Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Rahul Gandhi : ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ : ರಾಹುಲ್ ಗಾಂಧಿ ಸ್ಪಷ್ಟನೆ..!

ಪ್ರತಿಧ್ವನಿ

ಪ್ರತಿಧ್ವನಿ

March 16, 2023
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ನವದೆಹಲಿ:ಮಾ.16: ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ತಾವು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ನನಗೆ ಅವಕಾಶ ನೀಡಿದರೆ ಖಂಡಿತ ಈ ಕುರಿತು ಮಾತನಾಡುತ್ತೇನೆ ಎಂದಿದ್ದಾರೆ.
ನಾನು ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆಯನ್ನು ನೀಡಿಲ್ಲ. ಭಾರತದ ಸದ್ಯದ ಪರಿಸ್ಥಿತಿಯ ಕುರಿತು ಮಾತ್ರ ಮಾತನಾಡಿದ್ದೇನೆ. ಭಾರತದ ಪ್ರಜಾಪ್ರಭುತ್ವ ಉಳಿಸಲು ನಾನು ವಿದೇಶಿ ನೆರವು ಕೇಳಿದ್ದೇನೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದುದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.
ಲಂಡನ್‌ನಲ್ಲಿ ನಾನು ಮಾಡಿದ ಭಾಷಣಕ್ಕೆ ಕ್ಷಮೆ ಕೋರಬೇಕು ಎಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿದೆ. ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಈ ಕುರಿತು ನಾನು ಇಂದು ಲೋಕಸಭೆಯಲ್ಲಿ ಮಾತನಾಡಲು ಸಿದ್ಧವಿದ್ದು, ಆಡಳಿತಾರೂಢ ಸದಸ್ಯರು ನನ್ನ ಮಾತನ್ನು ಕೇಳುವ ಸಂಯಮ ತೋರಬೇಕಷ್ಟೇ ಎಂದು ರಾಹುಲ್‌ ಗಾಂಧಿ ಮಾರ್ಮಿಕವಾಗಿ ಹೇಳಿದ್ದಾರೆ.


ಅದಾನಿ ವಿವಾದದಿಂದ ದೇಶದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ, ತಮ್ಮ ಭಾಷಣದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಅದಾನಿ ವಿವಾದ ಪ್ರಧಾನಿ ಮೋದಿ ಅವರ ಕೊರಳಿಗೆ ಸುತ್ತಿಕೊಂಡಿರುವುದನ್ನು ಮನಗಂಡಿರುವ ಬಿಜೆಪಿ, ಪ್ರಧಾನಿ ರಕ್ಷಣೆಗಾಗಿ ಸಂಸತ್ತಿನಲ್ಲಿ ಇಷ್ಟೆಲ್ಲಾ ನಾಟಕವಾಡುತ್ತಿದೆ ಎಂದು ರಾಹುಲ್‌ ಗಾಂಧಿ ಹರಿಹಾಯ್ದರು.
ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದು ಸತ್ಯ. ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದ್ದು, ವಿಪಕ್ಷಗಳ ಅಸ್ತಿತ್ವವನ್ನೇ ನಾಶ ಮಾಡಲು ಹೊರಟಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಗುರಿ ಮಾಡಲಾಗುತ್ತಿದೆ. ಈ ಸತ್ಯವನ್ನೇ ನಾನು ಲಂಡನ್‌ನ ನನ್ನ ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಭಾರತದ ಇಂದಿನ ಸ್ಥಿತಿ ಜಗತ್ತಿನ ಪ್ರಜಾತಂತ್ರವಾದಿಗಳಿಗೆ ಆತಂಕ ತರಿಸಿರುವುದು ಸುಳ್ಳಲ್ಲ ಎಂದು ರಾಹುಲ್‌ ಗಾಂಧಿ ಹೇಳಿದರು.
ಭಾರತದ ಪ್ರಜಾತಂತ್ರ ಅದೆಷ್ಟು ಅಪಾಯದಲ್ಲಿದೆ ಎಂಬುದಕ್ಕೆ, ಸಂಸತ್ತಿನಲ್ಲಿ ಆಡಳಿತಾರೂಢ ಸದಸ್ಯರು ಎಬ್ಬಿಸಿರುವ ಗದ್ದಲವೇ ಸಾಕ್ಷಿ. ತಮ್ಮ ಭ್ರಷ್ಟಾಚಾರ, ಪ್ರಜಾತಂತ್ರ ವಿರೋಧಿ ನಿಲುವನ್ನು ಮುಚ್ಚಿಕೊಳ್ಳಲು, ವಿಪಕ್ಷ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಅವರು ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದ ಪರವಾಗಿ ಹಾಗೂ ಸತ್ಯದ ಪರವಾಗಿ ನಾನು ನನ್ನ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi
ಇದೀಗ

Rahul Gandhi in karnataka : ಕರ್ನಾಟಕಕ್ಕೆ ರಾ. ಗಾ ..!| Rahul Gandhi

by ಪ್ರತಿಧ್ವನಿ
March 20, 2023
RANDEEP SURJEWALA : ಮೀಸಲಾತಿ ಪರಿಷ್ಕರಣೆ: ಜನರನ್ನ ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಪ್ರಯತ್ನ ..!
ಇದೀಗ

RANDEEP SURJEWALA : ಮೀಸಲಾತಿ ಪರಿಷ್ಕರಣೆ: ಜನರನ್ನ ಧರ್ಮ, ಜಾತಿ ಆಧಾರದ ಮೇಲೆ ವಿಭಜನೆ ಮಾಡುವ ಪ್ರಯತ್ನ ..!

by ಪ್ರತಿಧ್ವನಿ
March 26, 2023
‘85 % ಸರ್ಕಾರ ನಡೆಸಿದವರು ಇಂದು ನಮ್ಮ ಮೇಲೆ ಕಮಿಷನ್​ ಆರೋಪ ಮಾಡ್ತಿದ್ದಾರೆ ’ : ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಕಿಡಿ
Uncategorized

‘85 % ಸರ್ಕಾರ ನಡೆಸಿದವರು ಇಂದು ನಮ್ಮ ಮೇಲೆ ಕಮಿಷನ್​ ಆರೋಪ ಮಾಡ್ತಿದ್ದಾರೆ ’ : ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಕಿಡಿ

by ಮಂಜುನಾಥ ಬಿ
March 24, 2023
ಮೈಸೂರಿನಲ್ಲಿ ಜೆಡಿಎಸ್​ ಪಕ್ಷದ ಐತಿಹಾಸಿಕ ಪಂಚರತ್ನ ಸಮಾರೋಪ..! ವಿಶೇಷತೆ ಗೊತ್ತಾ..?
Top Story

ಮೈಸೂರಿನಲ್ಲಿ ಜೆಡಿಎಸ್​ ಪಕ್ಷದ ಐತಿಹಾಸಿಕ ಪಂಚರತ್ನ ಸಮಾರೋಪ..! ವಿಶೇಷತೆ ಗೊತ್ತಾ..?

by ಕೃಷ್ಣ ಮಣಿ
March 26, 2023
ಅದೃಷ್ಟದ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಫಿಕ್ಸ್‌ ..!
Top Story

ಅದೃಷ್ಟದ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಫಿಕ್ಸ್‌ ..!

by ಪ್ರತಿಧ್ವನಿ
March 25, 2023
Next Post
Unfinished Akkamahadevi Putthali : ಪೂರ್ಣಗೊಳ್ಳದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟನೆಗೆ ಸಿಎಂ ಆಗಮನ : ಕಾಂಗ್ರೆಸ್ ಆಕ್ರೋಶ

Unfinished Akkamahadevi Putthali : ಪೂರ್ಣಗೊಳ್ಳದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟನೆಗೆ ಸಿಎಂ ಆಗಮನ : ಕಾಂಗ್ರೆಸ್ ಆಕ್ರೋಶ

Eshwarappa Defends Statement Against Aajan : ಪ್ರತಿಭಟನೆಗೆಲ್ಲ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ

Eshwarappa Defends Statement Against Aajan : ಪ್ರತಿಭಟನೆಗೆಲ್ಲ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ

ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ “ಕಾಂತಾರ” ಸಿನಿಮಾ ಪ್ರದರ್ಶನ

ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ "ಕಾಂತಾರ" ಸಿನಿಮಾ ಪ್ರದರ್ಶನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist