• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ವಿಜಯನಗರ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಆರು ಮಂದಿ ಸಾವು!

ಫಾತಿಮಾ by ಫಾತಿಮಾ
October 6, 2021
in ಕರ್ನಾಟಕ
0
ವಿಜಯನಗರ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಆರು ಮಂದಿ ಸಾವು!
Share on WhatsAppShare on FacebookShare on Telegram

ಕರ್ನಾಟಕದಲ್ಲಿ ಹೊಸದಾಗಿ ರಚಿಸಿದ ವಿಜಯನಗರ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಪ್ಟೆಂಬರ್ 23ರಿಂದ ಇದುವರೆಗೆ ಆರು ಜನರು ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈ ಮಧ್ಯೆ, 100 ಕ್ಕೂ ಹೆಚ್ಚು ಜನರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ADVERTISEMENT

2,000 ಜನಸಂಖ್ಯೆ ಹೊಂದಿರುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಈ ಸಾವುಗಳು ವರದಿಯಾಗಿವೆ.  ಮೂಲಗಳ ಪ್ರಕಾರ, ಸಾವಿನ ಸರಣಿ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗಿದೆ. ಸಪ್ಟೆಂಬರ್ 23ರಂದು ಇಬ್ಬರು ವ್ಯಕ್ತಿಗಳು ಅತಿಸಾರದಿಂದ ಸಾವನ್ನಪ್ಪಿದ್ದರು ಮತ್ತು ಅಕ್ಟೋಬರ್ 1 ರಂದು ಮತ್ತೊಬ್ಬರು ಸಾವನ್ನಪ್ಪಿದರು.

ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಆಗಸ್ಟ್ ಆರಂಭದಲ್ಲಿಯೇ ಹಳ್ಳಿಯ ಜನರು ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದ್ದರು ಮತ್ತು ಈ ಬಗ್ಗೆ ಹೆಚ್ಚಿನ ವಿಚಾರಣೆ ಕೈಗೊಂಡು ನೀರಿನ ಮಾದರಿಗಳನ್ನು ಸಂಗ್ರಹಿಸಿದಾಗ ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ಸಾಬೀತಾಗಿತ್ತು.  ಆಗ ಗ್ರಾಮವು ಬಳ್ಳಾರಿ ಜಿಲ್ಲೆಯಲ್ಲಿತ್ತು.

ಅಕ್ಟೋಬರ್ 2 ರಂದು ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು. ಆ ಹೊತ್ತಿಗಾಗುವಾಗಲೇ  ವಾಂತಿ ಮತ್ತು ಅತಿಸಾರ ಖಾಯಿಲೆಯಿಂದ ಗ್ರಾಮಸ್ಥರು ಸಾವನ್ನಪ್ಪಿದ್ದರು. ಆಡಳಿತಾಧಿಕಾರಿಯೊಬ್ಬರ ಪ್ರಕಾರ ಕೊಳವೆಬಾವಿಗೆ ಹೊಸ ಪೈಪ್‌ಲೈನ್‌ಗಳನ್ನು ಅಳವಡಿಸುವ ಸಮಯದಲ್ಲಿ ಕೊಳಚೆನೀರು ಮತ್ತು ಹಾನಿಗೊಳಗಾದಾಗ ನೀರು ಕುಡಿಯುವ ನೀರಿನೊಂದಿಗೆ ಬೆರೆತು ಈ ಅನಾಹುತ ಸಂಭವಿಸಿದೆ.

ಮೃತರನ್ನು ಲಕ್ಷ್ಮಮ್ಮ (50), ಬಸಮ್ಮ ಹವನೂರು (72), ನೀಲಪ್ಪ ಬೆಳವಗಿ (63), ಗೊನೆಪ್ಪ (55), ಮಹದೇವಪ್ಪ (70) ಮತ್ತು ಕೆಂಚಮ್ಮ (73) ಎಂದು ಗುರುತಿಸಲಾಗಿದೆ.  ಜಿಲ್ಲಾಡಳಿತವು ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದೆ ಮತ್ತು ರೋಗಿಗಳನ್ನು ಸ್ಥಳಾಂತರಿಸಲು ಎರಡು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ್ ಹೆಚ್ ಎಲ್ ಮಾತನಾಡಿ ಚರಂಡಿ ಪೈಪ್‌ಲೈನ್ ಸೋರಿಕೆಯಿಂದಾಗಿ ನೀರು ಕಲುಷಿತಗೊಂಡಂತೆ ತೋರುತ್ತಿದೆ ಎಂದು ಹೇಳಿದ್ದಾರೆ ಮತ್ತು “ರೋಗಿಗಳನ್ನು ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಸಾರ್ವಜನಿಕ ಬಳಕೆಗಾಗಿ ಗ್ರಾಮದಲ್ಲಿ ಆರ್‌ಒ ವಾಟರ್ ಪ್ಲಾಂಟ್ ಸ್ಥಾಪಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಘಟನೆಯು ಗಂಭೀರ ಸ್ವರೂಪದ್ದಾಗಿದೆ ಎಂದು ಹೇಳಿ ಮೃತರ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.  ಮಂಗಳವಾರ ಈ ಬಗ್ಗೆ ತನಿಖೆಗೂ ಆದೇಶಿಸಿ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರನ್ನು ತನಿಖಾಧಿಕಾರಿಯಾಗಿ  ನೇಮಿಸಿದ್ದಾರೆ. 

ಸಾವುಗಳನ್ನು ದೃಢಪಡಿಸಿರುವ ವಿಜಯನಗರ ಜಿಲ್ಲೆಯ ಉಪ ಆಯುಕ್ತ ಪಿ ಅನಿರುದ್ಧ್ ಶ್ರವಣ್  “ಆಗಸ್ಟ್ ಮೊದಲ ವಾರದಲ್ಲಿ ಈ ಸಮಸ್ಯೆ ಮೊದಲು ಬೆಳಕಿಗೆ ಬಂದಿತ್ತು ಆದರೆ ಸೆಪ್ಟೆಂಬರ್ 23 ರಂದು ಇಬ್ಬರು ವ್ಯಕ್ತಿಗಳು ಸತ್ತ ನಂತರ 54 ಜನರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ” ಎಂದು ಹೇಳಿದ್ದಾರೆ.

ನಾವು ಹಳ್ಳಿಯ ನೀರಿನ ಮೂಲಗಳು ಮತ್ತು ಬೋರ್‌ವೆಲ್‌ಗಳನ್ನು ಮುಚ್ಚಿ  ಆರ್‌ಒ ಪ್ಲಾಂಟ್ ಅನ್ನು ಸ್ಥಾಪಿಸಿದ್ದೇವೆ. ಇತರ ಮೂಲಗಳಿಂದ ನೀರನ್ನು ಬಳಸಬೇಡಿ ಮತ್ತು ಅವುಗಳನ್ನು ಕುದಿಸಿ ಬಳಸಿ ಎಂದು ಗ್ರಾಮಸ್ಥರಿಗೆ ತಿಳಿಸಲಾಗಿದೆ.  ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Tags: Anand SinghBasavaraj BommaiContaminatedDeathHospetHospet district proposalVijayanagara DynastyWater CrisisWater PollutionWater Scarcity
Previous Post

ರಸ್ತೆಗಳ ಕಳಪೆ ಕಾಮಗಾರಿ ಬಗ್ಗೆ ವರದಿ ತಯಾರಿಸಲು ಟಾಸ್ಕ್ ಪೋರ್ಸ್ ರಚನೆ: ಸಿಎಂ ಬಸವರಾಜ್ ಬೊಮ್ಮಾಯಿ

Next Post

CAA ಅನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸುತ್ತದೆ, NEP ಅನ್ನು ಚರ್ಚೆ ಮಾಡಿ ಜಾರಿಗೆ ತರಬೇಕು: Brijesh Kalappa

Related Posts

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು
ಕರ್ನಾಟಕ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ನಿಯಮ ಉಲ್ಲಂಘನೆ? ಪ್ರದೋಷ್ ವಿರುದ್ಧ ಪೊಲೀಸರಿಗೆ ದೂರು

by ಪ್ರತಿಧ್ವನಿ
September 16, 2026
0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಅಕ್ರಮ ಬೆಳಕಿಗೆ ಬಂದಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ. ಜೈಲು ನಿಯಮಗಳನ್ನು ಮೀರಿ...

Read moreDetails
ಕರ್ನಾಟಕ ಪ್ರವಾಸೋದ್ಯಮದಲ್ಲಿ ಹೂಡಿಕೆಗೆ ಯುಎಇ ಕನ್ನಡಿಗ ಉದ್ಯಮಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಆಹ್ವಾನ..

ಕರ್ನಾಟಕ ಪ್ರವಾಸೋದ್ಯಮದಲ್ಲಿ ಹೂಡಿಕೆಗೆ ಯುಎಇ ಕನ್ನಡಿಗ ಉದ್ಯಮಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಆಹ್ವಾನ..

September 15, 2026
ಪುಟಿದೇಳುತ್ತದೆಯೇ ಪ್ರಾದೇಶಿಕ ಪಕ್ಷ..?

ಪುಟಿದೇಳುತ್ತದೆಯೇ ಪ್ರಾದೇಶಿಕ ಪಕ್ಷ..?

September 15, 2026
‘ವಾಪಸ್‌ ಬಂದ ಮೇಲೆ ಅಲ್ಲೋಲ-ಕಲ್ಲೋಲ’ ಎಂದಿದ್ದ ಕುಮಾರಸ್ವಾಮಿ; ಈಗ ಯಾವ ಬಾಂಬ್ ಸಿಡಿಸಲಿದ್ದಾರೆ?

‘ವಾಪಸ್‌ ಬಂದ ಮೇಲೆ ಅಲ್ಲೋಲ-ಕಲ್ಲೋಲ’ ಎಂದಿದ್ದ ಕುಮಾರಸ್ವಾಮಿ; ಈಗ ಯಾವ ಬಾಂಬ್ ಸಿಡಿಸಲಿದ್ದಾರೆ?

September 15, 2026
T Narasipura Ganesha Procession Row : ವಿದ್ಯಾಬುದ್ಧಿಯ ಚೌಕದಿಂದ ಬೀದಿ ಜಗಳದ ಅಂಗಳಕ್ಕೆ..

T Narasipura Ganesha Procession Row : ವಿದ್ಯಾಬುದ್ಧಿಯ ಚೌಕದಿಂದ ಬೀದಿ ಜಗಳದ ಅಂಗಳಕ್ಕೆ..

September 15, 2026
Next Post
CAA ಅನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸುತ್ತದೆ, NEP ಅನ್ನು ಚರ್ಚೆ ಮಾಡಿ ಜಾರಿಗೆ ತರಬೇಕು: Brijesh Kalappa

CAA ಅನ್ನು ಕಾಂಗ್ರೆಸ್ ಎಂದಿಗೂ ವಿರೋಧಿಸುತ್ತದೆ, NEP ಅನ್ನು ಚರ್ಚೆ ಮಾಡಿ ಜಾರಿಗೆ ತರಬೇಕು: Brijesh Kalappa

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada