೆ ಹಲವು ಕೆಲಸಗಳಲ್ಲಿ ಜನರು ತೊಡಗಿಸಿಕೊಳ್ಳುತ್ತಾರೆ....

Read moreDetails
ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!

ನಿಮ್ಮ ಮನೆಯ ಸುತ್ತಲಿನ ಗಾಳಿ ಎಷ್ಟು ಶುದ್ಧವಾಗಿದೆ? ಮೊಬೈಲ್‌ನಲ್ಲೇ AQI ತಿಳಿಯಲು 5 ಸುಲಭ ಮಾರ್ಗಗಳು!

November 10, 2026
Why was ₹2,000 in drought relief credited to farmers' accounts? Here is the clarification from DCM Parameshwara

ರೈತರ ಖಾತೆಗೆ ₹2,000 ಬರ ಪರಿಹಾರ ಬಂದಿದ್ದೇಕೆ? ಉಳಿದ ಹಣ ಯಾವಾಗ? ಇಲ್ಲಿದೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ!

November 10, 2026
Why do you feel nauseous when looking at your phone while traveling in a car? Here is the scientific reason

ಕಾರಿನಲ್ಲಿ ಪ್ರಯಾಣಿಸುವಾಗ ಫೋನ್ ನೋಡಿದರೆ ವಾಕರಿಕೆ ಬರುವುದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

November 10, 2026
War with Iran has ended: Donald Trump's significant statement

ಇರಾನ್ ಜೊತೆಗಿನ ಯುದ್ಧ ಅಂತ್ಯಗೊಂಡಿದೆ : ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ

November 10, 2026
Next Post
A grandson does not have a birthright over his grandfather's property... Supreme Court's significant verdict

ಅಜ್ಜನ ಆಸ್ತಿಯ ಮೇಲೆ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕಿಲ್ಲ... ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada