ಅಬಕಾರಿ ನೀತಿ ಹಗರಣದ ಕೇಸ್’ಗೆ ಸಂಬಂಧಿಸಿದಂತೆ, ದೆಹಲಿಯ ವಿಶೇಷ ನ್ಯಾಯಾಲಯ (Rouse Avenue Court) ತೀರ್ಪನ್ನು ನೀಡಿದೆ. ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ, ಕೇಜ್ರಿವಾಲ್, ಸಿಸೋಡಿಯಾ ಸೇರಿ ಎಲ್ಲಾ 23 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

ಸಿಬಿಐ, ನೂರು ಕೋಟಿಗಳ ಕಿಕ್’ಬ್ಯಾಕ್ ಹಣವು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅಥವ ಮನೀಶ್ ಸಿಸೋಡಿಯಾಗೆ ತಲುಪಿದೆ ಎನ್ನುವ ಆರೋಪವನ್ನು ಮಾಡಿತ್ತು. ಆದರೆ, ಇದನ್ನು ರುಜುವಾತು ಪಡಿಸಲು, ಯಾವುದೇ ಸಾಕ್ಷ್ಯಾಧಾರವನ್ನು ನೀಡುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ.ಸಿಬಿಐನ ತನಿಖಾ ತಂಡವು ಸಾವಿರಾರು ಪುಟಗಳ ಜಾರ್ಜ್’ಶೀಟ್ ನನ್ನೇನೋ ಸಲ್ಲಿಸಿದೆ. ಆದರೆ, ಇದರಲ್ಲಿ ಬಲವಾದ ಸಾಕ್ಷಿಗಳ ಕೊರತೆ ಎದ್ದು ಕಾಣುತ್ತಿದೆ

ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ತೀವ್ರ ಭಾವುಕರಾದ ಕೇಜ್ರಿವಾಲ್, “ಸತ್ಯ ಗೆದ್ದಿದೆ” (Truth has won) ಅಂತ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ನನ್ನನ್ನು ಮನೆಯಿಂದಲೇ ಎತ್ತಾಕಿಕೊಂಡು ಹೋಗಿ ಜೈಲಿಗೆ ಹಾಕಿದ್ರು. ಆದ್ರೆ ಅದು ನನ್ನನ್ನ ಕುಗ್ಗಿಸಲಿಲ್ಲ.ಸುಳ್ಳು ಕೇಸ್’ಗಳನ್ನು ಹಾಕಿ ಚುನಾಯಿತ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಮಾಡಬೇಡಿ.ಇವತ್ತು ಕೋರ್ಟ್ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದಾಗ ಭಾವುಕನಾದೆ” ಎಂದಿದ್ದಾರೆ






