ಪಾಟ್ನಾ : ವಾರಗಳ ಹಿಂದಷ್ಟೆಯೇ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗ್ತಿದ ನಾಲ್ಕು ಪಥಗಳ ಬ್ರಿಡ್ಜ್ ಕುಸಿದು ಬಿದ್ದಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಬಿಹಾರ ಸರ್ಕಾರ ನಿರ್ಲಕ್ಷ್ಯದ ಬಗ್ಗೆ ಜನರು ಆಡಿಕೊಳ್ಳುತ್ತಿರುವಾಗಲೇ ಸರ್ಕಾರ ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ ಕಂಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದರು.
ಈ ಘಟನೆ ಮಾಸುವ ಮುನ್ನವೇ ಇದೀಗ ಪಾಟ್ನಾದಲ್ಲಿ ಮತ್ತೊಂದು ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ. ಪಾಟ್ನಾ ನಗರದ ಆಗಮಕುವಾನ್ – ಶೀತಲಾ ಮಾತಾ ಮಂದಿರ ಉಂಟಾದ ರಸ್ತೆ ಕುಸಿತದಿಂದಾಗಿ ರಸ್ತೆಯ ಬಳಿ ಸಂಚರಿಸುತ್ತಿದ್ದ ಕಂಟೈನರ್ನ ಹಿಂಬದಿ ಚಕ್ರ ರಸ್ತೆಯ ಒಳಗೆ ಸಿಲುಕಿಕೊಂಡಿದ್ದು ಇದರ ಫೋಟೋಗಳು ಸಹ ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ಜನತೆ ಬಿಹಾರ ಸರ್ಕಾರದ ಆಡಳಿತವೆಂದರೆ ಹೀಗೇನಾ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.
ಸಾಲು ಸಾಲು ಕಳಪೆ ಕಾಮಗಾರಿಯ ಪ್ರಕರಣಗಳು ಒಂದಾದರ ಮೇಲೊಂದರಂತೆ ಬೆಳಕಿಗೆ ಬರ್ತಿರೋದು ನಿತಿನ್ ಕುಮಾರ್ ನೇತೃ್ತ್ವದ ಸರ್ಕಾರಕ್ಕೆ ಭಾರೀ ಮುಖಭಂಗವನ್ನುಂಟು ಮಾಡ್ತಿದೆ.
Patna, Bihar: The rear wheel of a container (truck) passing near Agamkuan-Sheetala Mata Mandir road in Patna City got stuck in a pit due to a road collapse (11.06) pic.twitter.com/zHS9WS4mPS
— ANI (@ANI) June 12, 2023