• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

ಕರ್ನಾಟಕದಲ್ಲಿ ಮತ್ತೆ ಅಭಿವೃದ್ಧಿಯ ಪರ್ವ ಆರಂಭವಾಗಲು ಹಾಗೂ ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದ ಬೊಮ್ಮಾಯಿ..

ಪ್ರತಿಧ್ವನಿ by ಪ್ರತಿಧ್ವನಿ
September 1, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

Bommai

Share on WhatsAppShare on FacebookShare on Telegram

ರಾಯಚೂರು : ಕಾಂಗ್ರೆಸ್ ಸರ್ಕಾರ ಮುಳುಗುತ್ತಿರುವ ಹಡಗಿನಂತಾಗಿದೆ. ಶೀಘ್ರದಲ್ಲೇ ಕಾಂಗ್ರೆಸ್ ನಾಯಕರು ಈ ಮುಳುಗುತ್ತಿರುವ ಹಡಗಿನಿಂದ ಜಿಗಿಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT
Dr. C S Dwarakanath On BJP / RSS : ನಾಗಪುರ ಲ್ಯಾಬೋರೇಟರಿಯಲ್ಲಿನ ಷಡ್ಯಂತ್ರಗಳನ್ನು ಸರ್ಕಾರದ ಮೂಲಕ ತರ್ತಿದ್ದಾರೆ

ಇಲ್ಲಿನ ಲಿಂಗಸುಗೂರಿನಲ್ಲಿ ನಡೆದ ಬಳ್ಳಾರಿ ಚಲೋ ಪಾದಯಾತ್ರೆಯ ಚಾಲನಾ ಸಮಾರಂಭದಲ್ಲಿ ಮಾತನಾಡಿ, . ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಕುದುರೆ ಏರಲು ದೆಹಲಿ ಮತ್ತು ಬೆಂಗಳೂರಿನ ನಡುವೆ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅವರಿಗೆ ಸರ್ಕಾರ ನಡೆಸಲೂ ಆಗುತ್ತಿಲ್ಲ, ಅಧಿಕಾರದ ಕುದುರೆ ಏರಲೂ ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಅಭಿವೃದ್ಧಿಯ ಪರ್ವ ಆರಂಭವಾಗಲು ಹಾಗೂ ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಿದೆ. ಬಿ.ಎಸ್. ಯಡಿಯೂರಪ್ಪನವರು ಹಾಗೂ ಪಕ್ಷದ ಹಿರಿಯರ ಆಶೀರ್ವಾದದೊಂದಿಗೆ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಅಬ್ಬರಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ, ನಾರಾಯಣಪುರ ಹಾಗೂ ನಂದವಾಡಗಿ ಏತನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ನಯಾಪೈಸೆಯನ್ನೂ ಬಿಡುಗಡೆ ಮಾಡದೆ ನಿರ್ಲಕ್ಷಿಸಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ : ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಬೆಂಗಳೂರಿನ ಭೂಮಾಲೀಕರಿಗೆ ಪರಿಹಾರ ನೀಡಲು ಹಣವಿದೆ, ಆದರೆ 15 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತ ರೈತರಿಗೆ ಹಣವಿಲ್ಲವೇ? ತಕ್ಷಣ ಅನುದಾನ ಬಿಡುಗಡೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಉತ್ತರ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಬೊಮ್ಮಾಯಿ ಎಚ್ಚರಿಸಿದ್ದಾರೆ.

ವಾಲ್ಮೀಕಿ ಸ್ವಾಮೀಜಿ ಎಸ್‌ಟಿ ಮೀಸಲಾತಿಗಾಗಿ ಬೆಂಗಳೂರಿನಲ್ಲಿ 232 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದಾಗ, ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕರು ಬೆಂಬಲ ನೀಡಲಿಲ್ಲ. ಬಿ.ಎಸ್. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ, ಎಲ್ಲಾ ಪಕ್ಷಗಳ ವಿಶ್ವಾಸ ಪಡೆದು ಕಾನೂನು ರೂಪಿಸಿ, ನಮ್ಮ ಸರ್ಕಾರದ ಅವಧಿಯಲ್ಲಿ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹಾಗೂ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಿಸಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಮತ್ತೆ ಎಸ್‌ಟಿ ಮೀಸಲಾತಿಯನ್ನು ಶೇ.3ಕ್ಕೆ ಇಳಿಸಿ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Basavaraj Bommai On DKS : ಈಗ ರಣ ಕಹಳೆ ಊದಿದ್ದೇವೆ, ರಣಾಂಗಣದಲ್ಲಿ ಜಯಶಾಲಿಯೂ ಆಗಿ ಬರ್ತೀವಿ..! #pratidhvani

ಸಿದ್ದರಾಮಯ್ಯ ತಮ್ಮನ್ನು ‘ಅಹಿಂದ’ ಎಂದು ಕರೆದುಕೊಳ್ಳುತ್ತಾರೆ. ಆದರೆ ಅವರ ಸರ್ಕಾರವೇ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಈ ಅನ್ಯಾಯವನ್ನು ಸರಿಪಡಿಸುವವರೆಗೆ ನಮ್ಮ ಹೋರಾಟ ಮತ್ತು ಪಾದಯಾತ್ರೆ ಮುಂದುವರಿಯಲಿದೆ. ಜನರು ಕಾಂಗ್ರೆಸ್ ಅಧಿಕಾರಕ್ಕೆ ತಂದದ್ದು ಸ್ವಂತ ಆಸ್ತಿ ಬೆಳೆಸಿಕೊಳ್ಳಲಿಕ್ಕೊ, ರಿಯಲ್ ಎಸ್ಟೇಟ್ ಉದ್ಯಮ ಮಾಡಲಿಕ್ಕೊ ಅಥವಾ ಬಡವರ-ದೀನದಲಿತರ ಹಣವನ್ನು ಲೂಟಿ ಮಾಡಲಿಕ್ಕೊ?” ಎಸ್‌ಟಿ (ST) ಜನಾಂಗಕ್ಕೆ ಸೇರಿದ ಬಡವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಬರೋಬ್ಬರಿ 187 ಕೋಟಿ ರೂಪಾಯಿ ಹಣವನ್ನು ಈ ಸರ್ಕಾರ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.

​”ದಲಿತರ ಹಾಗೂ ಪರಿಶಿಷ್ಟ ಪಂಗಡದ ಜನರ ಹಣವನ್ನು ಲೂಟಿ ಮಾಡಿ, ಅದನ್ನು ನಾವು ಪ್ರಶ್ನೆ ಮಾಡಿದರೆ ನಮಗೇ ‘ರಾಜಕೀಯ ಮಾಡುತ್ತಿದ್ದೀರಿ’, ‘ದಲಿತ ವಿರೋಧಿಗಳು’ ಎಂದು ಪಟ್ಟ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ? ನಿಜವಾದ ದಲಿತ ವಿರೋಧಿ ಕೆಲಸ ಮಾಡಿದ್ದು ಈ ಸರ್ಕಾರ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಲೂಟಿಯಾದ ಹಣ ಸಂಪೂರ್ಣವಾಗಿ ಹಿಂತಿರುಗಿ, ವಾಲ್ಮೀಕಿ ನಿಗಮದ ಮೂಲಕ ಎಸ್‌ಟಿ ಜನಾಂಗದ ಲಕ್ಷಾಂತರ ಫಲಾನುಭವಿಗಳಿಗೆ ತಲುಪಿ ನ್ಯಾಯ ಸಿಗುವವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಬಸವರಾಜ ಬೊಮ್ಜಾಯಿ ಗುಡುಗಿದ್ದಾರೆ.

Tags: B NagendraB S YadiyurappaB SriramuluB Y VijayendraBasavara BommaiBellary Foot Marchbjp karnatakaCM DK Shivakumarcongress karnatakaDalit CommunityDalit community growingPratidhvaniR AshokValmiki Scam
Previous Post

ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

Next Post

ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

Related Posts

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?
Top Story

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?

by ಪ್ರತಿಧ್ವನಿ
September 1, 2026
0

ಬೆಂಗಳೂರಿನ ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISc) ತಜ್ಞರ ತಂಡ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರೊ. ಆಶೀಶ್ ವರ್ಮಾ ನೇತೃತ್ವದ ಸಿವಿಲ್...

Read moreDetails
ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

September 1, 2026
ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

September 1, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

September 1, 2026
ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

September 1, 2026
Next Post
ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada