• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿದ್ದರಾಮಯ್ಯನವರು ಹಿರಿಯರಿದ್ದರೇನಂತೆ? ವೆಂಕಟೇಶ್ ಪ್ರಸಾದ್ ಕಿರಿಯರಿದ್ದರೇನಂತೆ? ಸನಾತನ ಪರಂಪರೆ ಏನು ಹೇಳುತ್ತೆ?

ಸಿದ್ದರಾಮಯ್ಯನವರು ಮರ್ಯಾದಾ ಪುರುಷೋತ್ತಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶ ನಡವಳಿಕೆಯನ್ನು ನೋಡಿಯಾದರೂ ಕಲಿಯಬೇಕಿತ್ತು..

ಪ್ರತಿಧ್ವನಿ by ಪ್ರತಿಧ್ವನಿ
March 28, 2026
in Top Story, ಅಂಕಣ, ಇದೀಗ, ಕ್ರೀಡೆ, ದೇಶ, ರಾಜಕೀಯ
0
ಸಿದ್ದರಾಮಯ್ಯನವರು ಹಿರಿಯರಿದ್ದರೇನಂತೆ? ವೆಂಕಟೇಶ್ ಪ್ರಸಾದ್ ಕಿರಿಯರಿದ್ದರೇನಂತೆ? ಸನಾತನ ಪರಂಪರೆ ಏನು ಹೇಳುತ್ತೆ?
Share on WhatsAppShare on FacebookShare on Telegram

ವಿಶೇಷ ಲೇಖನ : ದಿನೇಶ್‌ ಅಮೀನ್‌ ಮಟ್ಟ , ಹಿರಿಯ ಪತ್ರಕರ್ತರು..

ADVERTISEMENT

ಬೆಂಗಳೂರು : ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಆಹ್ವಾನ ನೀಡಿದ್ದಾರೆ. ಆದರೆ ಈ ವೇಳೆ ಕ್ಲಿಕ್ಕಿಸಲಾಗಿರುವ ಫೋಟೋ ಹಂಚಿಕೊಂಡು ಸಂಸದ ತೇಜಸ್ವಿ ಸೂರ್ಯ ಸಿದ್ದರಾಮಯ್ಯರನ್ನು ಟೀಕಿಸಿದ್ದರು. ಅಲ್ಲದೆ  ಇದು ರಾಜಕಾರಣಿಗಳ ಅಹಂಕಾರದ ಕನ್ನಡಿಯಾಗಿದೆ ಎಂದು ಜರಿದಿದ್ದರು.

RCB on IPL Match : ಹೇಗಿದೆ ಗೊತ್ತಾ ಹೊಸ ರೂಲ್ಸ್..? ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..! #pratidhvani

ಇದಕ್ಕೆ ಹಿರಿಯ ಪತ್ರಕರ್ತರಾಗಿರುವ ದಿನೇಶ್‌ ಅಮೀನ್‌ ಮಟ್ಟು ಸುದೀರ್ಘ ಬರಹದ ಜೊತೆಗೆ ತೇಜಸ್ವಿ ಸೂರ್ಯ ಮದುವೆಯ ಸಮಯದಲ್ಲಿನ ಫೊಟೋ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಅವರ ಬರಹ ಈ ಕೆಳಗಿನಂತಿದೆ..

ದೇಶಕ್ಕಾಗಿ ತನ್ನ ಕುಟುಂಬವನ್ನೇ ತ್ಯಾಗಮಾಡಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಕ್ರಿಕೆಟ್ ಕಪ್ ಗಳನ್ನು ಗೆದ್ದು ಕೋಟ್ಯಂತರ ಭಾರತೀಯರು ಇಡೀ ಜಗತ್ತಿನ ಎದುರು ತಲೆಗಳನ್ನು ಆಕಾಶದೆತ್ತರಕ್ಕೆ ಏರಿಸಿ ನಡೆದಾಡುವಂತೆ ಮಾಡಿದ್ದ ಅಪ್ರತಿಮ ಕ್ರಿಕೆಟ್ ಕಲಿ ಮತ್ತು ಹಿರಿಯರೂ ಜನಾನುರಾಗಿಗಳಾಗಿರುವ ಶ್ರೀಶ್ರೀಶ್ರೀ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬರುತ್ತಿದ್ದಂತೆಯೇ…

ಇದನ್ನೂ ಓದಿ : ಭ್ರಷ್ಟಾಚಾರದಲ್ಲಿ ಬೆಂದಿರುವ ಅಸ್ಸಾಂನಲ್ಲಿ ಈ ಸಲ ಭಾರಿ ಬದಲಾವಣೆ : ಡಿ.ಕೆ. ಶಿವಕುಮಾರ್..

ಜುಜುಬಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಕೂತ ಕುರ್ಚಿಯಿಂದ ದಿಗ್ಗನೇ ಎದ್ದು ಶ್ರೀಗಂಧದ ಮಾಲೆಯನ್ನು ಹಿಡಿದು ಮುಖ್ಯದ್ವಾರದ ವರೆಗೆ ಹೋಗಿ ತಲೆ ಬಾಗಿ ನಡುಬಗ್ಗಿಸಿ ಸಾಧ್ಯವಾದರೆ ಸಾಷ್ಟಾಂಗ ವಂದನೆ ಸಲ್ಲಿಸಿ ಸ್ವಾಗತಿಸಬೇಕಾಗಿತ್ತು. ಸಿದ್ದರಾಮಯ್ಯನವರು ವಯಸ್ಸಿನಲ್ಲಿ ಹಿರಿಯರಿದ್ದರೇನಂತೆ? ವೆಂಕಟೇಶ್ ಪ್ರಸಾದ್ ಕಿರಿಯರಿದ್ದರೇನಂತೆ? ನಮ್ಮ ಸನಾತನ ಪರಂಪರೆ ಏನು ಹೇಳುತ್ತೆ? ಮುಖ್ಯಮಂತ್ರಿಯವರ ನಡವಳಿಕೆ
ಅತಿಖಂಡನೀಯ.

ಸಿದ್ದರಾಮಯ್ಯನವರು ಮರ್ಯಾದಾ ಪುರುಷೋತ್ತಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶ ನಡವಳಿಕೆಯನ್ನು ನೋಡಿಯಾದರೂ ಕಲಿಯಬೇಕಿತ್ತು. ಹಿಂದುಳಿದ ಜಾತಿಗೆ ಸೇರಿರುವ ಮೋದಿಯವರು ಹೇಗೆ ತಮ್ಮ ಪಕ್ಷದ ಹಿರಿಯರು ಮತ್ತು ವಿಪ್ರಕುಲೊತ್ತಮರಾದ ಅಟಲ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣೀ, ಮುರಳಿ ಮನೋಹರ ಜೋಷಿ ಅವರನ್ನು ಕಂಡ ಕೂಡಲೇ ಓಡೋಡಿ ಹೋಗಿ ಅವರ ಪಾದಕ್ಕೆ ಬಿದ್ದು ನಮಸ್ಕರಿಸುತ್ತಿದ್ದರು. ಅವರನ್ನು ಕರೆದುಕೊಂಡು ಹೋಗಿ ಮಾರ್ಗದರ್ಶಕ ಮಂಡಲದ ಸಿಂಹಾಸನದಲ್ಲಿ ಕೂರಿಸಿ ಗೌರವಿಸಿದ್ದರು ಎನ್ನುವುದು ಎಲ್ಲ ಜನನಾಯಕರಿಗೆ ಒಂದು ಆದರ್ಶವಾಗಬೇಕು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರ ಮನೆಸುತ್ತ ಏನಿದು ದುರ್ನಾತ? ಯಾರಾದರೂ ಮಹಾನಗರಪಾಲಿಕೆಗೆ ಪೋನ್ ಮಾಡಿ ತುರ್ತಾಗಿ ಅಸಹ್ಯಕರ ತ್ಯಾಜ್ಯ ವಿಲೇವಾರಿ ಮಾಡಲು ಹೇಳಿ. ದುರ್ನಾತ ಕಸದ್ದಲ್ವಾ? ಜಾತಿಯದ್ದಾ? ಮೆದುಳು ತೊಳೆಯುವುದು ಪೌರಕಾರ್ಮಿಕರ ಕೆಲಸ ಅಲ್ವಾ? ಹಾಗಿದ್ದರೆ ಆ ಮಹಾನುಭಾವರ ಕೈಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ “ಜಾತಿ ವಿನಾಶ’ ಕೃತಿಯನ್ನು ಕೊಡಿ. ಇದೀಗ ಬಂದ ಪೋಟೊ ನೋಡಿ. ಸನ್ಮಾನ್ಯ ಸಂಸದರು ಸಿದ್ದರಾಮಯ್ಯನವರ ಪಾದಕ್ಕೆ ಬಿದ್ದು ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದು. ಪೋಟೋ ಕೆಳಗಡೆ ಇದೆ.

Tags: Benglore South MPbjp karnatakaCM Siddaramaiahcongress karnatakadinesh amin mattuDK ShivakumarGovernment of KarnatakaIPL Match 2026JournalistKarnataka Politicskarnataka state Cricket associationKSCAMP Tejasvi suryaPM Narendra ModiPoliticsPratidhvaniVenkatesh Prasad
Previous Post

ಭ್ರಷ್ಟಾಚಾರದಲ್ಲಿ ಬೆಂದಿರುವ ಅಸ್ಸಾಂನಲ್ಲಿ ಭಾರಿ ಬದಲಾವಣೆ : ಡಿ.ಕೆ. ಶಿವಕುಮಾರ್..

Next Post

ಐಪಿಎಲ್‌ ಆರಂಭದಲ್ಲೇ ಧೋನಿ ಫ್ಯಾನ್ಸ್‌ಗೆ ಬಿಗ್‌ ಶಾಕ್‌ : ಚೆನೈ ತಂಡ ಹೇಳಿದ್ದೇನು..?

Related Posts

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ
Top Story

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

by ಪ್ರತಿಧ್ವನಿ
May 2, 2026
0

ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಪಶ್ಚಿಮ ಬಂಗಾಳದಲ್ಲಿ 15 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಇಸಿಐ ಆದೇಶ

ಸಿಎಂ ಕುರ್ಚಿ ಕಲಹಕ್ಕೆ ಹೊಸ ತಿರುವು: ಖರ್ಗೆಗೂ ಆಸೆ ಎಂದ ಅಶೋಕ್

May 1, 2026
Next Post
ಐಪಿಎಲ್‌ ಆರಂಭದಲ್ಲೇ ಧೋನಿ ಫ್ಯಾನ್ಸ್‌ಗೆ ಬಿಗ್‌ ಶಾಕ್‌ : ಚೆನೈ ತಂಡ ಹೇಳಿದ್ದೇನು..?

ಐಪಿಎಲ್‌ ಆರಂಭದಲ್ಲೇ ಧೋನಿ ಫ್ಯಾನ್ಸ್‌ಗೆ ಬಿಗ್‌ ಶಾಕ್‌ : ಚೆನೈ ತಂಡ ಹೇಳಿದ್ದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada