ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆ ಮಾಡಿ ಸಿಎಂ ಅನುಮೋದನೆ ನೀಡಿದ್ದಾರೆ. 44 ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಗೆ ಸಿಎಂ ಅನುಮೋದನೆ ನೀಡಿದ್ದು, ನಿಗಮ ಮಂಡಳಿ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆ ಮಾಡಲಾಗಿದೆ. ಇಂದು ಆಯಾ ಇಲಾಖೆಗಳು ಆದೇಶ ಹೊರಡಿಸಲಿವೆ ಎನ್ನಲಾಗಿದೆ. 44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದು, ಇಂದು ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕ ಆದೇಶ ಪತ್ರ ರವಾನೆಯಾಗಲಿದೆ. ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನಾಗಲಕ್ಷ್ಮೀ ಚೌಧರಿ ನೇಮಕ ಮಾಡಲಾಗಿದೆ.
#congress #Siddaramaiah #CMofKarnataka #DKShivakumar






