ಮುಂಬರುವ ಅಮೇರಿಕಾ ಚುನಾವಣೆಯಲ್ಲಿ ಉಪಾಧ್ಯಕ್ಷೆ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಭಾರತದಲ್ಲಿ ಪ್ರಾಬಲ್ಯ ಹೊಂದಿರುವ ಬ್ರಾಹ್ಮಣ್ಯದ ವಿರುದ್ಧ ದನಿಯೆತ್ತುವಂತೆ ಭಾರತೀಯ ಮೂಲದ ಅಮೇರಿಕನ್ನರು ಈಮೇಲ್ ಅಭಿಯಾನ ಶುರು ಮಾಡಿದ್ದಾರೆ.
ಇತ್ತೀಚೆಗೆ ಉತ್ತರಪ್ರದೇಶದ ಹಥ್ರಾಸ್ ಪ್ರಕರಣದ ತೀಕ್ಷ್ಣತೆಯನ್ನು ಭಾರತೀಯ ಅಧಿಕಾರಿಗಳು ನಿಗ್ರಹಿಸುವುದನ್ನು ತಡೆಯುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಬೇಕೆಂದು ಆಗ್ರಹಿಸಿರುವ ಅಭಿಯಾನಕಾರರು, ಹಥ್ರಾಸ್ ಪ್ರಕರಣವನ್ನು ಖಂಡಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿಯಾಟಲ್ ಮೂಲದ ಸ್ವಯಂಸೇವಕರೊಬ್ಬರ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಅಮೇರಿಕಾದ ಭಾರತೀಯ-ಅಮೇರಿಕನ್ ಮುಸ್ಲಿಂ ಮತ್ತು ಬಹುಜನ ಗುಂಪುಗಳು ಇಮೇಲ್ ಅಭಿಯಾನವನ್ನು ಪ್ರಾರಂಭಿಸಿಲಾಗಿದೆ, ಹತ್ರಾಸ್ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಭಾರತೀಯ ಸರ್ಕಾರದಲ್ಲಿ ಬ್ರಾಹ್ಮಣ ಪ್ರಾಬಲ್ಯದ ಕಾರ್ಯಸೂಚಿಯನ್ನು ಖಂಡಿಸಲು ಕಮಲಾ ಹ್ಯಾರಿಸ್ ಧ್ವನಿ ಎತ್ತುವಂತೆ ಕೇಳಿಕೊಂಡಿದ್ದಾರೆ.
Also Read: ಹಥ್ರಾಸ್ ಪ್ರಕರಣ: ಪೋಲೀಸ್ ಹೇಳಿಕೆಯನ್ನು ಪ್ರಶ್ನಿಸಿದ್ದ ವೈದ್ಯಾಧಿಕಾರಿ ಸೇವೆ ರದ್ದು!
ಒಬ್ಬ ಭಾರತೀಯ ಅಮೆರಿಕನ್ನನಾಗಿ, ಭಾರತ ಮಾತ್ರವಲ್ಲದೆ ಇಡೀ ಜಗತ್ತಿನ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದ ಇತ್ತೀಚೆಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಸಂಭವಿಸಿದ ದುರಂತದ ಬಗ್ಗೆ ಅಸಮಾಧಾನದ ಕಾಳಜಿಯೊಂದಿಗೆ ಬರೆಯುತ್ತೇನೆ ಎಂದು ಆರಂಭಗೊಳ್ಳುವ ಸುಮಾರು ಸಾವಿರಕ್ಕೂ ಹೆಚ್ಚು ಈಮೇಲ್‌ಗಳು ಕಮಲಾ ಹ್ಯಾರಿಸ್‌ರಿಗೆ ಹಾಗೂ ಅಮೇರಿಕಾದ ಉನ್ನತ ಮಾಧ್ಯಮಗಳಿಗೆ ರವಾನೆಯಾಗಿದೆ.
ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆದಿದ್ದು, ಮೇಲ್ಜಾತಿ ಆರೋಪಿಗಳನ್ನು ಸರ್ಕಾರವೇ ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಎದ್ದಿತ್ತು.ಅದಕ್ಕೆ ಪೂರಕೆವೆನಿಸುವಂತೆ ಪೋಲಿಸ್ ಅಧಿಕಾರಿಗಳೂ ವರ್ತಿಸಿದ್ದು, ಆಡಳಿತರೂಢ ಬಿಜೆಪಿ ನಾಯಕರು ಹಾಗೂ ಮೇಲ್ಜಾತಿ ಸಂಘಟನೆಗಳು ಅತ್ಯಾಚಾರ ಆರೋಪಿಗಳಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು.
Also Read: ಕಮಲಾ ಹ್ಯಾರೀಸ್ ಪ್ರಕರಣ: ಭಾರತ ವಿರೋಧಿ ಡೊನಾಲ್ಡ್ ಟ್ರಂಪ್‌ರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
ಭಾರತೀಯ ತಾಯಿ ಹಾಗೂ ಜಮೈಕಾದ ತಂದೆಯ ಮಗಳಾಗಿರುವ ಕಮಲಾ ಹ್ಯಾರಿಸ್‌ಗೆ ಬರೆದ ಪತ್ರದಲ್ಲಿ, ಮೇಲ್ಜಾತಿ ಜಾತಿವಾದಿಗಳು ಭಾರತದಲ್ಲಿ ದಲಿತರ ಮೇಲೆ ನಡೆಸುತ್ತಿರುವ ದೌರ್ಜನ್ಯದ ಕುರಿತು ಹೇಳಲಾಗಿದೆ. ದಿನನಿತ್ಯ ಕನಿಷ್ಟ 10 ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ 2019 ರ ವರದಿಯನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ವರ್ಣ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿರುವ ಬ್ರಾಹ್ಮಣರು ತಮ್ಮ ಜಾತಿ ಪ್ರಾಬಲ್ಯ ಮೆರೆಸುವ ಪುರಾಣಗಳನ್ನು ಶಾಶ್ವತಗೊಳಿಸುವುದರ ಮೂಲಕ ದಲಿತರು, ವಿಶೇಷವಾಗಿ ಮಹಿಳೆಯರ ವಿರುದ್ಧ ಇಂತಹ ಘೋರ ಅಪರಾಧಗಳು ನಡೆಯುತ್ತಿದೆ. ಆದರೂ ಜಾತಿ ಸಮಸ್ಯೆ ಅಸ್ತಿತ್ವದಲ್ಲಿರುವುದನ್ನು ಅವರು ನಿರಾಕರಿಸುತ್ತಾರೆ. ಇದು ಬ್ರಾಹ್ಮಣ್ಯ ಪಿತೃಪ್ರಭುತ್ವವಲ್ಲದಿದ್ದರೆ, ಇನ್ನೇನು?” ಎಂದು ಪ್ರಶ್ನಿಸಿದ್ದಾರೆ.
Also Read: ಬಿಹಾರ ಚುನಾವಣಾ ಕಣದಲ್ಲಿ ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ
ಎಲ್ಗರ್ ಪರಿಷದ್ ಪ್ರಕರಣ, ಸಿಎಎ ಎನ್‌ಆರ್‌ಸಿ ವಿರೋಧಿ ಪ್ರತಿಭಟನಾಕಾರರ ಮೇಲೆ ಗುರುತರ ಪ್ರಕರಣದಡಿಯಲ್ಲಿ ಬಂಧಿಸಿರುವುದರ ಗಮನ ಸೆಲೆದಿರುವ ಅಭಿಯಾನಕಾರರು, ಭಾರತದಲ್ಲಿ ಹೆಚ್ಚುತ್ತಿರುವ ದಲಿತ ದೌರ್ಜನ್ಯ ಹಾಗೂ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ಗಟ್ಟಿದನಿಯಲ್ಲಿ ಖಂಡಿಸಬೇಕೆಂದು ಪ್ರಸ್ತುತ ಸೆನೆಟೆರ್ ಆಗಿರುವ ಕಮಲಾರಲ್ಲಿ ಆಗ್ರಹಿಸಿದ್ದಾರೆ.






