• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Minister R.Ashok v/s H.D.Kumaraswamy : ಸಚಿವ ಆರ್.ಅಶೋಕ್ ಗಿಣಿಭವಿಷ್ಯ.. ಸಂಖ್ಯಾಸಾಸ್ತ್ರ ಹೇಳ್ತಾರಾ..? : ಹೆಚ್.ಡಿಕೆ ಟಾಂಗ್

Any Mind by Any Mind
March 16, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
Minister R.Ashok v/s H.D.Kumaraswamy : ಸಚಿವ ಆರ್.ಅಶೋಕ್ ಗಿಣಿಭವಿಷ್ಯ.. ಸಂಖ್ಯಾಸಾಸ್ತ್ರ ಹೇಳ್ತಾರಾ..? : ಹೆಚ್.ಡಿಕೆ ಟಾಂಗ್
Share on WhatsAppShare on FacebookShare on Telegram

ಬೆಂಗಳೂರು : ಮಾ.15: ಕೋಲಾರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪಯಾತ್ರೆಯಲ್ಲಿ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಆರ್.ಅಶೋಕ್ ಅವರು, ಜೆಡಿಎಸ್‌ ಪಕ್ಷದ ಶ್ರೀನಿವಾಸಗೌಡ ಪಕ್ಷ ಬಿಟ್ಟು ಓಡು ಮಗಾ.. ಓಡು ಮಗಾ.. ಎಂದು ಹೋಗುತ್ತಿದ್ದಾರೆ ಅಂತಾ ಆರ್.ಅಶೋಕ್ ಟೀಕಿಸಿದ್ದರು.‌ ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆಗೆ ಖಡಕ್ ರಿಪ್ಲೆ ಕೊಟ್ಟಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್‌ ಮಾಡಿ ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ..

ADVERTISEMENT

ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಸಾರಾಂಶ :

ಸನ್ಮಾಶ್ರೀ ಸಚಿವ ಆರ್.ಅಶೋಕ್ ಅವರು ಭವಿಷ್ಯವನ್ನು, ಸಂಖ್ಯಾಸಾಸ್ತ್ರವನ್ನು ಹೇಳುತ್ತಾರೆ ಎಂದು ನನಗೆ ಗೊತ್ತಾಗಿದ್ದು ಈಗಲೇ. ಅವರಲ್ಲೂ ಒಬ್ಬರು ‘ಕಾಲಜ್ಞಾನಿ’, ‘ಸಂಖ್ಯಾಜ್ಞಾನಿ’ ಇದ್ದಾರೆನ್ನುವ ಸೋಜಿಗ ನನಗೆ ಬೆಕ್ಕಸ ಬೆರಗುಂಟು ಮಾಡಿದೆ. ಚುನಾವಣೆ ನಂತರ ತಮ್ಮ ದುಡಿಮೆಗೆ ದೋಖಾ ಇಲ್ಲ ಎನ್ನುವ ಆತ್ಮವಿಶ್ವಾಸ ಅಶೋಕ್ ಅವರಲ್ಲಿದೆ, ಸಂತೋಷ..ನಮ್ಮ ಜೆಡಿಎಸ್ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆ ಎಂದು ಚಿಕ್ಕಬಳ್ಳಾಪುರದಲ್ಲಿ ಗಿಣಿಭವಿಷ್ಯ ಹೇಳಿರುವ ಅವರು, ತಮ್ಮ ಬಿಜೆಪಿ ಪಕ್ಷ ಅದೆಷ್ಟು ಸೀಟು ಗೆಲ್ಲುತ್ತದೆ ಎನ್ನುವುದನ್ನು ಹೇಳಲು ಮರೆತಿದ್ದಾರೆ! ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ..? ಅವರೇ ಹೇಳಬೇಕು. ಎಷ್ಟೇ ಆಗಲಿ, ಅವರ ಜಾಣತನ ಜಗಜ್ಜಾಹೀರು!! ಅಶೋಕ್ ಸಾಹೇಬರು ‘ವಿಜಯ ಸಂಕಲ್ಪ’ಕ್ಕೆ ಬದಲಾಗಿ ‘ಸುಳ್ಳುಸಂಕಲ್ಪ’ ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ ‘ಸುಳ್ಳುಸಂಕಲ್ಪ ಯಾತ್ರೆ’ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಗೆ ಅಂಟಿದ ಜಾಡ್ಯ ಮತ್ತು ಆಜನ್ಮಪರ್ಯಂತ ಬಂದಿರುವ ಚಾಳಿ. ನಮ್ಮ ಪಕ್ಷ ಬಿಡೋರ ಮಾತು ಹಾಗಿರಲಿ, ನಿಮ್ಮ ಪಕ್ಷದಲ್ಲಿ ವಾರದೊಪ್ಪತ್ತಿನಿಂದ ನಿರಂತರವಾಗಿ ಕೇಳಿಬರುತ್ತಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಎನು ಅಶೋಕ್‌ ಅವರೇ?

ಅಶೋಕ್ ಸಾಹೇಬರು 'ವಿಜಯ ಸಂಕಲ್ಪ'ಕ್ಕೆ ಬದಲಾಗಿ 'ಸುಳ್ಳುಸಂಕಲ್ಪ' ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ 'ಸುಳ್ಳುಸಂಕಲ್ಪ ಯಾತ್ರೆ'ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ, ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ. 3/7

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 16, 2023

ನಿನ್ನೆ ದಿನ ನಿಮ್ಮ ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರು ಮಾಡಿದ ಪಂಚಾಯಿತಿ ಕಟ್ಟೆ ಪುರಾಣದ ಅಸಲಿಯೆತ್ತೇನು? ಈ ಬಿಜೆಪಿಯ ಗೃಹಭಂಗದಿಂದ ಯಾರಿಗೆ ದುಃಖ? ಯಾರಿಗೆ ʼಸಂತೋಷʼ!? ಕೊಂಚ ಹೇಳಬಲ್ಲಿರಾ ಅಶೋಕ್‌ ಅವರೇ? ಇಷ್ಟೆಲ್ಲಾ ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ? ʼ40% ನಾಯಕʼರಾದ ನಿಮ್ಮಲ್ಲಿ ಆ ಧಮ್ಮುತಾಕತ್ತು ಇದೆಯಾ? ಹಾಗಿದ್ದರೆ, ವಿಶ್ವವಂದ್ಯ ಪ್ರಧಾನಿಗಳು ಅಷ್ಟು ಬಿಡುವಾಗಿ ಕರ್ನಾಟಕಕ್ಕೆ ಪದೇಪದೆ ಓಡೋಡಿ ಬರುತ್ತಾರೇಕೆ? ಅಮಿತ್ ಶಾರವರ ಅಪರಿಮಿತ ಭೇಟಿಗಳು ಯಾಕೋ?? ಪಾಪ.. ನಿಮ್ಮ ಫಜೀತಿ!! ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಜನಕ್ಕೇ ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್ʼನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೇ? ʼಆಪರೇಷನ್ ಕಮಲಕಾಂಡʼದಲ್ಲಿ ನಿಮ್ಮದೂ ಒಂದು ತುಕ್ಕುಹಿಡಿದ ಅಧ್ಯಾಯವಿದೆಯಲ್ಲಾ? ಸಾಮ್ರಾಟ್ ಅಶೋಕೂ ಮತ್ತು ಆಪರೇಷನ್ ಕಮಲವೂ.. ಎಂದು ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿ ಸಚಿವ ಆರ್.ಅಶೋಕ್ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..

Tags: BJPbsbommaiBSYcmbommaiCongress PartyHdKumaraswamyJDS MLA Shivalinge Gowdalatestnewslivenewsr.ashokಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ತಾಯಿಯನ್ನು ಕೊಂದು 3 ತಿಂಗಳು ಮೃತದೇಹದೊಂದಿಗೆ ವಾಸ : ವಾಸನೆ ಮರೆಮಾಚಲು 200 ಪರ್ಫ್ಯೂಮ್​ ಬಳಕೆ..!

Next Post

Rahul Gandhi : ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ : ರಾಹುಲ್ ಗಾಂಧಿ ಸ್ಪಷ್ಟನೆ..!

Related Posts

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು
ಕರ್ನಾಟಕ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

by ಪ್ರತಿಧ್ವನಿ
April 23, 2026
0

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3)...

Read moreDetails
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಜಿಲ್ಲಾವಾರು ವಿವರ ಇಲ್ಲಿದೆ

April 23, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
Next Post
Rahul Gandhi : ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ : ರಾಹುಲ್ ಗಾಂಧಿ ಸ್ಪಷ್ಟನೆ..!

Rahul Gandhi : ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ : ರಾಹುಲ್ ಗಾಂಧಿ ಸ್ಪಷ್ಟನೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada