
ದರ್ಶನ್ ಕೇಸ್‌ನಲ್ಲಿ ತನಿಖಾಧಿಕಾರಿ ಆಗಿದ್ದ ACP ಚಂದನ್‌ಗೆ ಸಂಕಷ್ಟ ಎದುರಾಗಿದೆ.ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶ ಮಾಡಿದ್ದು, ACP ಚಂದನ್ ಶೆಟ್ಟಿ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರೇಣುಕಾಸ್ವಾಮಿಕೊಲೆ ಕೇಸ್‌ನಲ್ಲಿ ಖಡಕ್ ಆಫೀಸರ್ ಅನ್ನೋ ಹೆಗ್ಗಳಿಕೆ ಪಡೆದಿದ್ದ ACP ಚಂದನ್, ಸಣ್ಣ ಪ್ರಕರಣದಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟು ನಡೆದುಕೊಂಡ್ರಾ..? ಅನ್ನೋ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ಇದೀಗ ಹ್ಯೂಮನ್ ರೈಟ್ಸ್ ಕಮಿಷನ್ ತನಿಖೆ ಆರಂಭ ಮಾಡಿದೆ.

ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ರಾಜಸ್ಥಾನದಿಂದ ನಾಯಿ ಮಾಂಸ ತರಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಆ ಬಳಿಕ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿತ್ತು. ಅಂದು ಕಾಟನ್‌ಪೇಟ್ ಠಾಣೆಯಲ್ಲಿ ಕೂರಿಸಿದ್ದಾಗ ಠಾಣೆಗೆ ಬಂದಿದ್ದ ACP ಚಂದನ್, ಅವಾಚ್ಯವಾಗಿ ನಿಂದಿಸಿ, ಬಟ್ಟೆ ಬಿಚ್ಚುವಂತೆ ಸೂಚನೆ ಕೊಟ್ಟರು. ಆ ಬಳಿಕ ತುಂಡು ಬಟ್ಟೆಯನ್ನೂ ಬಿಡದಂತೆ ಬಿಚ್ಚಿಸಿ, ಸೂ.. ಬೋ ಮಗ ಎಂದು ಬೈಯ್ದರು ಎಂದು ಆರೋಪ ಮಾಡಿದ್ದಾರೆ. ಈ ಕೇಸ್‌ನಲ್ಲಿ ACP ಚಂದನ್ ವಿರುದ್ಧ ತನಿಖೆ ನಡೆಯುತ್ತಿದೆ.

ಪುನೀತ್ ಕೆರೆಹಳ್ಳಿ ಅವರನ್ನು ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅವಮಾನಿಯವಾಗಿ ನೆಡೆಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ACP ಚಂದನ್ ವಿರುದ್ಧ ತನಿಖೆಗೆ ಆದೇಶಿಸಿ ಮಾನವ ಹಕ್ಕು ಆಯೋಗ ಮಾಡಿದೆ. ಓರ್ವ ACP ಹಂತದ ಅಧಿಕಾರಿ ವಿರುದ್ಧ ಮತ್ತೊಬ್ಬ ACP ಹೇಗೆ ತನಿಖೆ ಮಾಡುತ್ತಾರೆ..? ಅನ್ನೋ ಪ್ರಶ್ನೆ ಎದುರಾಗಿದೆ. ಈ ಪ್ರಕರಣದಲ್ಲಿ ತನಿಖೆ ಮಾಡುವ ಅಗತ್ಯವೇ ಇಲ್ಲ. ಪ್ರಕರಣ ನಡೆದ ದಿನ ಪುನೀತ್ ಕೆರೆಹಳ್ಳಿ ಅವರನ್ನು ವಿಚಾರಣೆ ನಡೆಸಿ, ಜೈಲು ಕೊಠಡಿಯ CCTV ದೃಶ್ಯ ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತವಾಗ್ತಿದೆ.

ಇನ್ನು ACP ಚಂದನ್ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಅನ್ನೋ ಚರ್ಚೆಗಳೂ ನಡೆಯುತ್ತಿವೆ. ಕಾಮುಕ ACP ಚಂದನ್‌ನನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಮಾನವ ಹಕ್ಕುಗಳ ಆಯೋಗದಿಂದಲೂ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ಕಾನೂನು, ಸಂವಿಧಾನ ಎಲ್ಲವೂ ಅಧಿಕಾರ ಮತ್ತು ಹಣ ಬಲ ಇರುವವರ ಪರ ಇರುತ್ತವೆ ಎನ್ನುವುದೇ ಸತ್ಯ ಎಂದು ಪುನೀತ್ ಕೆರೆಹಳ್ಳಿ X ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮಾನವ ಹಕ್ಕುಗಳ ಆಯೋಗ ತನಿಖಾಧಿಕಾರಿಯನ್ನು ಬದಲಾವಣೆ ಮಾಡುತ್ತಾ..? ಇಲ್ವಾ..? ಅನ್ನೋದನ್ನು ಕಾದು ನೋಡಬೇಕು.