ಮೈಸೂರು : ಸಿದ್ಧಾರ್ಥ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನೂತನ ಡಿಸಿ ಕಚೇರಿ ಇಂದು ಲೋಕಾರ್ಪಣೆಗೊಂಡಿದ್ದು ಈ ಮೂಲಕ ಮೈಸೂರಿನ ಪುರಾತನ ಡಿಸಿ ಕಚೇರಿ ಕಟ್ಟಡವು ಇತಿಹಾಸದ ಪುಟ ಸೇರಿದೆ.
ಆಡಳಿತ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದ್ದ ಹಠಾರ ಕಚೇರಿ ಕಟ್ಟಡ ಕಳೆದ ಹಲವು ದಶಕಗಳಿಂದ ಮೈಸೂರು ಜಿಲ್ಲಾಧಿಕಾರಿಗಳ ಆಡಳಿತ ಕೇಂದ್ರ ಸ್ಥಾನವಾಗಿತ್ತು. ಇಂದಿನಿಂದ ಪುರಾತನ ಕಚೇರಿಯಲ್ಲಿ ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳು ಬಹುತೇಕ ಬಂದ್ ಆಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದದಂತೆಯೇ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ಸ್ಥಳಾಂತರಗೊಂಡಿದೆ.

ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆಗಿದ್ದಾಗ ಮೈಸೂರಿನಲ್ಲಿ ಈ ನೂತನ ಡಿಸಿ ಕಚೇರಿ ಲೋಕಾರ್ಪಣೆಗೊಂಡಿತ್ತುಲ . ಅಂದೇ ನೂತನ ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಥಳಾಂತರಗೊಳ್ಳಬೇಕಿತ್ತು. ಆದರೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಹಳೆಯ ಕಟ್ಟಡದಲ್ಲಿಯೇ ಕಚೇರಿ ಕಾರ್ಯ ಮುಂದುವರಿದಿತ್ತು.
ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಗೊಂಡಿದೆ. ಈಗಾಗಲೇ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಇನ್ಮುಂದೆ ಯಾವುದೇ ಸರ್ಕಾರಿ ಕೆಲಸಗಳಿದ್ದರೆ ಹೊಸ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಹೇಳಿದ್ದಾರೆ .