ಬೆಂಗಳೂರು: ರಾಜ್ಯಾದ್ಯಂತ ಕಾವೇರಿ ನೀರಿನ ವಿಚಾರ ಸಾಕಷ್ಟು ಕಾವೇರಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಬೀಡುವಂತೆ ಆದೇಶಿಸಲಾಗಿದೆ. ನಮಗೆ ಇಲ್ಲಿ ಕುಡಿಲು ನೀರಿಲ್ಲ, ಪರಿಸ್ಥಿತಿ ಹೀಗಿರುವಾಗ ಎಲ್ಲಿಂದ ನೀರು ಬಿಡುವುದು..? ಎನ್ನುವ ಪ್ರಶ್ನೆ ಉದ್ಭವವಾಗಿದೆ. ಇನ್ನು ಕಾವೇರಿ ವಿಚಾರವಾಗಿ ಮಾಜಿ ಸಿಎಂ ಹೆಚ್‌ಡಿಕೆ ದೆಹಲಿಯಿಂದ ಬಂದ ಕೂಡಲೇ ಕಾವೇರಿ ಹೋರಾಟದ ಪಾಳಯಕ್ಕೆ ಧುಮುಕಿದ್ದಾರೆ. ಇನ್ನು ಈ ದಿನ ಏನೆಲ್ಲಾ ಮಾತನಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..
ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡುವ ವಿಚಾರ:
ಸುಪ್ರೀಂಕೋರ್ಟ್ ತೀರ್ಪಿನಂತೆ ನೀರು ಬಿಡಬೇಕು.ಇಲ್ಲದಿದ್ದರೇ ನ್ಯಾಯಾಂಗ ನಿಂದನೆ ಆಗುತ್ತೆ ಅಂತಾ ರಾಜ್ಯ ಸರ್ಕಾರದವರು ಹೇಳ್ತಿದ್ದಾರೆ.ತಮಿಳುನಾಡಿಗೆ ನೀರು ನಿಲ್ಲಿಸಿದ್ರೆ ನ್ಯಾಯಾಂಗ ನಿಂದನೆ ಆಗಲ್ಲ.ಸುಪ್ರೀಂಗೆ ನೀರು ಬಿಡಲು ಆಗಲ್ಲ ಎಂದು ಮೇಲ್ಮನವಿ ಸಲ್ಲಿಸಿ.2016 ತೀರ್ಪು ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಹೆಚ್ಡಿಕೆ ಸಲಹೆ.
ಪಾಲಿಸಲು ಆಗದ ತೀರ್ಪನ್ನ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆಗಲ್ಲ.ಆಂಧ್ರದ ನೀರಾವರಿ ಪ್ರಕರಣ ಸಂಬಂಧ ಆ ನ್ಯಾಯಮೂರ್ತಿ ಉದಮ್ ಮಲ್ಲಿಕ್ ಹೇಳಿದ್ದರು.ಸೆ.22, 2016 ನ್ಯಾಯಾಲಯ ಅದನ್ನ ಎತ್ತಿಹಿಡಿದಿತ್ತು.ಅದೇ ರೀತಿ ರಾಜ್ಯ ಸರ್ಕಾರ ನೀರು ಬಿಡಲು ಆಗಲ್ಲ ಎಂದು ಮೇಲ್ಮನವಿ ಸಲ್ಲಿಸಲಿ.
ಟ್ರಿಬ್ಯನಲ್ ರಚನೆ ಮಾಡಿಕೊಂಡಿದ್ದೇ ಈಗ ನೀರು ಬಿಡುವುದಕ್ಕೆ ಸಮಸ್ಯೆಯಾಗ್ತಿದೆ
1989ರ ವರೆಗೆ ಯಾವ ಮುಖ್ಯಮಂತ್ರಿಗಳು ಟ್ರಿಬ್ಯನಲ್ ಗೆ ಅವಕಾಶ ಕೊಟ್ಟಿರಲಿಲ್ಲ.ಅವರು ಕೇಳಿದಾಗ 3-4ಟಿಎಂಸಿ ನೀರು ಬಿಡ್ತಿದ್ರು.ಆದಾದ ಬಳಿಕ ಬಂದ ಸರ್ಕಾರ ತಮಿಳುನಾಡು ಜೊತೆ ಸಮನ್ವಯ ನಡೆಸಲಿಲ್ಲ.ಆಗ ಅವರು ಸುಪ್ರೀಂ ಕೋರ್ಟ್ ಗೆ ಹೋಗಿ ಟ್ರಿಬ್ಯುನಲ್ ರಚನೆ ಮಾಡಿದ್ರು.ಅಂದಿನ ಸಿಎಂ ಮಾಡಿದ ನಿರ್ಲಕ್ಷ್ಯ ಈ ಟ್ರಿಬ್ಯುನಲ್ ರಚನೆ.
ಟ್ರಿಬಿನಲ್ ರಚನೆ ಆದಮೇಲೆ ಜಯಲಲಿತಾ ಹಾಗೂ ಕರುಣಾನಿಧಿ ಒತ್ತಡಗಳಿಗೆ ಮಣಿದು ರಾಜ್ಯಕ್ಕೆ ಅನ್ಯಾಯ ಮಾಡಿದ್ರು.ನಮ್ಮ ರಾಜ್ಯದ ರೈತರ ಉಳಿಸಲು ದೇವೇಗೌಡರು ಹೋರಾಟ ಮಾಡಿದ್ದಾರೆ.ಅವರ ಮಾರ್ಗದರ್ಶನವನ್ನ ಕೆಲವರು ನಿರ್ಲಕ್ಷ್ಯ ಮಾಡಿದ್ರು.ಅದರ ಪರಿಣಾಮ ನಮಗೆ ಹಲವು ರೀತಿಯ ಪೆಟ್ಟು ಬಿದ್ದಿದೆ.1994ರಲ್ಲಿ ದೇವೇಗೌಡರು ಸಿಎಂ ಆದಾಗಲೂ ನೀರಿನ ಕೊರತೆ ಇತ್ತು.ಆಗ ದೇವೇಗೌಡರು ವಾಸ್ತವ ಸ್ಥಿತಿ ಅವರಿಗೆ ಮನವರಿಕೆ ಮಾಡಿದ್ರು.ಅವರ ಮನವಿಗೆ ಸ್ಪಂದಿಸಿ ಕೇವಲ 5ಟಿಎಂಸಿ ನೀರು ಬಿಟ್ಟಿದ್ರು.ಅಗಲೂ ಕೆಲವರು ದೇವೇಗೌಡರ ವಿರುದ್ಧ ಹೋರಾಟ ಮಾಡಿದ್ರು.ಬಳಿಕ ಅದೇ ದಿನ ಸುರಿದ ಮಳೆಗೆ ಡ್ಯಾಂ ತುಂಬೋಯ್ತು.
ಮಳೆ ಇಲ್ಲದ ಕಾರಣ ನೀರನ್ನ ಉಳಿಸಿಕೊಳ್ಳುವ ಅಗತ್ಯ ಇದೆ
ಕಳೆದ ನಾಲ್ಕು ವರ್ಷ ಮಳೆ ಆಗಿದ್ದರಿಂದ ರೈತರು ಆತಂಕ ಪಡುವ ಅಗತ್ಯ ಇರಲಿಲ್ಲ.ಈವರ್ಷ ಮಳೆ ಇಲ್ಲದೇ ರೈತರ ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ.ತಮಿಳುನಾಡು ಈಗ ಒತ್ತಡ ಹೇರುತ್ತಿದೆ.ಈ ಸಂದರ್ಭದಲ್ಲಿ ನಮ್ಮ ನೀರನ್ನ ಉಳಿಸಿಕೊಳ್ಳಬೇಕು.ನಾವು ರಾಜಕಾರಣಕ್ಕೆ ಬರೋದಕ್ಕೂ ಮುಂಚೆಯೇ ಈ ನೀರಿನ ವಿವಾದ ಇದೆ.ಈ ಅನ್ಯಾಯವನ್ನ ಯಾವ ಸರ್ಕಾರವೂ ಸರಿಪಡಿಸಿಲ್ಲ.ಈಗ ರೈತರು ಈ ಬಗ್ಗೆ ದೊಡ್ಡ ಹೋರಾಟ ಆರಂಭವಾಗಿದೆ.ಪಕ್ಷ ಬೇಧ ಮರೆತು ಎಲ್ಲರೂ ಹೋರಾಟಕ್ಕೆ ಬಂದಿದ್ದಾರೆ.ಒಂದು ಕಡೆ ರಾಜ್ಯದಲ್ಲಿ ಬರಗಾಲ ಇದೆ.ಸರ್ಕಾರವೇ ಕೊಟ್ಟ ಮಾಹಿತಿ ಪ್ರಕಾರ.40ಲಕ್ಷ ಎಕ್ಟೇರ್ ಬೆಳೆ ನಾಶ ಆಗಿದೆ.30ಸಾವಿರ ಕೋಟಿ ರೈತರಿಗೆ ನಷ್ಟ ಉಂಟಾಗಿದೆ.ಇಂತಹ ಪರಿಸ್ಥಿತಿಯಲ್ಲಿ ರೈತರ ಪ್ರಮುಖ ಬೆಳೆ ಒಣಗ್ತಿದೆ.ಭತ್ತ, ಕಬ್ಬು ಪ್ರಮುಖ ಬೆಳೆಗಳು ನಷ್ಟ ಆಗಿದೆ.ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗ್ತಿದ್ದಾರೆ.ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ವಿಷಯ ಪ್ರಸ್ತಾಪಿಸಲು ಅಧಿಕಾರಿಗಳು ಲಘುವಾಗಿ ನಡೆದುಕೊಂಡಿದ್ದಾರೆ.ಕಳೆದ ತಿಂಗಳು ನಡೆದ ಮೊದಲ ಸಭೆಯಲ್ಲಿ ತಮಿಳುನಾಡಿನ 10ಜನ ಅಧಿಕಾರಿಗಳು ಭಾಗಿಯಾದ್ರೆ.ನಮ್ಮ ಅಧಿಕಾರಿಗಳು ಬೆರಳೆಣಿಕೆಯಷ್ಟು ಮಾತ್ರ ಭಾಗಿಯಾಗ್ತಾರೆ.