• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೂತನ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ‌ ಬೃಹತ್‌ ಪರೇಡ್

by
April 3, 2021
in ಕರ್ನಾಟಕ
0
ನೂತನ ಕಾಯ್ದೆಗಳ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಬೆಂಗಳೂರಿನಲ್ಲಿ‌ ಬೃಹತ್‌ ಪರೇಡ್
Share on WhatsAppShare on FacebookShare on Telegram

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ದಲಿತ-ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತ-ದಲಿತ-ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಜನವರಿ 26 ರಂದು ಬೃಹತ್‌ ಪರೇಡ್‌ ನಡೆಸುವುದಾಗಿ ತಿಳಿಸಿದೆ.

ADVERTISEMENT

ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಪತ್ರಿಕಾ ಪ್ರಕಟನೆ ಹೊರಡಿಸಿರುವ ರೈತ-ದಲಿತ-ಕಾರ್ಮಿಕ-ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯು ಗಣರಾಜ್ಯೋತ್ಸವದಂದು ಜನರ ಬೃಹತ್ ಪೆರೇಡ್ ಮತ್ತು ಮುಂದಿನ ಎಲ್ಲಾ ಹೋರಾಟಗಳಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದೆ.

ಸುಗ್ಗಿಯ ಸಮಯದಲ್ಲಿ ತಮ್ಮ ಹೊಲ-ಗದ್ದೆಗಳಲ್ಲಿ, ಜಾತ್ರೆ-ಹಬ್ಬಗಳಲ್ಲಿ ಸಂಭ್ರಮಿಸುತ್ತಿರಬೇಕಾದ ರೈತರು ಕಳೆದ ಎರಡು ತಿಂಗಳಿಂದಲೂ ದೆಹಲಿಯ ಬೀದಿಗಳಲ್ಲಿ ಮನೆಮಾಡಿ ಕೊರೆಯುವ ಚಳಿಯಲ್ಲಿ ಉಗ್ರ ಹೋರಾಟ ನಡೆಸಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ರೈತ-ದಲಿತ-ಕಾರ್ಮಿಕರು, ಮಹಿಳೆಯರು, ಯುವಜನರು ಐದಾರು ತಿಂಗಳಿನಿಂದ ಎಡಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ, ಗ್ರಾಮಗಳಲ್ಲಿ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ರೈತ ವಿರೋಧಿ, ಜನ ವಿರೋಧಿ ಕಾಯಿದೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಐಕ್ಯ ಹೋರಾಟ ಸಮಿತಿ ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಡೀ ಜಗತ್ತೇ ಕರೋನಾ ಹುಟ್ಟಿಸಿದ ಜೀವಭಯದಲ್ಲಿ ತತ್ತರಿಸಿದ್ದಾಗ ರೈತರು ತಮ್ಮ ಹೊಲ-ಗದ್ದೆಗಳಿಗೆ ಇಳಿದು ಸಮೃದ್ಧವಾಗಿ ಆಹಾರ ಪದಾರ್ಥಗಳನ್ನು ಬೆಳೆದುಕೊಟ್ಟು ದೇಶದಲ್ಲಿ ಹಸಿವಿನ ಹಾಹಾಕಾರ ಉಂಟಾಗದಂತೆ ನೋಡಿಕೊಂಡರು. ಸರ್ಕಾರಗಳನ್ನು ದೊಡ್ಡ ವಿಪತ್ತಿನಿಂದ ಪಾರುಮಾಡಿದರು. ಅದಕ್ಕಾಗಿ ಸರ್ಕಾರಗಳು ರೈತರಿಗೆ ಕೊಟ್ಟ ಬಳುವಳಿಯಾದರೂ ಏನು? ರೈತರ ಭೂಮಿಯನ್ನು, ರೈತರು ಬೆಳೆಯುವ ಪದಾರ್ಥಗಳನ್ನು ಕಾರ್ಪೊರೆಟ್ ಬಕಾಸುರರು ಮನಬಂದಂತೆ ದೋಚಿಕೊಳ್ಳಲು ಬಿಟ್ಟು, ರೈತರನ್ನು ಅವರ ಶಾಶ್ವತ ಗುಲಾಮರನ್ನಾಗಿ ಮಾಡುವ ಕಾಯಿದೆಗಳು! ಅದಾನಿ-ಅಂಬಾನಿಗಳಂಥ ದೈತ್ಯ ಬಂಡವಾಳಿಗರ ಮುಷ್ಟಿಯಲ್ಲಿ ಸಿಕ್ಕಿಕೊಂಡ ಸರ್ಕಾರಗಳಿಂದ ಕೋವಿಡ್ ಸಂಕಷ್ಟದ ಅಸಹಾಯಕ ಪರಿಸ್ಥಿತಿಯಲ್ಲಿ ರೈತ ವಿನಾಶದ ಕಾಯಿದೆಗಳ ಸುರಿಮಳೆ. ಸುಗ್ರೀವಾಜ್ಞೆಗಳ ಮೂಲಕ ಜನಪರ ಕಾಯಿದೆಗಳಿಗೆ ಸಾಲು ಸಾಲು ತಿದ್ದುಪಡಿಗಳು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಆಶಯಗಳನ್ನೇ ಧಿಕ್ಕರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವುದು ಈ ದೇಶ ಹಿಂದೆಂದೂ ಕಂಡರಿಯದಂಥ ಜನದ್ರೋಹಿ ಕಾಯಿದೆಗಳು ಎಂಬುದನ್ನು ನಾವು ಅರಿಯಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜನವರಿ 26, ಮಂಗಳವಾರ ಗಣರಾಜ್ಯೋತ್ಸವ ದಿನದಂದು ರೈತ-ಕಾರ್ಮಿಕ-ದಲಿತ ಹಾಗೂ ಸಮಸ್ತ ದುಡಿವ ಜನರ ಬೃಹತ್ ಜನಗಣರಾಜ್ಯೋತ್ಸವ ಪೆರೇಡ್ ನಡೆಯುತ್ತದೆ. ರೈತರು ಮತ್ತು ದುಡಿಯುವ ಜನತೆ ದುಡಿಮೆಯ ಸಂಕೇತವಾದ ಎತ್ತಿನ ಬಂಡಿ, ಟ್ರಾಕ್ಟರ್ ಮತ್ತಿತರ ವಾಹನಗಳ ಜೊತೆ ಸಾಗಿ ಬರುತ್ತಿದ್ದಾರೆ. ‘ಸಂಯುಕ್ತ ಹೋರಾಟ ಕರ್ನಾಟಕ’ ವೇದಿಕೆಯಡಿಯಲ್ಲಿ ರಾಜ್ಯದ ಎಲ್ಲಾ ಜನಸಂಘಟನೆಗಳಿಂದ ಜನಸಾಗರ ಬೆಂಗಳೂರಿಗೆ ಹರಿದು ಬರಲಿದೆ ಎಂದು ಸಮಿತಿಯು ತಿಳಿಸಿದೆ.

ಐಕ್ಯ ಹೋರಾಟ ಸಮಿತಿ ಹಕ್ಕೊತ್ತಾಯಗಳು

  1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಎಲ್ಲಾ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳು ಮತ್ತು ಕಾರ್ಮಿಕ ವಿರೋಧಿ ನಾಲ್ಕು ‘ಕೋಡ್’ಗಳನ್ನು ಕೂಡಲೇ ಕೈಬಿಡಬೇಕು.
  2. ರೈತರ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ, ಲಾಭದಾಯಕ ಬೆಲೆ ನಿಗದಿಗೊಳಿಸಬೇಕು ಮತ್ತು ಇದನ್ನು ಶಾಸನಬದ್ಧಗೊಳಿಸಬೇಕು. ಎಪಿಎಂಸಿಯನ್ನು ಉಳಿಸಬೇಕು ಮತ್ತು ರೈತಸ್ನೇಹಿಯಾಗಿ ಬಲಪಡಿಸಬೇಕು.
  3. ಅನೇಕ ದಶಕಗಳಿಂದ ಅರ್ಜಿ ಹಾಕಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಮತ್ತು ತಲೆಯ ಮೇಲೊಂದು ಸೂರು ಕಟ್ಟಿಕೊಂಡಿರುವ ಬಡಜನರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು.
  4. ಎಲ್ಲಾ ಕಾರ್ಮಿಕರಿಗೆ ಉದ್ಯೋಗ ಮತ್ತು ವೇತನ ಭದ್ರತೆ ದೊರಕಬೇಕು. ಓದಿಗೆ ತಕ್ಕ ಉದ್ಯೋಗ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು.

Click here to follow us on Facebook , Twitter, 

Previous Post

ಅಪಹರಣಕಾರರಿಂದ ತಪ್ಪಿಸಿಕೊಳ್ಳಲು ಮುಖವನ್ನು ವಿರೂಪಗೊಳಿಸುವ ಬುಡಕಟ್ಟು ಸ್ತ್ರೀಯರು

Next Post

ಅಮೇರಿಕಾದಲ್ಲಿ ನೂತನ ಅಧ್ಯಕ್ಷರಾಗಿ “ಜೋ ಬಿಡೆನ್‌ “ ಉಪಾಧ್ಯಕ್ಷರಾಗಿ “ಕಮಲಾ ಹ್ಯಾರಿಸ್‌” ರ ಯುಗಾರಂಭ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಅಮೇರಿಕಾದಲ್ಲಿ ನೂತನ ಅಧ್ಯಕ್ಷರಾಗಿ “ಜೋ ಬಿಡೆನ್‌ “ ಉಪಾಧ್ಯಕ್ಷರಾಗಿ “ಕಮಲಾ ಹ್ಯಾರಿಸ್‌” ರ ಯುಗಾರಂಭ

ಅಮೇರಿಕಾದಲ್ಲಿ ನೂತನ ಅಧ್ಯಕ್ಷರಾಗಿ “ಜೋ ಬಿಡೆನ್‌ “ ಉಪಾಧ್ಯಕ್ಷರಾಗಿ “ಕಮಲಾ ಹ್ಯಾರಿಸ್‌” ರ ಯುಗಾರಂಭ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada