ಭಾರತದ ರಕ್ಷಣಾ ವ್ಯೂಹ ದಿನದಿಂದ ದಿನಕ್ಕೆ ಬಲಿಷ್ಠ ಗೊಳಿಯುತ್ತದೆ ಇದರ ಜೊತೆಗೆ ಭಾರತ ಮುಂದಿನ ತಲೆಮಾರಿಗಿನಲ್ಲಿ ಎದುರಾಗಬಹುದಾ ಶತ್ರು ದಾಳಿಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ ಪ್ರತಿದಾಳಿಗೆ ಬೇಕಾದ ಸಾಮರ್ಥ್ಯವನ್ನು ಕೂಡ ಬಲಪಡಿಸಿಕೊಳ್ಳುವತ್ತ ಹೆಜ್ಜೆಯನ್ನು ಇರಿಸಿದೆ. ಇನ್ನೂ ಸುಲಭವಾಗಿ ಹೇಳಬೇಕಾದರೆ ಭಾರತವು ಮುಂದಿನ ಪೀಳಿಗೆಯ ಅತ್ಯಾಧಿನಿಕ ಯುದ್ಧ ತಂತ್ರಗಳಿಗೆ ತೆರೆದುಕೊಳ್ಳುವತ ಹೆಜ್ಜೆಯನ್ನು ಇಟ್ಟಿದೆ

ಅದರಲ್ಲೂ ಕಳೆದ ಎರಡು ದಶಕದಿಂದ ಭಾರತದ ರಕ್ಷಣಾ ವ್ಯೂಹ ಸಾಕಷ್ಟು ಬಲಿಷ್ಠವಾಗುತ್ತದೆ ಇದೀಗ ಇದಕ್ಕೆ ಮತ್ತೊಂದು ಹೆಜ್ಜೆಯನ್ನು ಭಾರತ ಇರಿಸಿದೆ ಹೌದು.. ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿ ‘ಅಗ್ನಿ ಪ್ರೈಮ್’ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ಪರೀಕ್ಷಾರ್ಥ ಉಡಾಯನ ನಡೆಸಿದೆ. ಒಡಿಶಾದ ಕರಾವಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ಕೇಂದ್ರದಿಂದ ಪರೀಕ್ಷಾರ್ಥ ಉಡ್ಡಯನ ನಡೆಸಲಾಗಿದೆ. ಕ್ಷಿಪಣಿ ಉಡ್ಡಯನ ಯಶಸ್ವಿಯಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಅಗ್ನಿ ಕ್ಷಿಪಣಿಯನ್ನು ವಿವಿಧ ಹಂತಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ ಇದೀಗ ಕ್ಷಿಪಣಿಯ ಮೂರು ಯಶಸ್ವಿ ಪ್ರಯೋಗಗಳ ನಂತರ ನಡೆಸಿದ ಮೊದಲ ಪ್ರೀ-ಇಂಡಕ್ಷನ್ ನೈಟ್ ಲಾಂಚ್ ಇದಾಗಿದೆ. ಇದು ಬಹುದೊಡ್ಡ ಯಶಸ್ಸನ್ನ ಸಾಧಿಸಿದ್ದು ಅಗ್ನಿ ಪ್ರೈಮ್‌ನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಎಷ್ಟಿದೆ ಅನ್ನೋದನ್ನ ಸಾಬೀತುಪಡಿಸಿದೆ. ಡಿಆರ್ಡಿನ ಹಿರಿಯ ಅಧಿಕಾರಿಗಳು ಮತ್ತು ಸ್ಟ್ರಾಟಜಿ ಫೋರ್ಸ್ ಕಮಾಂಡ್ ಯಶಸ್ವಿ ಹಾರಾಟಕ್ಕೆ ಅಧಿಕೃತ ಮಾಹಿತಿಯನ್ನು ಹೊರಬಿಟ್ಟಿದ್ದಾರೆ.
ಇನ್ನು ಈ ಅಗ್ನಿ ಪ್ರೇಮ್ ಕ್ಷಿಪಣಿ ಸಾಕಷ್ಟು ವಿಶೇಷತೆಗಳನ್ನು ಕೂಡ ಹೊಂದಿದೆ. ಅಗ್ನಿ ಸರಣಿಯ ಹೊಸ ತಲೆಮಾರಿನ ಕ್ಷಿಪಣಿ. 34.5 ಅಡಿ ಉದ್ದವಿದೆ. ಟಾರ್ಗೆಟಬಲ್ ರೀಎಂಟ್ರಿ ವೆಹಿಕಲ್ ಇದಾಗಿದ್ದು. ಒಂದೇ ಕ್ಷಿಪಣಿಯಿಂದ ಬಹು ಗುರಿಗಳ ಮೇಲೆ ದಾಳಿ ಮಾಡಬಹುದು ಅನ್ನೋದು ಈ ಪ್ರಯೋಗದಿಂಸ ಇನ್ನಷ್ಟು ದೃಡ ಪಟ್ಟಿದೆ. ಕ್ಷಿಪಣಿಯು ಹೆಚ್ಚಿನ ತೀವ್ರತೆಯ ಸ್ಫೋಟಕ, ಥರ್ಮೋಬಾರಿಕ್ ಅಥವಾ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. 1,500 ರಿಂದ 3,000 ಕೆಜಿ ತೂಕದ ಸಿಡಿತಲೆಗಳನ್ನು ಅಳವಡಿಸಬಹುದು ಅಂತ ರಕ್ಷಣಾ ತಜ್ಞರು ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.






