• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನಕಲಿ ಸಹಿ ಆರೋಪ | ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್‌ ಚಡ್ಡಾ ಅಮಾನತು

ಪ್ರತಿಧ್ವನಿ by ಪ್ರತಿಧ್ವನಿ
August 11, 2023
in ಇದೀಗ, ದೇಶ, ರಾಜಕೀಯ
0
ರಾಘವ್‌ ಚಡ್ಡಾ
Share on WhatsAppShare on FacebookShare on Telegram

ನಾಲ್ವರು ರಾಜ್ಯಸಭಾ ಸಂಸದರ ಸಹಿಯನ್ನು ನಕಲು ಮಾಡಿದ ಆರೋಪದಲ್ಲಿ ಹಕ್ಕುಚ್ಯುತಿ ಮಂಡನೆ ಹಿನ್ನೆಲೆ ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಶುಕ್ರವಾರ ಸಂಸತ್ತಿನ ಮೇಲ್ಮನೆಯಿಂದ (ರಾಜ್ಯಸಭೆ) ಅನಿರ್ಧಾಷ್ಟವಧಿಗೆ ಅಮಾನತುಗೊಳಿಸಲಾಗಿದೆ.

ADVERTISEMENT

ಹಕ್ಕುಚ್ಯುತಿ ಕುರಿತು ರಾಘವ್ ಅವರ ವಿರುದ್ಧದ ಪ್ರಕರಣದ ತನಿಖೆಯ ವಿಶೇಷಾಧಿಕಾರಗಳ ಸಮಿತಿಯು ತನ್ನ ವರದಿ ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅಮಾನತಿನಲ್ಲಿ ಇಡಲು ಸದನದ ನಾಯಕ ಪಿಯೂಷ್‌ ಗೋಯಲ್ ಮಂಡಿಸಿದ ನಿರ್ಣಯವನ್ನು ರಾಜ್ಯಸಭೆ ಅಂಗೀಕರಿಸಿತು.

ರಾಘವ್‌ ಚಡ್ಡಾ ಅವರನ್ನು ಅಮಾನತು ಮಾಡಿರುವ ಬಗ್ಗೆ ರಾಜ್ಯಸಭೆ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದೆ. ಇದೇ ವೇಳೆ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಅಮಾನತು ಅವಧಿಯನ್ನು ಸಹ ವಿಸ್ತರಿಸಲಾಗಿದೆ.

ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆಗಸ್ಟ್ 7 ರಂದು ನಿರ್ಣಯದಲ್ಲಿ ರಾಘವ್ ಚಡ್ಡಾ ಸೇರಿಸಿದ್ದಾರೆ ಎಂದು ರಾಜ್ಯಸಭಾ ಸಂಸದರಾದ ಸಸ್ಮಿತ್ ಪಾತ್ರ, ಎಸ್ ಫಾಂಗ್ನಾನ್ ಕೊನ್ಯಾಕ್, ಎಂ ತಂಬಿದುರೈ ಮತ್ತು ನರಹರಿ ಅಮೀನ್ ದೂರಿ ಚಡ್ಡಾ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದರು.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ಬುಧವಾರ ಈ ವಿಷಯವನ್ನು ಪರಿಶೀಲಿಸಲು ವಿಶೇಷಾಧಿಕಾರ ಸಮಿತಿಗೆ ಸಂಸದರ ದೂರುಗಳನ್ನು ಕಳುಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೇರಳ ಇನ್ನು ಮುಂದೆ ಕೇರಳಂ | ನಿಲುವಳಿ ಮಂಡಿಸಿದ ಪಿಣರಾಯಿ

ಈ ನಡುವೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಚಡ್ಡಾ ಅವರನ್ನು “ಉದ್ದೇಶಪೂರ್ವಕವಾಗಿ ಸಿಲುಕಿಸಲು ಪ್ರಯತ್ನಿಸುತ್ತಿದೆ” ಎಂದು ಎಎಪಿ ಆರೋಪಿಸಿದೆ.

ರಾಘವ್ ಚಡ್ಡಾ ವಿರುದ್ಧದ ʼನಕಲಿ ಸಹಿʼ ಆರೋಪಗಳು “ಸುಳ್ಳು ಮತ್ತು ರಾಜಕೀಯ ಪ್ರೇರಿತ” ಎಂದು ಪಕ್ಷವು ಹೇಳಿದೆ. ಪಕ್ಷದ ವಿರುದ್ಧ ಮಾತನಾಡುವುದಕ್ಕಾಗಿ ಬಿಜೆಪಿಯು ರಾಘವ್‌ ಚಡ್ಡಾ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ.

Tags: AAPbreach of privilegeForgeryJagadeep DhankarRaghav ChadhaRajyasabhaಜಗದೀಪ್‌ ಧನಕರ್‌ನಕಲು ಆರೋಪರಾಘವ್‌ ಚಡ್ಡಾರಾಜ್ಯಸಭೆ
Previous Post

ಶ್ರಮ ಜಗತ್ತಿನ ಸವಾಲುಗಳೂ ಅಮೃತಕಾಲದ ಆಶಯವೂ- ಭಾಗ 2

Next Post

ಕಾಂಗ್ರೆಸ್ ಗೆಲುವು ಬಿಜೆಪಿಯ ಭಯಕ್ಕೆ ಕಾರಣವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Related Posts

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ
ರಾಜಕೀಯ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

by ಪ್ರತಿಧ್ವನಿ
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆ ಹಾಗೂ ಸರ್ಕಾರದ ‘ಭಾಗ್ಯ’ ಯೋಜನೆಗಳ ಅರ್ಥ ಕುರಿತು ನೀಡಿದ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಇತ್ತೀಚಿನ ಸಂದರ್ಶನವೊಂದರಲ್ಲಿ...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
Next Post
ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್ ಗೆಲುವು ಬಿಜೆಪಿಯ ಭಯಕ್ಕೆ ಕಾರಣವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada