• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸರ್ಕಾರಿ ಉತ್ಸವಗಳಲ್ಲಿ ಡಿ ಜೆ ಸೌಂಡ್‌ ಸಿಸ್ಟಂ ಬ್ಯಾನ್‌ ಮಾಡಿ : ಸದನದಲ್ಲಿ ಸಚಿವ ಲಾಡ್‌ ಒತ್ತಾಯ..

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ ಕಾರ್ಮಿಕ ಸಚಿವ ಲಾಡ್..

ಪ್ರತಿಧ್ವನಿ by ಪ್ರತಿಧ್ವನಿ
March 18, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ಸರ್ಕಾರಿ ಉತ್ಸವಗಳಲ್ಲಿ ಡಿ ಜೆ ಸೌಂಡ್‌ ಸಿಸ್ಟಂ ಬ್ಯಾನ್‌ ಮಾಡಿ : ಸದನದಲ್ಲಿ ಸಚಿವ ಲಾಡ್‌ ಒತ್ತಾಯ..
Share on WhatsAppShare on FacebookShare on Telegram

ಬೆಂಗಳೂರು : ಸರ್ಕಾರದ ವತಿಯಿಂದ ಆಯೋಜಿಸುವ ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವುದು ಹಾಗೂ ಅಬ್ಬರದ ಡಿ. ಜೆ ಸಿಸ್ಟಂ ಬಳಕೆಗೆ ಕಡಿವಾಣ ಹಾಕುವ ಕುರಿತು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸಲಹೆಗಳನ್ನು ನೀಡಿದ್ದಾರೆ.‌

ADVERTISEMENT
Kogilu Demolition Row: ಕೋಗಿಲು ನಿರಾಶ್ರಿತರಿಗೆ ಯುಗಾದಿ, ರಂಜಾನ್ ಗಿಫ್ಟ್ 30 ಅರ್ಹ ಕುಟುಂಬಕ್ಕೆ ನಿವೇಶನ ಪತ್ರ..!

ವಿಧಾನಸಭೆಯಲ್ಲಿಂದು ಮಾತನಾಡಿ, ಸರ್ಕಾರ ಆಯೋಜಿಸುವ ಉತ್ಸವಗಳಲ್ಲಿ ಲಕ್ಷಾಂತರ ಹಣ ವೆಚ್ಚ ಮಾಡಿ ಹೊರಗಿನಿಂದ ಕಲಾವಿದರನ್ನು ಕರೆಸುವ ಬದಲು ನಮ್ಮ ರಾಜ್ಯದ ಸ್ಥಳೀಯ ಕಲಾವಿದರನ್ನು ಆಹ್ವಾನಿಸಿದರೆ ಆ ಉತ್ಸವಗಳ ಅರ್ಥವೂ ಹೆಚ್ಚಾಗುತ್ತದೆ ಹಾಗೆಯೇ ಸರ್ಕಾರದ ಹಣ ಅನಗತ್ಯವಾಗಿ ಖರ್ಚಾಗುವುದೂ ತಪ್ಪುತ್ತದೆ ಎಂದು ಹೇಳಿದ್ದಾರೆ.

ಡೊಳ್ಳು ಕುಣಿತ, ಕಂಸಾಳೆ, ಜಗ್ಗಲಿಗೆ, ಕರಡಿ ಮಜಲು, ಹಗಲು ವೇಷ, ಯಕ್ಷಗಾನ, ಹುಲಿ ಕುಣಿತದಂತಹ ನಮ್ಮ ಕನ್ನಡ ಮಣ್ಣಿನ ಕಲೆ ಪ್ರದರ್ಶಿಸುವ ಕಲಾವಿದರಿಗೆ ಅವಕಾಶ ಕೊಟ್ಟರೆ, ನಮ್ಮ ಪರಂಪರೆಯ ಪ್ರದರ್ಶನವೂ ಯುವ ಪೀಳಿಗೆಗೆ ತಲುಪುತ್ತದೆ, ಕಲಾವಿದರಿಗೂ ಅವಕಾಶ ಹಾಗೂ ಗೌರವ ಸಂಭಾವನೆಯೂ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : BREAKING NEWS : ಕೋಗಿಲು ನಿರಾಶಿತರಿಗೆ‌ ಸರ್ಕಾರದಿಂದ ಯುಗಾದಿ, ರಂಜಾನ್‌ ಗಿಫ್ಟ್..!

ನಾಡಿನ ಭವ್ಯ ಪರಂಪರೆ ಹಾಗೂ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಉತ್ಸವಗಳನ್ನು ಏರ್ಪಡಿಸುವುದು ತುಂಬ ಅವಶ್ಯಕ. ಆದರೆ ಈ ಉತ್ಸವಗಳ ಆಯೋಜನೆ ಅನಗತ್ಯ ಖರ್ಚು ವೆಚ್ಚವಾಗಬಾರದು. ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೇರಿಸಲು ದೊಡ್ಡ ದೊಡ್ಡ ಕಲಾವಿದರಿಗೆ ಹೆಚ್ಚಿನ ವೆಚ್ಚ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಜಯಂತಿಗಳಲ್ಲಿ ಡಿ. ಜೆ ಸಿಸ್ಟಂ: ಕಟ್ಟು ನಿಟ್ಟಿನ ಕ್ರಮ ಅಗತ್ಯ

ಸರ್ಕಾರ ಏರ್ಪಡಿಸುವ ಉತ್ಸವಗಳಲ್ಲಿ ಡಿ ಜೆ ಸೌಂಡ್‌ ಸಿಸ್ಟಂನಿಂದ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ಉತ್ಸವಗಳು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲು ಅವಕಾಶ ನೀಡಬಾರದು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.

ಹಲವಾರು ಸರ್ಕಾರಿ ಉತ್ಸವಗಳಲ್ಲಿ ನಿಯಮ ಮೀರಿ ಶಬ್ಧ ಮಾಲಿನ್ಯ ಉಂಟು ಮಾಡುವ ಡಿಜೆಗಳನ್ನು, ಸೌಂಡ್ ಸಿಸ್ಟಂಗಳನ್ನು ಬಳಸಲಾಗುತ್ತಿದೆ. ನಾಡಿನ ಭವ್ಯ ಪರಂಪರೆ, ಗತ ಇತಿಹಾಸದ ಮೆಲುಕು ಹಾಕಬೇಕಾದ ಉತ್ಸವಗಳಲ್ಲಿ ಅಶ್ಲೀಲ ಹಾಡುಗಳ ಬಳಕೆ ವ್ಯಾಪಕವಾಗಿದೆ. ಅಲ್ಲದೇ ಆರೋಗ್ಯಕ್ಕೆ ತುಂಬ ಹಾನಿಕಾರಕವಾಗಬಲ್ಲಂತಹ ಇಂತಹ ಸೌಂಡ್ ಸಿಸ್ಟಂಗಳ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸುವುದು ತುಂಬ ಅವಶ್ಯಕ ಎಂದು ಸಚಿವ ಸಂತೋಷ್‌ ಲಾಡ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Tags: Artists Of interstatecongress karnatakaDJ Sound SystemGovernment FunctionsGovernment UtsavsJayantiskannada artistKarnataka GovernmentKarnatka Budget SessionNoisePratidhvaniSantosh LadSound PollutionYakshagaana
Previous Post

BREAKING NEWS : ಕೋಗಿಲು ನಿರಾಶಿತರಿಗೆ‌ ಸರ್ಕಾರದಿಂದ ಯುಗಾದಿ, ರಂಜಾನ್‌ ಗಿಫ್ಟ್..!

Next Post

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ ಹೀಗಾಗಿ ಡಿವೋರ್ಸ್‌ ಪಡೆದೆ : ಖರ್ಗೆಗೆ ದೊಡ್ಡಗೌಡ್ರ ಕೌಂಟರ್

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ ಪ್ರಕರಣ; ಬೆಂಗಳೂರು ಪೊಲೀಸರ ವಿರುದ್ಧ ಈ ಭಾರಿ ಕ್ರಮ!

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
Next Post
ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ ಹೀಗಾಗಿ ಡಿವೋರ್ಸ್‌ ಪಡೆದೆ : ಖರ್ಗೆಗೆ ದೊಡ್ಡಗೌಡ್ರ ಕೌಂಟರ್

ಕಾಂಗ್ರೆಸ್‌ ಜೊತೆ ಬಲವಂತದ ಮದುವೆಯಲ್ಲಿದ್ದೆ ಹೀಗಾಗಿ ಡಿವೋರ್ಸ್‌ ಪಡೆದೆ : ಖರ್ಗೆಗೆ ದೊಡ್ಡಗೌಡ್ರ ಕೌಂಟರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada