• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಂಗಳ ಗ್ರಹದಲ್ಲಿ ಹರಿಯುತ್ತಿತ್ತಾ ಗಂಗೆಯಷ್ಟೇ ಬೃಹತ್ ನದಿಗಳು? ವಿಜ್ಞಾನಿಗಳ ಹೊಸ ಸಂಶೋಧನೆ ಚಕಿತಗೊಳಿಸಿದೆ!

ಪ್ರತಿಧ್ವನಿ by ಪ್ರತಿಧ್ವನಿ
June 20, 2026
in Top Story
0
ಎಚ್ಚರ! ನೀವು ಬಳಸುವ ಔಷಧವೂ ಪಟ್ಟಿಯಲ್ಲಿದೆಯೇ? 16 ಔಷಧಗಳಿಗೆ ಕೇಂದ್ರ ಸರ್ಕಾರ ಬ್ಯಾನ್!
Share on WhatsAppShare on FacebookShare on Telegram

ವಿಜ್ಞಾನ ಲೋಕವನ್ನು ಅಚ್ಚರಿಗೊಳಿಸುವಂತಹ ಮಹತ್ವದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಕೆಂಪು ಗ್ರಹ ಎಂದು ಕರೆಯಲ್ಪಡುವ ಮಂಗಳ ಗ್ರಹದಲ್ಲಿ ಒಂದು ಕಾಲದಲ್ಲಿ ಭೂಮಿಯ ಗಂಗಾ ಹಾಗೂ ಅಮೆಜಾನ್ ನದಿಗಳಿಗೆ ಸರಿಸಾಟಿಯಾದ ಬೃಹತ್ ನದಿ ವ್ಯವಸ್ಥೆಗಳು ಹರಿಯುತ್ತಿದ್ದವು ಎಂಬುದನ್ನು ವಿಜ್ಞಾನಿಗಳು ಮೊದಲ ಬಾರಿಗೆ ನಕ್ಷೆ (ಮ್ಯಾಪಿಂಗ್) ಮೂಲಕ ದೃಢಪಡಿಸಿದ್ದಾರೆ.

ADVERTISEMENT

ಅಮೆರಿಕದ ಯುನಿವರ್ಸಿಟಿ ಆಫ್ ಟೆಕ್ಸಾಸ್ ಸಂಶೋಧಕರು ನಡೆಸಿದ ಈ ಅಧ್ಯಯನದ ವರದಿ ಪ್ರತಿಷ್ಠಿತ ‘ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್’ (PNAS) ಜರ್ನಲ್‌ನಲ್ಲಿ ಪ್ರಕಟವಾಗಿದೆ. ಸಂಶೋಧನೆಯಲ್ಲಿ ಮಂಗಳ ಗ್ರಹದಲ್ಲಿ ಒಟ್ಟು 16 ಬೃಹತ್ ನದಿ ಪಾತ್ರಗಳು ಪತ್ತೆಯಾಗಿದ್ದು, ಅವುಗಳು ಪರಸ್ಪರ ಸಂಪರ್ಕ ಹೊಂದಿದ್ದ ಜಲಮಾರ್ಗಗಳ ಭಾಗವಾಗಿದ್ದವು ಎಂದು ತಿಳಿಸಲಾಗಿದೆ.

HD Kumaraswamy : ನಮ್ಮ ಮೈತ್ರಿಯ ವಿಚಾರದಲ್ಲಿ ನಿಮಗೆ ಹೇಳಬೇಕೆಂದ್ರೆ..! #bjp #jds #byvijayendra

ಕೋಟ್ಯಂತರ ವರ್ಷಗಳ ಹಿಂದೆ ಮಂಗಳ ಗ್ರಹವು ಇಂದಿನಂತೆ ನಿರ್ಜೀವವಾಗಿರದೆ, ಹೆಚ್ಚು ಬೆಚ್ಚಗಿನ ಹಾಗೂ ಆರ್ದ್ರ ವಾತಾವರಣ ಹೊಂದಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆ ಕಾಲದಲ್ಲಿ ಸುರಿದ ಭಾರಿ ಮಳೆಯಿಂದ ಕಣಿವೆಗಳು ನಿರ್ಮಾಣವಾಗಿ, ನದಿಗಳ ಮೂಲಕ ನೀರು ಸರೋವರಗಳು ಹಾಗೂ ಸಾಗರಗಳಿಗೆ ಹರಿಯುತ್ತಿತ್ತು ಎನ್ನಲಾಗಿದೆ.ಭೂಮಿಯ ಮೇಲಿನ ನದಿ ಪಾತ್ರಗಳು ಜೀವವೈವಿಧ್ಯಕ್ಕೆ ಆಶ್ರಯವಾಗಿರುವಂತೆ, ಮಂಗಳದಲ್ಲಿಯೂ ಇಂತಹ ಪರಿಸ್ಥಿತಿ ಇದ್ದಿದ್ದರೆ ಅಲ್ಲಿ ಸೂಕ್ಷ್ಮಜೀವಿಗಳು ಬದುಕಿರುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ.

Bidadi Farmers Protest : ಪ್ರತಿಭಟನೆಯಲ್ಲಿ ಹೋರಾಟಗಾರ ಅಸ್ವಸ್ಥ.!  #pratidhvani

ಈ ಅಧ್ಯಯನಕ್ಕಾಗಿ ವಿಜ್ಞಾನಿಗಳು ನಾಸಾದ ಮಾರ್ಸ್ ಆರ್ಬಿಟರ್ ಲೇಸರ್ ಆಲ್ಟಿಮೀಟರ್ (MOLA) ಮತ್ತು ಮಾರ್ಸ್ ರೆಕನೈಸನ್ಸ್ ಆರ್ಬಿಟರ್‌ನ ಕಾಂಟೆಕ್ಸ್ಟ್ ಕ್ಯಾಮೆರಾ (CTX) ಒದಗಿಸಿದ ಮಾಹಿತಿಯನ್ನು ಬಳಸಿಕೊಂಡಿದ್ದಾರೆ.ಸಂಶೋಧನೆಯಲ್ಲಿ ಗುರುತಿಸಲಾದ 19 ಪ್ರಮುಖ ಜಲಮಾರ್ಗಗಳ ಪೈಕಿ 16 ನದಿ ಪಾತ್ರಗಳು ತಲಾ ಒಂದು ಲಕ್ಷ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿವೆ ಎಂಬುದು ವಿಶೇಷ.

 

ಮಣ್ಣಿನ ಸವೆತವೂ ಭಾರೀ ಪ್ರಮಾಣದಲ್ಲಿ ನಡೆದಿದೆ,

ಈ ನದಿಗಳು ಮಂಗಳದ ಕೇವಲ 5 ಪ್ರತಿಶತ ಪ್ರದೇಶದಲ್ಲಿದ್ದರೂ, ಗ್ರಹದ ಒಟ್ಟು ನದಿ ಸವೆತದ 42 ಪ್ರತಿಶತಕ್ಕೆ ಕಾರಣವಾಗಿವೆ. ಸುಮಾರು 28 ಸಾವಿರ ಕ್ಯೂಬಿಕ್ ಕಿಲೋಮೀಟರ್ ಮಣ್ಣು ಈ ಜಲಮಾರ್ಗಗಳ ಮೂಲಕ ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಹೂಳಿನಲ್ಲಿ ಜೀವಕ್ಕೆ ಅಗತ್ಯವಾದ ಪೋಷಕಾಂಶಗಳು ಇರಬಹುದೆಂಬ ನಿರೀಕ್ಷೆಯೂ ಮೂಡಿದೆ.

KPCC ಅಧ್ಯಕ್ಷರಾಗಿ ನೇಮಕಗೊಂಡಿರುವ , ಪರಿಷತ್ ಚುನಾವಣೆಯಲ್ಲಿ ಜಯಗಳಿಸಿರುವ BK ಹರಿಪ್ರಸಾದ್ ಅವರಿಗೆ ಅಭಿನಂದನೆಗಳು

ಸುಮಾರು 450 ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಮಂಗಳ ಗ್ರಹದಲ್ಲಿ 200 ಕೋಟಿ ವರ್ಷಗಳ ಹಿಂದಿನವರೆಗೂ ನೀರು ಇತ್ತು ಎಂದು ವಿಜ್ಞಾನಿಗಳು ನಂಬಿದ್ದಾರೆ. ಬಳಿಕ ಕಾಂತೀಯ ಕ್ಷೇತ್ರ ಹಾಗೂ ವಾತಾವರಣದ ನಷ್ಟದಿಂದ ನೀರು ಸಂಪೂರ್ಣವಾಗಿ ಆವಿಯಾಗಿ ಗ್ರಹ ಬರಿದಾಗಿದೆ.ಈಗ ಪತ್ತೆಯಾಗಿರುವ 16 ಬೃಹತ್ ನದಿ ಪಾತ್ರಗಳು ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ತೆರಳಲಿರುವ ರೋವರ್‌ಗಳು ಹಾಗೂ ಪ್ರಾಚೀನ ಜೀವದ ಕುರುಹುಗಳನ್ನು ಹುಡುಕುವ ಸಂಶೋಧನಾ ಮಿಷನ್‌ಗಳಿಗೆ ಪ್ರಮುಖ ಗುರಿಯಾಗಲಿವೆ.

Tags: #Astronomy#KannadaNews#LifeOnMars#Mars#MarsDiscovery#MarsMission#MarsRiver#RedPlanet#ScienceNews#ScienceUpdate#SpaceExploration#SpaceResearchNASAResearchTechnology
Previous Post

ಇಸ್ರೇಲ್ ವಿರುದ್ಧ ಇರಾನ್‌ ಆಕ್ರೋಶ; ಜಾಗತಿಕ ತೈಲ ಮಾರುಕಟ್ಟೆಗೆ ಆಘಾತದ ಭೀತಿ

Next Post

ನಿರ್ಮಾಣ ಮಾರುಕಟ್ಟೆಯಲ್ಲಿ ರೈತ ಮತ್ತು ಕೃಷಿ

Related Posts

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು
Top Story

ಸತೀಶ್ ಜಾರಕಿಹೊಳಿ ವಿರುದ್ಧದ ED ದಾಳಿ ಹಿಂದೆ ಕಾಂಗ್ರೆಸ್ ಕೈವಾಡ? ಕುಮಾರಸ್ವಾಮಿ ಆರೋಪ; ಡಿಕೆಶಿ ಸವಾಲು

by ಪ್ರತಿಧ್ವನಿ
September 16, 2026
0

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿತ...

Read moreDetails
ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

ಬಿಗ್‌ಬಾಸ್ ಮನೆಯಲ್ಲಿ ಓಂ ಪ್ರಕಾಶ್ ಆರೋಗ್ಯ ಕೈಕೊಟ್ಟಿದ್ದೇಕೆ?‌ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರಕಾಶ್!

September 16, 2026
‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

‘ಮುಡಾ ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ’! ಸ್ವಪಕ್ಷೀಯರ ವಿರುದ್ಧ ರಾಜಣ್ಣ ಸ್ಫೋಟಕ ಹೇಳಿಕೆ

September 15, 2026
100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

100 ದಿನಗಳ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಗೈರು: ಸಿಎಂ ಡಿಕೆಶಿ ಕೊಟ್ಟ ಸ್ಪಷ್ಟನೆ ಏನು?

September 15, 2026
ಹಿಮಾಲಯಕ್ಕೆ ಕಾದಿದೆಯೇ ದೊಡ್ಡ ಅಪಾಯ?ದಕ್ಷಿಣ ಏಷ್ಯಾದ ನೀರಿನ ಭದ್ರತೆಗೆ ಎದುರಾಯ್ತು ಹೊಸ ಸವಾಲು!

ಹಿಮಾಲಯಕ್ಕೆ ಕಾದಿದೆಯೇ ದೊಡ್ಡ ಅಪಾಯ?ದಕ್ಷಿಣ ಏಷ್ಯಾದ ನೀರಿನ ಭದ್ರತೆಗೆ ಎದುರಾಯ್ತು ಹೊಸ ಸವಾಲು!

September 15, 2026
Next Post
ನಿರ್ಮಾಣ ಮಾರುಕಟ್ಟೆಯಲ್ಲಿ ರೈತ ಮತ್ತು ಕೃಷಿ

ನಿರ್ಮಾಣ ಮಾರುಕಟ್ಟೆಯಲ್ಲಿ ರೈತ ಮತ್ತು ಕೃಷಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada