ಬೆಂಗಳೂರು : ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಓಡಾಡಿದರೆ ನಷ್ಟದಲ್ಲಿರುವ ಸಾರಿಗೆ ಇಲಾಖೆ ಲಾಭದತ್ತ ಸಾಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು , ಸದ್ಯ ಸಾರಿಗೆ ಇಲಾಖೆ ನಷ್ಟದಲ್ಲಿದೆ, ಇನ್ನು ಮಹಿಳೆಯರ ಬಸ್ ಚಾರ್ಜ್ ನಾವು ನೀಡುತ್ತೇವೆ . ಹೀಗಾಗಿ ಮಹಿಳೆಯರು ಸರ್ಕಾರಿ ಬಸ್ನಲ್ಲಿ ಹೆಚ್ಚೆಚ್ಚು ಓಡಾಡಿದಷ್ಟು ಸಾರಿಗೆ ಇಲಾಖೆಗೆ ಸರ್ಕಾರದಿಂದ ಹಣ ಹೋಗಲಿದೆ ಎಂದು ಹೇಳಿದರು.
ಇದೇ ವೇಳೆ ರಾಜ್ಯದ ಮಹಿಳೆಯರಿಗೂ ಕಿವಿಮಾತು ಹೇಳಿದ ಸತೀಶ್ ಜಾರಕಿಹೊಳಿ, ಫ್ರೀ ಬಸ್ ಸಿಗುತ್ತೆ ಅಂತಾ ಸುಮ್ಮನೇ ಪ್ರಯಾಣ ಮಾಡೋದು ಅಲ್ಲ. ಮಹಿಳೆಯರ ಸಬಲೀಕರಣ ಕೂಡ ಆಗಬೇಕು. ಆಗ ಮಾತ್ರ ಈ ಯೋಜನೆಯ ನಿಜವಾದ ಉದ್ದೇಶ ಈಡೇರಲು ಸಾಧ್ಯ ಎಂದಿದ್ದಾರೆ.
ನಾವು ನುಡಿದಂತೆ ನಡೆದಿದ್ದೇವೆ ಕೇವಲ ಮೂರನೇ ತಿಂಗಳಲ್ಲಿ ನಮ್ಮ ಭರವಸೆ ಈಡೇರಿಸಿದ್ದೇವೆ. ಇದೊಂದೇ ಅಲ್ಲ , ಉಳಿದ ಸುಮಾರು ಕೊಡುಗೆಗಳನ್ನು ಕೊಡುವ ಯೋಜನೆ ಹೊಂದಿದ್ದೇವೆ. ಎಲ್ಲವನ್ನೂ ಶೀಘ್ರದಲ್ಲಿಯೇ ಈಡೇರಿಸುತ್ತೇವೆ ಎಂಧು ಹೇಳಿದ್ರು.