• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮೋರಿ, ರಾಜಕಾಲುವೆ, SWD ನೀರು ಮಿಕ್ಸ್ ಆಗಿ ಬೆಳ್ಳಂದೂರು ಕೆರೆ ಸುತ್ತ ಮುತ್ತ ದುರ್ನಾತ 

ಪ್ರತಿಧ್ವನಿ by ಪ್ರತಿಧ್ವನಿ
September 24, 2022
in ಕರ್ನಾಟಕ
0
ಮೋರಿ, ರಾಜಕಾಲುವೆ, SWD ನೀರು ಮಿಕ್ಸ್ ಆಗಿ ಬೆಳ್ಳಂದೂರು ಕೆರೆ ಸುತ್ತ ಮುತ್ತ ದುರ್ನಾತ 
Share on WhatsAppShare on FacebookShare on Telegram

ಮಳೆ ಬಂದು ಹೋದ ಮೇಲೆ ಬೆಳ್ಳಂದೂರು ನಿವಾಸಿಗಳಿಗೆ ಮತ್ತೊಂದು‌ ಗೋಳು ಶುರುವಾಗಿದೆ. ಮಳೆ ಬಂದಾಗ ನೆರೆ ಜೊತೆ ಗುದ್ದಾಡಿದ್ದಾಯ್ತು. ಈಗ ಮಳೆಯ ಸೈಡ್ ಎಫೆಕ್ಟ್ ನಿಂದಾಗಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ನಿವಾಸಿಗಳು ಮೂಗಿ ಮುಚ್ಚಿಕೊಂಡು ಓಡಾಡಬೇಕಾಗಿದೆ.

ADVERTISEMENT

ಕೆರೆಯ ನಾಲೆ, ರಾಜಕಾಲುವೆ ಎಲ್ಲ ಗಬ್ಬುನಾರುತ್ತಿದೆ. ಆದರೆ ಪಾಲಿಕೆ ಮಾತ್ರ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತಿದೆ.

ರಾಜಕಾಲುವೆಯಿಂದ ಬರುವ ವಾಸನೆಗೆ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ

ಮಳೆ ನಿಂತ ಮೇಲೆ ಬೆಳ್ಳಂದೂರು ನಿವಾಸಿಗಳು ಒಂದಲ್ಲಾ ಒಂದು ಯಾತನೆ ಅನುಭವಿಸುತ್ತಿದ್ದಾರೆ. ಮೆರೆಯಿಂದಾಗಿ ಕಾರು, ಬೈಕು, ಮನೆಯೊಳಗಿನ ವಸ್ತುಗಳನ್ನೆಲ್ಲಾ ಕಳೆದುಕೊಂಡು ಮತ್ತೆ ರೂಟಿನ್ ಲೈಫ್ ಗೆ ಒಗ್ಗಿಕೊಳ್ಳೋಕೆ ಶುರುವಾಗಿದ್ರು. ಆಗಲೇ ಬೆಳ್ಳಂದೂರು ನಿವಾಸಿಗಳಿಗೆ ಮತ್ತೊಂದು ಕಾಟ ಶುರುವಾಗಿದೆ. ಈಗ ಬೆಳ್ಳಂದೂರು ಕೆರೆ ಯಿಂದ ಬರುವ ನೀರು ಮೋರಿ ನೀರಿನ ಜೊತೆ ಮಿಕ್ಸ್ ಆಗಿ ಗಬ್ಬುನಾರೋದಕ್ಕೆ ಶುರುವಾಗಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡೋಕೆ ಶುರುವಾಗಿದೆ. ಕಳೆದ ಕೆಲವು ವರ್ಷಗಳಿಂದ ಡ್ರೈನ್ ಲೈನ್ ಗಳು ಕೆರೆಗೆ ಬಿಟ್ಟಿರುವ ಹಿನ್ನೆಲೆ ನೊರೆ ಹಾವಳಿ ಹೆಚ್ಚಾಗಿತ್ತು. ಆದರೆ ಕ್ರಮೇಣವಾಗಿ ನೊರೆ ತಗ್ಗಿ ಜನರು ‌ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮಳೆಯ ಕಾರಣಕ್ಕೆ ಮತ್ತೆ ವಿಪರೀತ ದುರ್ನಾತ ಬರುತ್ತಿದ್ದು ಜನರು ಹೈರಾಣಗಿದ್ದಾರೆ. 

ಬೆಳ್ಳಂದೂರು ಕೆರೆ ಸುತ್ತಮುತ್ತ ದುರ್ನಾತ : ಮನೆಯೊಳಗೂ ಮಾಸ್ಕ್ ಹಾಕಿಕೊಳ್ಳಬೇಕಾದ ಸ್ಥಿತಿ

ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ದಿನ ದುರ್ನಾತದಿಂದ ಉಸಿರಾಟ ಸಮಸ್ಯೆ ಇಲ್ಲಿನ ಜನರು ಎದುರಿಸುತ್ತಿದ್ದಾರೆ. ಮನೆಯೊಳಗೆ ಕೂರುವಾಗಲೂ ಮಾಸ್ಕ್ ಹಾಕಿಕೊಂಡೇ ಇರಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಮಳೆ ಬಂದು ಹೋದ ಬಳಿಕ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿರುದೆ ಇಲ್ಲಿನ ರಾಜಕಾಲುವೆ ನೀರು.

ಈ ಮೊದಲು ವಾಸನೆ ಬರುತ್ತಿದ್ದರೂ ಇಷ್ಟು ಪ್ರಮಾಣದಲ್ಲಿ ಇರ್ಲಿಲ್ಲ. ಇದೀಗ ಮಾಸ್ಕ್ ಇಲ್ಲದೆ ಇಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಒಟ್ಟಾರೆ ಕಾಲಕಾಲಕ್ಕೆ ಕೆರೆ ಹೂಳೆತ್ತಿ ಕ್ಲೀನ್ ಮಾಡಬೇಕಿದ್ದ ಬಿಬಿಎಂಪಿ ತನ್ನ ಜವಾಬ್ದಾರಿ ಮರೆತಂತಿದೆ. ಹೀಗೆ ಆದರೆ ಬೆಳ್ಳಂದೂರು ಜನರಿಗೆ ಇದರಿಂದ ತೀವ್ರವಾದ ಕಾಯಿಲೆಗಳು ಉಲ್ಬಣಗೊಳ್ಳಲಿದೆ. ಅದಕ್ಕೂ ಮೊದಲೇ ಪಾಲಿಕೆ ಎಚ್ಚೆತ್ತುಕೊಂಡು ಇದಕ್ಕೊಂದು ಪರಿಹಾರ ಕಾಣಬೇಕಿದೆ.

Previous Post

ರೋಹಿತ್ ಅಬ್ಬರಕ್ಕೆ ಮಂಕಾದ ಆಸ್ಟ್ರೇಲಿಯಾ: ಭಾರತಕ್ಕೆ 6 ವಿಕೆಟ್ ರೋಚಕ ಜಯ

Next Post

ಗೂಗಲ್‌ ಮ್ಯಾಪ್‌ನಲ್ಲೂ ಬೆಂಗಳೂರಿನ ಮಾನ ಹರಾಜು!!

Related Posts

“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 
ಕರ್ನಾಟಕ

ರಾಜೀನಾಮೆ ಬಳಿಕ ಸಿದ್ದರಾಮಯ್ಯ ಭಾವುಕ ವಿದಾಯ ಭಾಷಣ: ಮಾತಾಡಿದ್ದೇನು

by ಪ್ರತಿಧ್ವನಿ
May 28, 2026
0

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಸಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾವುಕ ವಿದಾಯ ಭಾಷಣ ಮಾಡಿದರು. ತಮ್ಮ...

Read moreDetails
“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 

“ಮುಂದಿನ 8 ವರ್ಷ ಡಿಕೆಶಿಯನ್ನು ಅಲ್ಲಾಡಿಸಲು ಆಗಲ್ಲ”: ರಾಜಗುರು ದ್ವಾರಕನಾಥ್ ಗುರೂಜಿ ಭವಿಷ್ಯ ವೈರಲ್! 

May 28, 2026
ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
Next Post
ಗೂಗಲ್‌ ಮ್ಯಾಪ್‌ನಲ್ಲೂ ಬೆಂಗಳೂರಿನ ಮಾನ ಹರಾಜು!!

ಗೂಗಲ್‌ ಮ್ಯಾಪ್‌ನಲ್ಲೂ ಬೆಂಗಳೂರಿನ ಮಾನ ಹರಾಜು!!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada