ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಂಗಳೂರಿನ (Bangalore) ಗಲ್ಲಿ ಗಲ್ಲಿಗಳಲ್ಲಿ ಡಿಕೆಶಿ (Dk shivakumar) ಒಬ್ಬ ರಾಜಕೀಯ ವ್ಯಭಿಚಾರಿ , ಈತ ಹೆಣ್ಣುಮಕ್ಕಳ ಫೋಟೋಗಳನ್ನ ಬಳಸಿ ರಾಜಕಾರಣ ಮಾಡ್ತಾನೆ ಎಂದು ಜೆಡಿಎಸ್ (Jds) ಕಾರ್ಯಕರ್ತರು ಪೋಸ್ಟರ್ ಗಳನ್ನ ಅಂಟಿಸಿ , ಪ್ರತಿಭಟಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಘೋಷ್ಠಿ ನಡೆಸಿದ ಬಿಜೆಪಿ (Bjp) ಮುಖಂಡ ದೇವರಾಜೇಗೌಡ (Devarajegowda) , ಈ ಅಶ್ಲೀಲ ವಿಡಿಯೋ ಪ್ರಕರಣದ ಹಿಂದಿನ ರೂವಾರಿ, ಕಥಾನಾಯಕ ಡಿಕೆ ಶಿವಕುಮಾರ್ ಎಂಬ ಸ್ಫೋಟಕ ಆರೋಪ ಮಾಡಿ ,ಆಡಿಯೋ ರೆಕಾರ್ಡಿಂಗ್ (call recordings) ರಿಲೀಸ್ ಮಾಡಿ ಸಂಚಲನ ಸೃಷ್ಟಿಮಾಡಿದ್ದರು. ಪೆನ್ ಡ್ರೈವ್ (pendrive) ಹಂಚಿಸಿರೋದೆ ಡಿಕೆ ಎಂಬ ಆರೋಪ ಮಾಡಿದ್ರು.
ಹೀಗಾಗಿ ಇಂದು ಬೆಳಿಗ್ಗೆಯಿಂದಲೇ ಜೆಡಿಎಸ್ (Jds) ಕಾರ್ಯಕರ್ತರು ರಸ್ತೆಗಿಳಿದು ಡಿಕೆಶಿ ವಿರುದ್ಧ ಆಕ್ರೋಶ ಹೊರಹಾಕಿದ್ರು. ಸಿಕ್ಕ ಸಿಕ್ಕ ಗೋಡೆಗಳ ಮೇಲೆ ಡಿಕೆಶಿ ಪೋಸ್ಟರ್ ಗಳನ್ನ (Poster) ಅಂಟಿಸಿ , ಡಿಕೆಶಿ ರೀತಿಯ ರಾಜಕಾರಣಿ ಯನ್ನ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ದಾರೆ.