• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಬ್ರಾಹ್ಮಣ್ಯ ಪ್ರಾಬಲ್ಯವನ್ನು ಖಂಡಿಸುವಂತೆ ಕಮಲಾ ಹ್ಯಾರಿಸ್‌ಗೆ ಒತ್ತಾಯಿಸಿದ ಭಾರತೀಯ ಅಮೇರಿಕನ್ನರು

by
October 24, 2020
in ದೇಶ
0
ಬ್ರಾಹ್ಮಣ್ಯ ಪ್ರಾಬಲ್ಯವನ್ನು ಖಂಡಿಸುವಂತೆ ಕಮಲಾ ಹ್ಯಾರಿಸ್‌ಗೆ ಒತ್ತಾಯಿಸಿದ ಭಾರತೀಯ ಅಮೇರಿಕನ್ನರು
Share on WhatsAppShare on FacebookShare on Telegram

ಮುಂಬರುವ ಅಮೇರಿಕಾ ಚುನಾವಣೆಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಭಾರತದಲ್ಲಿ ಪ್ರಾಬಲ್ಯ ಹೊಂದಿರುವ ಬ್ರಾಹ್ಮಣ್ಯದ ವಿರುದ್ಧ ದನಿಯೆತ್ತುವಂತೆ ಭಾರತೀಯ ಮೂಲದ ಅಮೇರಿಕನ್ನರು ಈಮೇಲ್‌ ಅಭಿಯಾನ ಶುರು ಮಾಡಿದ್ದಾರೆ.

ADVERTISEMENT

ಇತ್ತೀಚೆಗೆ ಉತ್ತರಪ್ರದೇಶದ ಹಥ್ರಾಸ್‌ ಪ್ರಕರಣದ ತೀಕ್ಷ್ಣತೆಯನ್ನು ಭಾರತೀಯ ಅಧಿಕಾರಿಗಳು ನಿಗ್ರಹಿಸುವುದನ್ನು ತಡೆಯುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಬೇಕೆಂದು ಆಗ್ರಹಿಸಿರುವ ಅಭಿಯಾನಕಾರರು, ಹಥ್ರಾಸ್‌ ಪ್ರಕರಣವನ್ನು ಖಂಡಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಿಯಾಟಲ್ ಮೂಲದ ಸ್ವಯಂಸೇವಕರೊಬ್ಬರ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಅಮೇರಿಕಾದ ಭಾರತೀಯ-ಅಮೇರಿಕನ್ ಮುಸ್ಲಿಂ ಮತ್ತು ಬಹುಜನ ಗುಂಪುಗಳು ಇಮೇಲ್ ಅಭಿಯಾನವನ್ನು ಪ್ರಾರಂಭಿಸಿಲಾಗಿದೆ, ಹತ್ರಾಸ್ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಭಾರತೀಯ ಸರ್ಕಾರದಲ್ಲಿ ಬ್ರಾಹ್ಮಣ ಪ್ರಾಬಲ್ಯದ ಕಾರ್ಯಸೂಚಿಯನ್ನು ಖಂಡಿಸಲು ಕಮಲಾ ಹ್ಯಾರಿಸ್ ಧ್ವನಿ ಎತ್ತುವಂತೆ ಕೇಳಿಕೊಂಡಿದ್ದಾರೆ.

Also Read: ಹಥ್ರಾಸ್ ಪ್ರಕರಣ: ಪೋಲೀಸ್ ಹೇಳಿಕೆಯನ್ನು ಪ್ರಶ್ನಿಸಿದ್ದ ವೈದ್ಯಾಧಿಕಾರಿ ಸೇವೆ ರದ್ದು!

ಒಬ್ಬ ಭಾರತೀಯ ಅಮೆರಿಕನ್ನನಾಗಿ, ಭಾರತ ಮಾತ್ರವಲ್ಲದೆ ಇಡೀ ಜಗತ್ತಿನ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದ ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಸಂಭವಿಸಿದ ದುರಂತದ ಬಗ್ಗೆ ಅಸಮಾಧಾನದ ಕಾಳಜಿಯೊಂದಿಗೆ ಬರೆಯುತ್ತೇನೆ ಎಂದು ಆರಂಭಗೊಳ್ಳುವ ಸುಮಾರು ಸಾವಿರಕ್ಕೂ ಹೆಚ್ಚು ಈಮೇಲ್‌ಗಳು ಕಮಲಾ ಹ್ಯಾರಿಸ್‌ರಿಗೆ ಹಾಗೂ ಅಮೇರಿಕಾದ ಉನ್ನತ ಮಾಧ್ಯಮಗಳಿಗೆ ರವಾನೆಯಾಗಿದೆ.

ಸೆಪ್ಟೆಂಬರ್‌ 14 ರಂದು ಉತ್ತರ ಪ್ರದೇಶದ ಹಥ್ರಾಸ್‌ ಜಿಲ್ಲೆಯಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆದಿದ್ದು, ಮೇಲ್ಜಾತಿ ಆರೋಪಿಗಳನ್ನು ಸರ್ಕಾರವೇ ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಎದ್ದಿತ್ತು.ಅದಕ್ಕೆ ಪೂರಕೆವೆನಿಸುವಂತೆ ಪೋಲಿಸ್‌ ಅಧಿಕಾರಿಗಳೂ ವರ್ತಿಸಿದ್ದು, ಆಡಳಿತರೂಢ ಬಿಜೆಪಿ ನಾಯಕರು ಹಾಗೂ ಮೇಲ್ಜಾತಿ ಸಂಘಟನೆಗಳು ಅತ್ಯಾಚಾರ ಆರೋಪಿಗಳಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು.

Also Read: ಕಮಲಾ ಹ್ಯಾರೀಸ್ ಪ್ರಕರಣ: ಭಾರತ ವಿರೋಧಿ ಡೊನಾಲ್ಡ್ ಟ್ರಂಪ್‌ರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ಭಾರತೀಯ ತಾಯಿ ಹಾಗೂ ಜಮೈಕಾದ ತಂದೆಯ ಮಗಳಾಗಿರುವ ಕಮಲಾ ಹ್ಯಾರಿಸ್‌ಗೆ ಬರೆದ ಪತ್ರದಲ್ಲಿ‌, ಮೇಲ್ಜಾತಿ ಜಾತಿವಾದಿಗಳು ಭಾರತದಲ್ಲಿ ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತು ಹೇಳಲಾಗಿದೆ. ದಿನನಿತ್ಯ ಕನಿಷ್ಟ 10 ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ 2019 ರ ವರದಿಯನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

“ವರ್ಣ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿರುವ ಬ್ರಾಹ್ಮಣರು ತಮ್ಮ ಜಾತಿ ಪ್ರಾಬಲ್ಯ ಮೆರೆಸುವ ಪುರಾಣಗಳನ್ನು ಶಾಶ್ವತಗೊಳಿಸುವುದರ ಮೂಲಕ ದಲಿತರು, ವಿಶೇಷವಾಗಿ ಮಹಿಳೆಯರ ವಿರುದ್ಧ ಇಂತಹ ಘೋರ ಅಪರಾಧಗಳು ನಡೆಯುತ್ತಿದೆ. ಆದರೂ ಜಾತಿ ಸಮಸ್ಯೆ ಅಸ್ತಿತ್ವದಲ್ಲಿರುವುದನ್ನು ಅವರು ನಿರಾಕರಿಸುತ್ತಾರೆ. ಇದು ಬ್ರಾಹ್ಮಣ್ಯ ಪಿತೃಪ್ರಭುತ್ವವಲ್ಲದಿದ್ದರೆ, ಇನ್ನೇನು?” ಎಂದು ಪ್ರಶ್ನಿಸಿದ್ದಾರೆ.

Also Read: ಬಿಹಾರ ಚುನಾವಣಾ ಕಣದಲ್ಲಿ ‌ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ

ಎಲ್ಗರ್‌ ಪರಿಷದ್‌ ಪ್ರಕರಣ, ಸಿಎಎ ಎನ್‌ಆರ್‌ಸಿ ವಿರೋಧಿ ಪ್ರತಿಭಟನಾಕಾರರ ಮೇಲೆ ಗುರುತರ ಪ್ರಕರಣದಡಿಯಲ್ಲಿ ಬಂಧಿಸಿರುವುದರ ಗಮನ ಸೆಲೆದಿರುವ ಅಭಿಯಾನಕಾರರು, ಭಾರತದಲ್ಲಿ ಹೆಚ್ಚುತ್ತಿರುವ ದಲಿತ ದೌರ್ಜನ್ಯ ಹಾಗೂ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಗಟ್ಟಿದನಿಯಲ್ಲಿ ಖಂಡಿಸಬೇಕೆಂದು ಪ್ರಸ್ತುತ ಸೆನೆಟೆರ್‌ ಆಗಿರುವ ಕಮಲಾರಲ್ಲಿ ಆಗ್ರಹಿಸಿದ್ದಾರೆ.

Tags: Brahminical SupremacyHathras CAseHathras Gang-RapeIndian AmericansKamala Harris
Previous Post

ಮೋದಿ ಸರ್ಕಾರದ ಮಾಧ್ಯಮ ದಮನ ನೀತಿ ವಿರುದ್ಧ ದನಿ ಎತ್ತಿದ ಜಾಗತಿಕ ಸಂಸ್ಥೆಗಳು

Next Post

ದೇಶದ್ರೋಹ ಹೇಳಿಕೆ ಆರೋಪ: ಮೆಹಬೂಬ ಮುಫ್ತಿಯನ್ನು ಬಂಧಿಸುವಂತೆ ಬಿಜೆಪಿ ಆಗ್ರಹ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ದೇಶದ್ರೋಹ ಹೇಳಿಕೆ ಆರೋಪ: ಮೆಹಬೂಬ ಮುಫ್ತಿಯನ್ನು ಬಂಧಿಸುವಂತೆ ಬಿಜೆಪಿ ಆಗ್ರಹ

ದೇಶದ್ರೋಹ ಹೇಳಿಕೆ ಆರೋಪ: ಮೆಹಬೂಬ ಮುಫ್ತಿಯನ್ನು ಬಂಧಿಸುವಂತೆ ಬಿಜೆಪಿ ಆಗ್ರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada