ಅಮೇರಿಕಾದಲ್ಲಿ ಹೊಸ ರಾಜಕೀಯ ಅಲೆ ಶುರುವಾಗಿದೆ. ನೂತನ ಅಧ್ಯಕ್ಷರಾಗಿ ಜೋ ಬಿಡೆನ್ ಜನವರಿ20 ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅಮೇರಿಕಾದಲ್ಲಿ ಅತ್ಯಂತ ಹಿರಿಯ ವಯಸ್ಸಿನಲ್ಲಿ ಅಧಿಕಾರ ಸ್ವೀಕರಿಸಿದ ಹೆಗ್ಗಳಿಗೆ ಜೋ ಬೈಡೆನ್ (78 ವರ್ಷ) ಅವರದ್ದಾಗಿದೆ.
ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಹ್ಯಾರಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮೇರಿಕಾದ ನೂತನ ಅಧ್ಯಕ್ಷರಿಗೆ ಪ್ರಧಾನಿ ಮೋದಿಯವರು ಟ್ವಿಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. “ ಅಧ್ಯಕ್ಷರಾಗಿ ಅಧಿಕಾವಹಿಸಿಕೊಂಡ ಜೋ ಬಿಡೆನ್ ರವರಿಗೆ ಅಭಿನಂದನೆಗಳು ಭಾರತ ಮತ್ತು ಅಮೇರಿಕಾದ ಸಂಬಂಧ ಸೌಹಾರ್ದತೆಯಿಂದ ವೃದ್ಧಿಯಾಗಲು ಮಾತುಕತೆಗೆ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೇರಿಕಾ ಸಂಸತ್ ಮೇಲೆ ದಾಂಧಲೆ ನಡೆಸಿರುವುದು ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನಲೆ ಜೋ ಬಿಡೆನ್ ಪ್ರಮಾಣವಚನ ವೇಳೆ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿತ್ತು. 25 ಸಾವಿರಕ್ಕೂ ಹೆಚ್ಚು ಯೋಧರನ್ನು ನೇಮಿಸಲಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಡೆನ್ಗೆ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಕ್ಯಾಪಿಟಲ್ನ ವೆಸ್ಟ್ ಫ್ರೆಂಟ್ನಲ್ಲಿ ಪ್ರಮಾಣ ವಚನ ಬೋಧಿಸಿದರು. ಅದಾದ ನಂತರ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಿಡೆನ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸುತ್ತಿಲ್ಲ ಪ್ರಜಾಪ್ರಭುತ್ವದ ಮೌಲ್ಯದ ಗೆಲುವನ್ನು ಸಂಭ್ರಮಿಸುತ್ತಿದ್ದೇವೆ ಎಂದಿದ್ದಾರೆ.
ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಮಲಾ ಹ್ಯಾರಿಸ್ ರಾಷ್ಟ್ರದ ಜನತೆಗೆ ಸಾಮಾಜಿಕ ಜಾಲತಾಣದ ಮೂಲಕ “ನಾನು ಸೇವೆಗೆ ಸಿದ್ಧ” ಎಂದು ಟ್ವೀಟ್ ಮಾಡಿದ್ದಾರೆ.
ಜಾಗತಿಕ ಶಾಂತಿ, ಭದ್ರತೆ, ಸಮಾನತೆ ಕಾಪಾಡಲು ನಾವುಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದಿದ್ದಾರೆ. ಭಾರತ ಮತ್ತು ಅಮೇರಿಕಾದ ಆರ್ಥಿಕತೆ ಸೇರಿದಂತೆ ಇತರೆ ವಿಷಯಗಳಲ್ಲಿ ಸಮಾನ, ಮೌಲ್ಯ ಮತ್ತು ದ್ವಿಪಕ್ಷೀಯ ಕಾರ್ಯಸೂಚಿಯನ್ನು ಹೊಂದಿದೆ.
ಇಂತಹ ಕಾರ್ಯವೈಖರಿಗೆ ಸಂಬಂಧಿಸಿದಂತೆ ಅಮೇರಿಕಾದ ಜೊತೆ ಭಾರತ ಕೈ ಜೋಡಿಸಲು ಸಿದ್ಧ, ಈ ಮೂಲಕ ಭಾರತ ಮತ್ತು ಅಮೇರಿಕಾ ಸಂಬಂಧ ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗುತ್ತೆ ಅದಕ್ಕೆ ನಾವು ಬದ್ಧ ಎಂದಿದ್ದಾರೆ.