ಅಬಕಾರಿ ಮಂತ್ರಿಗೆ ತಿಂಗಳಿಗೆ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಲಂಚವನ್ನು ಇಲಾಖೆ ಅಧಿಕಾರಿಗಳು ನೀಡಬೇಕು ಎನ್ನುವ ಆರೋಪಗಳ ವಿಚಾರವಾಗಿ ಕೂಲಂಕುಶ ತನಿಖೆ ನಡೆಸಬೇಕು ಎಂದು ಕೆಆರ್ಎಸ್ ಪಕ್ಷ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದೆ.


ಅಬಕಾರಿ ಇಲಾಖೆಗೆ ಸೇರಿದ ಅಧಿಕಾರಿಗಳಿಬ್ಬರ ಮಾತುಕತೆಯ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಪ್ರತಿ ಜಿಲ್ಲೆಯಿಂದ ಅಬಕಾರಿ ಸಚಿವರಿಗೆ ಐದು ಲಕ್ಷ ಸೇರಬೇಕು ಎಂದು ಅಧಿಕಾರಿಗಳು ಮಾತನಾಡುವುದು ದಾಖಲಾಗಿದೆ.

ವೈರಲ್ ಆಗಿರುವ ಇದೇ ಆಡಿಯೋವನ್ನಿಟ್ಟುಕೊಂಡು ಕೆಆರ್‌ಎಸ್ ಪಕ್ಷ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದೆ. ದೂರಿನೊಂದಿಗೆ, ವೈರಲ್ ಆದ ಮಾತುಕತೆಯ ಸಿಡಿಯನ್ನು ಸಾಕ್ಷಿಯಾಗಿ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ACBಯಲ್ಲಿ ಇಂದು ದೂರು ದಾಖಲಿಸುವ ಮೂಲಕ ನಮ್ಮ ಕೆಲಸ ನಾವು ಮಾಡಿದ್ದೇವೆ. ಇನ್ನು ACB ಹೇಗೆ ಕೆಲಸ ಮಾಡುತ್ತದೆ ಎನ್ನುವುದು ರಾಜ್ಯದ ಮತದಾರರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.






