ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೂಲಭೂತ ವ್ಯವಸ್ಥೆ ಸರಿಯಾಗಿಲ್ಲ. ಬೆಂಗಳೂರು ರಸ್ತೆಗುಂಡಿಗಳ ತಾಣ ಆಗಿದೆ ಅನ್ನೋದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೊತ್ತು. ಆದ್ರೆ ಈ ವಿಚಾರ ಇದೀಗ ಗೂಗಲ್ ಮ್ಯಾಪ್ಗೂ ಗೊತ್ತಾಗಿದೆ. ಬೆಂಗ್ಳೂರಿನಲ್ಲಿ ಪಾಟ್ಹೋಲ್ ಎಲ್ಲಿದೆ ಅಂತ ಮ್ಯಾಪ್ ಕೂಡ ತೋರಿಸೋ ಮಟ್ಟಿಗೆ ಬೆಂಗಳೂರಿನ ಮಾನ ಹರಾಜಾಗ್ತಿದೆ.
ಏರಿಯಾ ಹೆಸರಿನ ಬದಲು ಪಾಟ್ಹೋಲ್ ಅಂತ ಹಾಕಿದ್ರೆ ಸಿಗುತ್ತೆ ಕರೆಕ್ಟ್ ಲೊಕೇಷನ್
ದೇಶದ ಎಲ್ಲರ ಅಚ್ಚು ಮೆಚ್ಚಿನ ನಗರ ನಮ್ ಬೆಂಗಳೂರು. ನಮ್ಮ ದೇಶದ ವಿವಿಧ ರಾಜ್ಯಗಳಿಂದ ಬಿಡಿ, ಹಲವು ವಿದೇಶೀಯರೂ ಬೆಂಗಳೂರನ್ನೇ ತಮ್ಮ ವಾಸಸ್ಥಾನವನ್ನಾಗಿ ಆರಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಬೆಂಗಳೂರು ಬೆಳೆಯುತ್ತಾ, ಅಕ್ಕಪಕ್ಕದ ಹಳ್ಳಿಗಳನ್ನೆಲ್ಲಾ ತನ್ನ ತೆಕ್ಕೆಯೊಳಕ್ಕೆ ತೆಗೆದುಕೊಂಡು ಬೃಹತ್ ಗಾತ್ರ ಪಡೆದಿದೆ ನಮ್ಮ ನಗರ. ಆದ್ರೀಗ ಅಧಿಕಾರಗಳ ಮಾಡಿದ ತಪ್ಪಿಗೆ ಸಿಲಿಕಾನ್ ಸಿಟಿ ನಗೆಪಾಟಲಿಗೆ ಈಡಾಗಿದ್ದು, ರಸ್ತೆ ಗುಂಡಿಗಳು ಗೂಗಲ್ ಮ್ಯಾಪ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಗೂಗಲ್ ಮ್ಯಾಪ್ ಹಾಕಿ ಈ ಹೆಸರು ಸರ್ಚ್ ಮಾಡಿದ್ರೆ ಪಾಟ್ಹೋಲ್ ಏರಿಯಾಗೆ ಕರೆದುಕೊಂಡು ಹೋಗುತ್ತೆ.
ಹೌದು, ಬೆಂಗಳೂರಿನ ರಸ್ತೆ ಗುಂಡಿಗಳು ಇದೀಗ ಗೂಗಲ್ ಮ್ಯಾಪ್ ನಲ್ಲೂ ಸ್ಥಾನ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಗೂಗಲ್ ಮ್ಯಾಪ್ ನಲ್ಲಿ ಬೆಂಗಳೂರು ಪಾಟ್ ಹೋಲ್ ಅಡ್ರೆಸ್ ಸಖತ್ ವೈರಲ್ ಆಗ್ತಿದೆ. ಬೆಳ್ಳಂದೂರಿನ ಹಬೀಝರ್ ಪಾಟ್ಹೋಲ್ ಅಂದ್ರೆ ವಿಭಜಕ ರಸ್ತೆಗುಂಡಿ ಅಂತ (Abizer’s pothole) ಅಡ್ರೆಸ್ ಗೂಗಲ್ ಮ್ಯಾಪ್ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿಯ ಮರ್ಯಾದೆ ಮೂರು ಕಾಸಿಗೆ ಹರಾಜು ಆಗಿದೆ. nimo tai ಅನ್ನೊ ಟ್ವಿಟರ್ ಅಕೌಂಟ್ ನಿಂದ ರಸ್ತೆಗುಂಡಿಯ ಸ್ಕ್ರೀನ್ ಶಾಟ್ ಸಖತ್ ಸುದ್ದಿ ಆಗಿದ್ದು, ಇದು ನಾನು ಕಂಡ ಅದ್ಭುತ ರಸ್ತೆಗುಂಡಿ, ದಯವಿಟ್ಟು ಇಲ್ಲಿಗೆ ಭೇಟಿ ಕೊಡಿ ಎಂದು ಕಮೆಂಟ್ಸ್ ಬರ್ತಿವೆ. ಬೆಳ್ಳಂದೂರಿನ ಬಳಿ ಇರೋ ಹಂಬಾಲಿಪುರದ ಹೆಸರು ಈಗ ಪಾಟ್ಹೋಲ್ ಅಂತ ಚೇಂಜ್ ಆಗ್ಬಿಟಿದೆ.
ಈ ಬಗ್ಗೆ ಮಾತನಾಡಿರೋ ಸಿವಿಕ್ ಎಕ್ಸ್ಪರ್ಟ್ ಶ್ರೀಹರಿ, ಅಧಿಕಾರಿಗಳ ತಪ್ಪಿನಿಂದ ಗುಂಡಿಗಳಿಗೂ ಮ್ಯಾಪ್ ಗೆ ಬರುವಂತ ಸ್ಥಿತಿ ಮಾಡಿದ್ದಾರೆ. ಈ ರಸ್ತೆ ಗುಂಡಿಗಳಿಗೆ ಇನ್ಮುಂದೆ ಪಿನ್ ಕೋಡ್ ಕೊಡೋದು ಒಳ್ಳೆಯದು. ಅಧಿಕಾರಿಗಳು ಹೋಪ್ಲೆಸ್ ಕೆಲಸ ಮಾಡ್ತಿದ್ದಾರೆ. ಒಂದು ಅಡ್ರೆಸ್ ಬೇಕಾದರೆ ನಾವು ಮ್ಯಾಪ್ ಹಾಕಿಕೊಂಡು ಹೋಗ್ತಿವಿ. ಇದೀಗ ಗುಂಡಿಗಳಿಗೆ ಮ್ಯಾಪ್ ಬಂದಿದೆ. ಐಟಿ ಸಿಟಿ ಬೆಂಗಳೂರಿನ ಮಾನ, ಮರ್ಯಾದೆ ತೆಗೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಬೆಂಗಳೂರಿನ ಮರ್ಯಾದೆ ಎಲ್ಲಾ ಕಡೆಗಳಲ್ಲಿ ಈಗಾಗ್ಲೇ ಹರಾಜಾಗ್ತಿದೆ. ಆದ್ರೀಗ ಗೂಗಲ್ ಮ್ಯಾಪ್ನಲ್ಲೂ ಈ ಸುದ್ದಿ ಸದ್ದು ಮಾಡ್ತಿದ್ದು, ಅಧಿಕಾರಿಗಳು ನಿದ್ದೆಯಿಂದ ಎದ್ದು ಬ್ರಾಂಡ್ ಬೆಂಗಳೂರಿನ ಹೆಸರನ್ನು ಉಳಿಸಬೇಕಿದೆ.