• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದಲಿತ ಬಳಿಕ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ..! : ಈ ನಾಯಕನಿಗೆ ಸಿಎಂ ಪಟ್ಟ..?

ಇಷ್ಟು ದಿನಗಳ ಕಾಲ ಸಹನೆಯಿಂದ ಸಹಕಾರ ನೀಡಿದ್ದೇವೆ, ಇನ್ನು ಮುಂದೆ ಅನ್ಯಾಯ ಸಹಿಸಲ್ಲ ಎಂದ ಲಿಂಗಾಯತ ಸಮುದಾಯ..

ಪ್ರತಿಧ್ವನಿ by ಪ್ರತಿಧ್ವನಿ
February 27, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ದಲಿತ ಬಳಿಕ ಲಿಂಗಾಯತ ಮುಖ್ಯಮಂತ್ರಿ ಅಸ್ತ್ರ..! : ಈ ನಾಯಕನಿಗೆ ಸಿಎಂ ಪಟ್ಟ..?
Share on WhatsAppShare on FacebookShare on Telegram

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯಕತ್ವದ ಕಿತ್ತಾಟ, ದಲಿತ ಸಿಎಂ ಬೇಡಿಕೆಗಳು ಹೈಕಮಾಂಡ್  ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಈಗಾಗಲೇ ಎರಡನೇ ಬಾರಿಗೆ ಸಿದ್ದರಾಮಯ್ಯ ಬಳಿಕ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು ಎಂಬ ಹಕ್ಕೊತ್ತಾಯಗಳು ಬಲವಾಗಿವೆ. ಈ ನಡುವೆಯೇ ಲಿಂಗಾಯತ ಸಮುದಾಯಕ್ಕೂ ಸಿಎಂ ಸ್ಥಾನ ಬೇಕೆಂದು ಮತ್ತೊಂದು ಕೂಗು ಜೋರಾಗುತ್ತಿದೆ.

ADVERTISEMENT
Arvind Kejriwal Press Meet : ದೇಶದಲ್ಲಿ ಎಲ್ಲ ಸಂಸ್ಥೆಗಳಿಗೆ ಬೆದರಿಕೆ ಹಾಕಲಾಗುತ್ತಿದೆ..! #pratidhvani

ಕುರುಬ ನಾಯಕರಾಗಿ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರದಲ್ಲಿದ್ದಾರೆ, ಇದಾದ ಬಳಿಕ ಒಕ್ಕಲಿಗ ನಾಯಕರಾಗಿರುವ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಬೇಕೆಂದು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಬಹುದಿನಗಳಿಂದ ದಲಿತ ಸಿಎಂ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕೆಂಬ ವಾದಗಳಿದ್ದು, ಇದೀಗ ಲಿಂಗಾಯತ ಸಮಾಜದಿಂದ ಹಾಲಿ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಒದಗಿಸಿ ಕೊಡಬೇಕೆಂದು ಕೂಗು ಕೇಳಿ ಬಂದಿದೆ.

ಎಕ್ಸ್‌ನಲ್ಲಿ ಏನಿದೆ..?

ಈ ಕುರಿತು ವೀರಶೈವ ಲಿಂಗಾಯತ ಸಮುದಾಯದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಕಾಂಗ್ರೆಸ್‌ ಹೈಕಮಾಂಡ್ ನಾಯಕರಿಗೆ ಮನವಿ ಮಾಡಲಾಗಿದೆ. ಕರ್ನಾಟಕದ ದೊಡ್ಡ ಸಮುದಾಯವಾದ ವೀರಶೈವ ಲಿಂಗಾಯತವನ್ನು 1990ರ ನಂತರ ( ವೀರೇಂದ್ರ ಪಾಟೀಲ ತದನಂತರ ) ಕಾಂಗ್ರೆಸ್ ಪಕ್ಷ ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ : ಬಂಗಾರದ ಬೆಲೆ ಇಳಿಕೆ: ಇಲ್ಲಿದೆ‌ ಚಿನ್ನ ಪ್ರಿಯರಿಗೆ ಚಿನ್ನದಂತ ಸುದ್ದಿ

ಹಿಂದುಳಿದ ಅಥವಾ ಚಿಕ್ಕ ಚಿಕ್ಕ ಸಮುದಾಯಗಳ ನಾಯಕರುಗಳು ಬೆಳೆಯ ಬೇಕೆಂಬುದು ನಮ್ಮ ಆಶಯವೂ ಆಗಿದ್ದರಿಂದ ಈವರೆಗೂ ಸಹನೆಯಿಂದ ಸಹಕಾರ ನೀಡಿದ್ದೇವೆ. ವಿವಿಧ ಕಾರಣಗಳನ್ನು ಮುಂದಿಟ್ಟು ಮತ್ತೆ ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರೆ ಸಹಿಸಲು ಇನ್ನೂ ಸಾಧ್ಯವಿಲ್ಲಎಂದು ಎಚ್ಚರಿಸಿದೆ

ಹಾಲಿ ಇರುವ ಮುಖ್ಯಮಂತ್ರಿಗಳ ತದನಂತರ ನಮ್ಮ ಸಮುದಾಯದ ನಾಯಕ ಶರಣ ಎಂ ಬಿ ಪಾಟೀಲರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಮೂಲಕ ಕಾಂಗ್ರೆಸ್ ಲಿಂಗಾಯತರ ವಿಷಯದಲ್ಲಿ ಮಾಡಿದ ಕೆಲ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕು ಎಂದು ಸಮುದಾಐ ಒತ್ತಾಯಿಸಿದೆ.

ಇನ್ನೂ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಕುರ್ಚಿ ಕದನದ ಹೊಗೆಯಾಡುತ್ತಿರುವಾಗಲೇ ಸಮುದಾಯವಾರು ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆಗಳು ಅಧಿಕವಾಗುತ್ತಿವೆ. ಸದ್ಯ ಬಜೆಟ್‌ ಮೂಡ್‌ನಲ್ಲಿರುವ ಸಿಎಂ ಸಿದ್ದರಾಮಯ್ಯ ದಾಖಲೆಯ ಆಯವ್ಯಯ ನೀಡಲು ಸಿದ್ಧತೆ ನಡೆಸಿದ್ದಾರೆ. ಈ ನಡುವೆಯೇ ದಲಿತ ಬಳಿಕ ಲಿಂಗಾಯತ ಸಿಎಂ ಕೂಗು ಕೇಳಿ ಬಂದಿದ್ದು, ಈ ಬೇಡಿಕೆಯನ್ನು ಯಾವ ರೀತಿಯಾಗಿ ಹೈಕಮಾಂಡ್‌ ಪರಿಗಣಿಸುತ್ತದೆ ಎನ್ನುವುದನ್ನು ಕಾದು ನೋಡೋಣ..

Tags: cm post changeCM post demandcm siddaramaihCongress High CommandCongress PartyDalit CMDK ShivakumarDr G ParameshwarKarnataka CongressLingayat CMLingayat CommunityM B PatilMallikarjun KhargeRahul GandhiSonia GandhiVeerashaiva lingayatVeerendra Patil
Previous Post

ಸಿಎಂ ಸಿದ್ದರಾಮಯ್ಯಗೆ ದಿಢೀರ್ ಪತ್ರ ಬರೆದ ಡಿಕೆ ಶಿವಕುಮಾರ್‌ :ಕಾರಣವೇನು..?

Next Post

ಕೋರ್ಟ್ ತೀರ್ಪು ಹೊರಬಿಳುತ್ತಲೇ ಬಿಕ್ಕಿ ಬಿಕ್ಕಿ ಅತ್ತ ಕೇಜ್ರಿವಾಲ್!.

Related Posts

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Top Story

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

by ಪ್ರತಿಧ್ವನಿ
May 27, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಸಿಎಂ ಕಚೇರಿಯ ಸಿಬ್ಬಂದಿಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿದೆ. ಜಾತಿಗಣತಿ ವರದಿ...

Read moreDetails
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

May 27, 2026
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

May 27, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ಕೋರ್ಟ್ ತೀರ್ಪು ಹೊರಬಿಳುತ್ತಲೇ ಬಿಕ್ಕಿ ಬಿಕ್ಕಿ ಅತ್ತ ಕೇಜ್ರಿವಾಲ್!.

ಕೋರ್ಟ್ ತೀರ್ಪು ಹೊರಬಿಳುತ್ತಲೇ ಬಿಕ್ಕಿ ಬಿಕ್ಕಿ ಅತ್ತ ಕೇಜ್ರಿವಾಲ್!.

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada