ಬೆಂಗಳೂರು : ಸ್ನಾಯು ಸೆಳೆತದಿಂದ ಬಳಲುತ್ತಿರುವ ಚೆನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಎಂ.ಎಸ್. ಧೋನಿ 19ನೇ ಐಪಿಎಲ್ ಆವೃತ್ತಿಯ ಮೊದಲೆರಡು ವಾರಗಳ ಪಂದ್ಯದಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.

ಈ ಕುರಿತು ಐಪಿಎಲ್ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ಧೋನಿ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶಾಕಿಂಗ್ ಮಾಹಿತಿ ನೀಡಿದೆ. ಧೋನಿ ಕಾಲಿನ ಗಾಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದಾಗಿ ಪಂದ್ಯಾವಳಿಯ ಆರಂಭದಲ್ಲಿ ತಂಡವು ತಮ್ಮ ಸ್ಟಾರ್ ಆಟಗಾರನಿಲ್ಲದೆ ಪಂದ್ಯಗಳನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಲಾಕ್‌ಡೌನ್: “ಇದು ಭಾರತದಲ್ಲಲ್ಲ, ಪಾಕಿಸ್ತಾನದಲ್ಲಿ ನಡೆಯುತ್ತಿದೆ” – ನಿರ್ಮಲಾ ಸೀತಾರಾಮನ್
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮಾರ್ಚ್ 30 ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಈ ವರ್ಷ 45ನೇ ವಸಂತಕ್ಕೆ ಕಾಲಿಡುತ್ತಿರುವ ಧೋನಿ, ಸಿಎಸ್‌ಕೆ (Chennai Super Kings) ತಂಡದಲ್ಲಿರುವ ನಾಲ್ವರು ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಸಂಜು ಸ್ಯಾಮ್ಸನ್, ಕಾರ್ತಿಕ್ ಶರ್ಮಾ ಮತ್ತು ಉರ್ವಿಲ್ ಪಟೇಲ್ ಇವರ ಜೊತೆ 278 ಪಂದ್ಯಗಳೊಂದಿಗೆ, ಧೋನಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಮಾತ್ರ ಭಾಗಿಯಾಗುತ್ತಿರುವ ಧೋನಿ ಮೊಣಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಆದರೆ 2023 ರಲ್ಲಿ ಸಿಎಸ್‌ಕೆ ತಂಡಕ್ಕೆ ತಮ್ಮದೇ ಆದ ರೀತಿಯಲ್ಲಿ ಧೋನಿ ಶಕ್ತಿ ಮತ್ತು ಚೈತನ್ಯ ತುಂಬುತ್ತಲೇ ಬರುತ್ತಿದ್ದಾರೆ.






