• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌ ಕೇಸ್‌ನ ಹೀರೋ ACP.. ಪುನೀತ್‌ ಕೆರೆಹಳ್ಳಿ ಕೇಸ್‌ನಲ್ಲಿ ಸಿಕ್ಕಿಬಿದ್ರಾ..?

ಕೃಷ್ಣ ಮಣಿ by ಕೃಷ್ಣ ಮಣಿ
October 26, 2024
in Top Story, ಕರ್ನಾಟಕ
0
ದರ್ಶನ್‌ ಕೇಸ್‌ನ ಹೀರೋ ACP.. ಪುನೀತ್‌ ಕೆರೆಹಳ್ಳಿ ಕೇಸ್‌ನಲ್ಲಿ ಸಿಕ್ಕಿಬಿದ್ರಾ..?
Share on WhatsAppShare on FacebookShare on Telegram

ದರ್ಶನ್‌‌ ಕೇಸ್‌ನಲ್ಲಿ ತನಿಖಾಧಿಕಾರಿ ಆಗಿದ್ದ ACP ಚಂದನ್‌ಗೆ ಸಂಕಷ್ಟ ಎದುರಾಗಿದೆ.ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶ ಮಾಡಿದ್ದು, ACP ಚಂದನ್‌ ಶೆಟ್ಟಿ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರೇಣುಕಾಸ್ವಾಮಿಕೊಲೆ ಕೇಸ್‌ನಲ್ಲಿ ಖಡಕ್‌ ಆಫೀಸರ್‌‌ ಅನ್ನೋ ಹೆಗ್ಗಳಿಕೆ ಪಡೆದಿದ್ದ ACP ಚಂದನ್‌, ಸಣ್ಣ ಪ್ರಕರಣದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟು ನಡೆದುಕೊಂಡ್ರಾ..? ಅನ್ನೋ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ಇದೀಗ ಹ್ಯೂಮನ್‌ ರೈಟ್ಸ್‌ ಕಮಿಷನ್‌ ತನಿಖೆ ಆರಂಭ ಮಾಡಿದೆ.

ADVERTISEMENT

ಹಿಂದೂಪರ ಹೋರಾಟಗಾರ ಪುನೀತ್‌ ಕೆರೆಹಳ್ಳಿ ರಾಜಸ್ಥಾನದಿಂದ ನಾಯಿ ಮಾಂಸ ತರಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಆ ಬಳಿಕ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿತ್ತು. ಅಂದು ಕಾಟನ್‌ಪೇಟ್ ಠಾಣೆಯಲ್ಲಿ ಕೂರಿಸಿದ್ದಾಗ ಠಾಣೆಗೆ ಬಂದಿದ್ದ ACP ಚಂದನ್‌, ಅವಾಚ್ಯವಾಗಿ ನಿಂದಿಸಿ, ಬಟ್ಟೆ ಬಿಚ್ಚುವಂತೆ ಸೂಚನೆ ಕೊಟ್ಟರು. ಆ ಬಳಿಕ ತುಂಡು ಬಟ್ಟೆಯನ್ನೂ ಬಿಡದಂತೆ ಬಿಚ್ಚಿಸಿ, ಸೂ.. ಬೋ ಮಗ ಎಂದು ಬೈಯ್ದರು ಎಂದು ಆರೋಪ ಮಾಡಿದ್ದಾರೆ. ಈ ಕೇಸ್‌ನಲ್ಲಿ ACP ಚಂದನ್‌ ವಿರುದ್ಧ ತನಿಖೆ ನಡೆಯುತ್ತಿದೆ.

ಪುನೀತ್ ಕೆರೆಹಳ್ಳಿ ಅವರನ್ನು ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅವಮಾನಿಯವಾಗಿ ನೆಡೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ACP ಚಂದನ್ ವಿರುದ್ಧ ತನಿಖೆಗೆ ಆದೇಶಿಸಿ ಮಾನವ ಹಕ್ಕು ಆಯೋಗ ಮಾಡಿದೆ. ಓರ್ವ ACP ಹಂತದ ಅಧಿಕಾರಿ ವಿರುದ್ಧ ಮತ್ತೊಬ್ಬ ACP ಹೇಗೆ ತನಿಖೆ ಮಾಡುತ್ತಾರೆ..? ಅನ್ನೋ ಪ್ರಶ್ನೆ ಎದುರಾಗಿದೆ. ಈ ಪ್ರಕರಣದಲ್ಲಿ ತನಿಖೆ ಮಾಡುವ ಅಗತ್ಯವೇ ಇಲ್ಲ. ಪ್ರಕರಣ ನಡೆದ ದಿನ ಪುನೀತ್ ಕೆರೆಹಳ್ಳಿ ಅವರನ್ನು ವಿಚಾರಣೆ ನಡೆಸಿ, ಜೈಲು ಕೊಠಡಿಯ CCTV ದೃಶ್ಯ ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತವಾಗ್ತಿದೆ.

ಇನ್ನು ACP ಚಂದನ್‌‌ ರಕ್ಷಣೆಗೆ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆಗಳೂ ನಡೆಯುತ್ತಿವೆ. ಕಾಮುಕ ACP ಚಂದನ್‌‌ನನ್ನು ರಕ್ಷಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಮಾನವ ಹಕ್ಕುಗಳ ಆಯೋಗದಿಂದಲೂ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಕಾನೂನು, ಸಂವಿಧಾನ ಎಲ್ಲವೂ ಅಧಿಕಾರ ಮತ್ತು ಹಣ ಬಲ ಇರುವವರ ಪರ ಇರುತ್ತವೆ ಎನ್ನುವುದೇ ಸತ್ಯ ಎಂದು ಪುನೀತ್‌ ಕೆರೆಹಳ್ಳಿ X ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮಾನವ ಹಕ್ಕುಗಳ ಆಯೋಗ ತನಿಖಾಧಿಕಾರಿಯನ್ನು ಬದಲಾವಣೆ ಮಾಡುತ್ತಾ..? ಇಲ್ವಾ..? ಅನ್ನೋದನ್ನು ಕಾದು ನೋಡಬೇಕು.

Tags: ACP Chandanacp chandan entryacp chandan in dog meat scamacp chandan kumaracp chandan reactionacp chandan speechacp chandan styleacp chandan vs prathap simhaactivist puneeth kerehalliBJPchandan kumarCongress Partydarshan acp chandan kumarPuneeth Kerehallipuneeth kerehalli acp chandanpuneeth kerehalli arrest on acp chandanpuneeth kerehalli catch dog meat scampuneeth kerehalli incidentpunith kerehalli on acp chandanಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬಂಪರ್‌.. ಯಾಕೆ ಗೊತ್ತಾ..?

Next Post

ಕನ್ನಡದ ದೃಶ್ಯ ಮಾದರಿಯಲ್ಲಿ ಜೆಸಿಬಿ ಕಳ್ಳತನ.. ಪಟ್ಟು ಬಿಡದೆ ಪತ್ತೆ ಮಾಡಿದ ಖಾಕಿ..

Related Posts

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ
Top Story

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

by ಪ್ರತಿಧ್ವನಿ
May 2, 2026
0

ಅಮೆರಿಕದ ನ್ಯೂಯಾರ್ಕ್ ನಗರ ಮೇಯರ್ ಆಗಿರುವ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಹೇಳಿಕೆ ಇದೀಗ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಗೆ...

Read moreDetails
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
ಡಿ.ಕೆ. ಶಿವಕುಮಾರ್ ಮನೆಗೆ ಲಕ್ಷ್ಮಿ ಆಗಮನ: ಅಜ್ಜನಾದ ಡಿಕೆಶಿ, ಸಂಭ್ರಮದ ಕ್ಷಣ ವೈರಲ್   

ಮೊದಲ ದಿನವೇ ಕೆಡಿ ಭರ್ಜರಿ ಓಪನಿಂಗ್:  ಮೊದಲ‌ ದಿನದ ಕಲೆಕ್ಷನ್ ಎಷ್ಟು ?

May 1, 2026
Next Post
ಕನ್ನಡದ ದೃಶ್ಯ ಮಾದರಿಯಲ್ಲಿ ಜೆಸಿಬಿ ಕಳ್ಳತನ.. ಪಟ್ಟು ಬಿಡದೆ ಪತ್ತೆ ಮಾಡಿದ ಖಾಕಿ..

ಕನ್ನಡದ ದೃಶ್ಯ ಮಾದರಿಯಲ್ಲಿ ಜೆಸಿಬಿ ಕಳ್ಳತನ.. ಪಟ್ಟು ಬಿಡದೆ ಪತ್ತೆ ಮಾಡಿದ ಖಾಕಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada