• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೌದಿ ಅರೇಬಿಯಾದ ಆಮ್ಲಜನಕ ಟ್ಯಾಂಕರ್ ನಲ್ಲಿ ತನ್ನ ಹೆಸರು ಹಾಕಿಕೊಂಡ ರಿಲಯನ್ಸ್ -ಸತ್ಯಾಸತ್ಯತೆ ಏನು?

ಫೈಝ್ by ಫೈಝ್
May 2, 2021
in ದೇಶ
0
ಸೌದಿ ಅರೇಬಿಯಾದ ಆಮ್ಲಜನಕ ಟ್ಯಾಂಕರ್ ನಲ್ಲಿ ತನ್ನ ಹೆಸರು ಹಾಕಿಕೊಂಡ ರಿಲಯನ್ಸ್ -ಸತ್ಯಾಸತ್ಯತೆ ಏನು?
Share on WhatsAppShare on FacebookShare on Telegram

ADVERTISEMENT

ಕೋವಿಡ್ ಎರಡನೆಯ ಅಲೆಯ ಹೊಡೆತಕ್ಕೆ ಭಾರತದ ಆರೋಗ್ಯ ಕ್ಷೇತ್ರ ಸಂಪೂರ್ಣ ತತ್ತರಿಸಿಹೋಗಿದೆ. ಮೂಲಭೂತ ಸೌಕರ್ಯಗಳ ಕೊರತೆಯೇ ಬಹುಮುಖ್ಯ ಸಮಸ್ಯೆಯಾಗಿ ದೇಶವನ್ನು ಕಾಡುತ್ತಿದೆ. ಭಾರತದಲ್ಲಿ ಆಮ್ಲಜನಕ, ಹಾಸಿಗೆ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವಿಗೀಡಾಗುತ್ತಿರುವುದು ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚಾ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಹಲವಾರು ದೇಶಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ಎಪ್ರಿಲ್ 26 ರಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ ಪ್ರಕಾರ, ಯುನೈಟೆಡ್ ಕಿಂಗ್ಡಮ್ ಮೂಲದ ಲಿಂಡೆ ಹಾಗೂ ಅದಾನಿ ಗ್ರೂಪ್ ಸಹಯೋಗದೊಂದಿಗೆ ಸೌದಿ ಅರೇಬಿಯಾ 80 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಭಾರತಕ್ಕೆ ರವಾನಿಸುತ್ತದೆ. 

ಸೌದಿ ಅರೇಬಿಯಾ ಆಮ್ಲಜನಕ ಪೂರೈಸುವ ಸುದ್ದಿ ವರದಿಯಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಟ್ಯಾಂಕರ್ ಒಂದಕ್ಕೆ ಇಬ್ಬರು ವ್ಯಕ್ತಿಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಫೌಂಡೇಶನ್ ಸ್ಟಿಕರ್ ಅಂಟಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸೌದಿಯಿಂದ ರವಾನೆಯಾದ ಆಮ್ಲಜನಕದ ಟ್ಯಾಂಕರ್ ಗೆ ರಿಲಯನ್ಸ್ ಸ್ಟಿಕರ್ ಅಂಟಿಸಲಾಗುತ್ತಿದೆಯೆಂದು ಆರೋಪಿಸಲಾಗಿತ್ತು. ಈ ವಿಡಿಯೋ ವ್ಯಾಪಕ ಹಂಚಿಕೆಯಾಗಿದ್ದು, ಸತ್ಯಾಸತ್ಯತೆಯ ಸಂಪೂರ್ಣ ಅರಿವಿಲ್ಲದೆ ರಿಲಯನ್ಸ್ ವಿರುದ್ಧ ಅಪಪ್ರಚಾರಗಳು ನಡೆದವು.

https://twitter.com/Naren_Reddy23/status/1388514628263505921?s=19

Fact-check

ಮೇ 1 ರ ದಿ ಹಿಂದೂ ವರದಿ ಪ್ರಕಾರ, ಪೆಟ್ರೋಕೆಮಿಕಲ್ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ವೈದ್ಯಕೀಯ ಬಳಕೆಯ ಆಮ್ಲಜನಕ ಉತ್ಪಾದನೆಯನ್ನು 1000 ಮೆಟ್ರಿಕ್ ಟನ್ ಗಳಿಗೆ ಹೆಚ್ಚಿಸಿದೆ. ಇದು ದೇಶದ ಒಟ್ಟು ಮೆಡಿಕಲ್ ದರ್ಜೆಯ ಆಮ್ಲಜನಕ ಉತ್ಪಾದನೆಗಳಿಗಿಂತ 11 ಶೇಕಡಾ ಹೆಚ್ಚು. 

ಈ ಬಗ್ಗೆ ರಿಲಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ, ಭಾರತದಾದ್ಯಂತ ಸರಬರಾಜು ಮಾಡಲು ಜಮನಗರದ ನಮ್ಮ ಆಮ್ಲಜನಕ ಸ್ಥಾವರ ಘಟಕದಲ್ಲಿ ವೈದ್ಯಕೀಯ ದರ್ಜೆಯ ಆಮ್ಲಜನಕವನ್ನು ಉತ್ಪಾದಿಸಲು ಪ್ರಾರಂಭಿಸಿರುವುದಾಗಿ ದಿ ಹಿಂದೂ ಬಳಿ ತಿಳಿಸಿದ್ದಾರೆ. 

ಏಪ್ರಿಲ್ 13 ರಂದು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರು ರಿಲಯನ್ಸ್ ಇಂಡಸ್ಟ್ರೀಸ್ ಜಮ್ನಗರ್ ಸ್ಥಾವರದಿಂದ ರಾಜ್ಯಕ್ಕೆ ಸುಮಾರು 100 ಮೆಟ್ರಿಕ್ ಟನ್ ಆಮ್ಲಜನಕವನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಹಾಗಾಗಿ, ರಿಲಯನ್ಸ್ ಕೂಡಾ ಆಮ್ಲಜನಕ ಉತ್ಪಾದನೆ ಮತ್ತು‌ ಸರಬರಾಜು ಮಾಡುವ ಸುದ್ದಿ ಸುಳ್ಳಲ್ಲ. 

ಅದಾಗ್ಯೂ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾದ ವಿಡಿಯೋ ತುಣುಕು ಕುರಿತಂತೆ ಆಲ್ಟ್ ನ್ಯೂಸ್ ನೊಂದಿಗೆ ಮಾತನಾಡಿದ RIL ವಕ್ತಾರರು, “ಸೌದಿ ಅರೇಬಿಯಾ, ಜರ್ಮನಿ, ಬೆಲ್ಜಿಯಂ, ನೆದರ್‌ಲ್ಯಾಂಡ್ಸ್ ಮತ್ತು ಥೈಲ್ಯಾಂಡ್‌ಗಳಿಂದ 24 ಐಎಸ್‌ಒ ಕಂಟೇನರ್‌ಗಳನ್ನು ಭಾರತಕ್ಕೆ ತರಲು ಮಾಡಲು RIL ಆಯೋಜಿಸಿದೆ. ಜಮನಗರದ ಘಟಕಕ್ಕೆ ಈ ಕಂಟೈನರ್ ಗಳು ಕಳೆದ ವಾರ ತಲುಪಿದೆ. ಜಮನಗರದ ಘಟಕದಿಂದ ಆಮ್ಲಜನಕ ಪೂರೈಕೆಯಾಗುವ ಮೊದಲು ಕಂಟೈನರ್ ಗೆ ಸ್ಟಿಕರ್ ಅಂಟಿಸುವ ವಿಡಿಯೋ ವೈರಲ್ ಆಗಿದೆ ಎಂದು ತಿಳಿಸಿದ್ದಾರೆ. 

ವಿಮಾನ ನಿಲ್ದಾಣ ಮತ್ತು ಆಮ್ಲಜನಕ ಸ್ಥಾವರದಲ್ಲಿರುವ ಟ್ಯಾಂಕರ್ ನಲ್ಲಿ  ಅದೇ ಸ್ಟಿಕ್ಕರ್‌ಗಳು ಗೋಚರಿಸುವ  ಕೆಲವು ಚಿತ್ರಗಳನ್ನು ವಕ್ತಾರರು ಹಂಚಿಕೊಂಡಿದ್ದಾರೆ. 

ಹಾಗಾಗಿ, ಸೌದಿ ಅರೇಬಿಯಾ ಪೂರೈಸಿದ ಆಮ್ಲಜನಕಕ್ಕೆ ರಿಲಯನ್ಸ್ ತನ್ನ ಹೆಸರು ಹಾಕಿಕೊಂಡಿದೆ ಎಂಬ ಆರೋಪಗಳು ಸುಳ್ಳು.

Looks like O2 arrived fm Saudi Arabia r replaced with banner of RIL. Seems like shortage of Oxygen is created to promote piosity of Ambani.
U cannot believe this govt, anything thing t8 bring publicity to them n their friendly ppl, is tried to earn at any cost. #ElectionResult pic.twitter.com/xsY4hjhPJ7

— Striving for Secularism (@SecularTOI) May 1, 2021
Previous Post

ಎಲ್ಲವೂ ನನ್ನ ಹೆಗಲ ಮೇಲೆ ಬೀಳುತ್ತಿದೆ, ನಾನು ಲಂಡನ್ ತೆರಳುತ್ತಿದ್ದೇನೆ -ಸೇರಂ CEO ಆದರ್ ಪೂನಾವಾಲ

Next Post

ತಜ್ಞರ ಸಲಹೆ ಬದಿಗೊತ್ತಿ ರ‍್ಯಾಲಿ ನಡೆಸಿ ಗಂಡಾಂತರ ತಂದ ಸರ್ಕಾರ..!

Related Posts

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
0

ಬೀದರ್ ಜಿಲ್ಲಾ ಪಂಚಾಯತ್ ಆವರಣದಲ್ಲಿ ವಿತರಣೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶೇಷ ಚೇತನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದರು. ಬೀದರ್...

Read moreDetails

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

July 5, 2025

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
Next Post
ತಜ್ಞರ ಸಲಹೆ ಬದಿಗೊತ್ತಿ ರ‍್ಯಾಲಿ ನಡೆಸಿ ಗಂಡಾಂತರ ತಂದ ಸರ್ಕಾರ..!

ತಜ್ಞರ ಸಲಹೆ ಬದಿಗೊತ್ತಿ ರ‍್ಯಾಲಿ ನಡೆಸಿ ಗಂಡಾಂತರ ತಂದ ಸರ್ಕಾರ..!

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada