ನಿರಂತರವಾಗಿ ನಿದ್ರೆ ಕಳೆಯುವುದು ಮಹಿಳೆಯರ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರಬಹುದು ಎಂದು ಹೊಸ ಅಧ್ಯಯನ ಒಂದು ಕಂಡುಕೊಂಡಿದೆ.
ಕಡಿಮೆ ನಿದ್ರೆ ಮಾಡುವ ಅಥವಾ ನಿದ್ರಿಸಲು ಜಾಸ್ತಿ ಅವಕಾಶ ಸಿಗದ ಮಹಿಳೆಯರು ಚೆನ್ನಾಗಿ ನಿದ್ರೆ ಮಾಡುವ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಲೈಂಗಿಕ ಆಸಕ್ತಿಯ ಕೊರತೆ ಮತ್ತು ಅಸಂತೋಷ ಅನುಭವಿಸುತ್ತಾರೆ ಎಂದು ‘ಮೆನೋಪಾಸ್: ದಿ ಜರ್ನಲ್ ಆಫ್ ದಿ ನಾರ್ತ್ ಅಮೇರಿಕನ್ ಮೆನೋಪಾಸ್ ಸೊಸೈಟಿ’ಯಲ್ಲಿ ಬುಧವಾರ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. ಅಲ್ಲದೆ ಉತ್ತಮ ನಿದ್ರೆಯ ಗುಣಮಟ್ಟವು ಹೆಚ್ಚು ಲೈಂಗಿಕ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿದೆ ಎಂದೂ ಅಧ್ಯಯನವು ಕಂಡುಹಿಡಿದಿದೆ.
“ನೀವು ದಣಿದ ಮಹಿಳೆಯ ಮುಂದೆ ನಿದ್ರೆಯ ಪ್ಲ್ಯಾಟರ್ ಮತ್ತು ಲೈಂಗಿಕತೆಯ ತಟ್ಟೆಯನ್ನು ಹಾಕಿದರೆ, ಅವಳು ಪ್ರತಿ ಬಾರಿಯೂ ನಿದ್ರೆಯನ್ನು ಆರಿಸಿಕೊಳ್ಳುತ್ತಾಳೆ” ಎಂದು ನಾರ್ತ್ ಅಮೇರಿಕನ್ ಮೆನೋಪಾಸ್ ಸೊಸೈಟಿಯ ವೈದ್ಯಕೀಯ ನಿರ್ದೇಶಕರಾಗಿರುವ ಫೌಬಿಯಾನ್ ಹೇಳುತ್ತಾರೆ. ಈ ಫಲಿತಾಂಶಗಳು ವೈದ್ಯರು ತಮ್ಮ ರೋಗಿಗಳಿಗೆ ಅವರ ನಿದ್ರೆ ಮತ್ತು ಅವರ ಲೈಂಗಿಕ ಕಾರ್ಯವೈಖರಿಯ ಬಗ್ಗೆ ಕೇಳಲು ಪ್ರಾರಂಭಿಸಲು ಎಚ್ಚರಗೊಳ್ಳುವ ಕರೆ ಆಗಿರಬೇಕು ಎಂದು ಅವರು ಅಭಿಪ್ರಾಯ ಪಡುತ್ತಾರೆ.
ಪ್ರತಿ ಆರೋಗ್ಯ ಸಮಾಲೋಚಕರೂ ಮಹಿಳೆಯರ ಬಳಿ ಲೈಂಗಿಕ ಕಾರ್ಯ ವೈಖರಿಯ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. “ನಿದ್ರೆ ಎಂಬುವುದು ಸುಲಭವಾದ ಸಂಗತಿಯಾಗಿರಬಹುದು ಮತ್ತು ಕಳಪೆ ನಿದ್ರೆ ಹೃದಯರಕ್ತನಾಳದ ಕಾಯಿಲೆಯಂತಹ ಅನೇಕ ಅಪಾಯಕಾರಿ ಖಾಯಿಲೆಗಳೊಂದಿಗೆ ನೇರ ಸಂಬಂಧ ಹೊಂದಿದೆ “ಎಂದು ಫೌಬಿಯಾನ್ ಹೇಳುತ್ತಾರೆ.” ಮಹಿಳೆ ಚೆನ್ನಾಗಿ ನಿದ್ರೆ ಮಾಡದಿದ್ದರೆ ಅದು ನಿಮ್ಮನ್ನು ಮುಂದಿನ ಪ್ರಶ್ನೆಗೆ ಕರೆದೊಯ್ಯುತ್ತದೆ, ಏಕೆಂದರೆ ಅಂತಹ ಲೈಂಗಿಕ ಕ್ರಿಯೆಯು ಬಹುಶಃ ಬಳಲುತ್ತಿರುತ್ತದೆ ” ಎಂದು ಸಮಸ್ಯೆಯ ಗಂಭೀರತೆಯ ಬಗ್ಗೆ ಅವರು ಗಮನ ಸೆಳೆದಿದ್ದಾರೆ.
ನಿದ್ರಾಹೀನತೆಯಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಮಹಿಳೆಯರು ಮಾತ್ರ ಸಮಸ್ಯೆಗೊಳಗಾಗುವುದಲ್ಲ. ಇದು ಬಹುತೇಕ ಪುರುಷರ ಮೇಲೂ ಪರಿಣಾಮ ಬೀರುತ್ತದೆ. 2009 ರ ಅಧ್ಯಯನದ ಪ್ರಕಾರ ನಿದ್ರಾಹೀನತೆಯು ಪುರುಷರಲ್ಲೂ ನಿಮಿರುವಿಕೆಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ.
ಉತ್ತಮ ಲೈಂಗಿಕ ಕ್ರಿಯೆಯು ಉತ್ತಮ ನಿದ್ರೆಗೆ ಸಂಬಂಧಿಸಿದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಆರ್ಗಾಸಮ್ ನಿದ್ರೆಯನ್ನು ಉತ್ತೇಜಿಸುತ್ತದೆ. ಅವು ಕೆಲವು ಹಾರ್ಮೋನುಗಳ ವರ್ಧನೆಗೆ ಕಾರಣವಾಗುತ್ತವೆ, ಇದು ಲೈಂಗಿಕತೆಯ ನಂತರ ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಮಹಿಳೆಯರಲ್ಲಿ ಪರಾಕಾಷ್ಠೆಯ ನಂತರ ಈಸ್ಟ್ರೊಜೆನ್ ಮಟ್ಟವು ಹೆಚ್ಚಾಗುತ್ತದೆ ಮತ್ತು ಅದು REM ಚಕ್ರಗಳನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.ಪುರುಷರಲ್ಲಿ ಪರಾಕಾಷ್ಠೆಯು ಆಳವಾದ ನಿದ್ರೆಯನ್ನು ಉತ್ತೇಜಿಸುವ ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ . ಇದು ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಮತ್ತು ಪುನಃಸ್ಥಾಪಿಸಲು ಅಗತ್ಯವಾಗಿರುತ್ತದೆ.
ಕಳಪೆ ಗುಣಮಟ್ಟದ ನಿದ್ರೆಯ ಜೊತೆಗೆ ನಿಯಮಿತವಾಗಿ ರಾತ್ರಿ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಮಹಿಳೆಯರಿಗೆ ಸಹ ಲೈಂಗಿಕ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.
ಉತ್ತಮ ನಿದ್ರೆಯನ್ನು ಹೊಂದಲು ನಿಯಮಿತವಾಗಿ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಅವು ಇದು ಅಂತರ್ನಿರ್ಮಿತ ಒತ್ತಡದ ರಾಸಾಯನಿಕಗಳನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉತ್ತೇಜಿಸಬಲ್ಲುದು. ಮಧ್ಯಾಹ್ನ 3 ಗಂಟೆಯ ನಂತರ ಕೆಫೀನ್ ಸೇವಿಸದಿರುವುದು, ಕೊಬ್ಬಿನ, ಮಸಾಲೆಯುಕ್ತ ಆಹಾರಗಳಿಂದ ದೂರವಿರುವುದು ಮುಂತಾದ ಡಯೆಟ್ ಪಾಲಿಸುವುದರಿಂದಲೂ ಒಳ್ಳೆಯ ನಿದ್ರೆ ಪಡೆಯಬಹುದು. ಧ್ಯಾನ ಮಾಡುವುದು, ಒತ್ತಡ ಮುಕ್ತವಾಗಿರುವುದು, ಒಳ್ಳೆಯ ಸಂಗೀತ ಆಲಿಸುವುದು, ಪುಸ್ತಕ ಓದುವುದರಿಂದಲೂ ನಿದ್ರಾಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಪ್ರಶಾಂತವಾಗಿಡುವುದರಿಂದ ಒಳ್ಳೆಯ ನಿದ್ರೆ ಪಡೆಯಬಹುದು ಎಂದು ಅಧ್ಯಯನ ತಿಳಿಸುತ್ತದೆ.