• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, June 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

40  ಪರ್ಸೆಂಟ್‌ ಕಮಿಷನ್‌, ಮೂರು ಸಿಎಂ ಇದೇ ಬಿಜೆಪಿ ಸರ್ಕಾರ : ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

ಪ್ರತಿಧ್ವನಿ by ಪ್ರತಿಧ್ವನಿ
December 2, 2021
in ದೇಶ, ರಾಜಕೀಯ
0
40  ಪರ್ಸೆಂಟ್‌ ಕಮಿಷನ್‌, ಮೂರು ಸಿಎಂ ಇದೇ ಬಿಜೆಪಿ ಸರ್ಕಾರ : ಗೋಪಾಲಕೃಷ್ಣ ಬೇಳೂರು ವಾಗ್ದಾಳಿ
Share on WhatsAppShare on FacebookShare on Telegram

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮೂವರು ಮುಖ್ಯಮಂತ್ರಿಯಾಗುತ್ತಾರೆ.ಬಿಜೆಪಿ ಸರ್ಕಾರದ ಅಜೆಂಡಾವೇ ಮೂವರು ಸಿಎಂ ಆಗುವುದು ಎಂದು ಕಾಂಗ್ರೆಸ್ ವಕ್ತಾರ ಗೋಪಾಲಕೃಷ್ಣ ಬೇಳೂರು ಟೀಕಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ, ಸದಾನಂದ ಗೌಡ ಹಾಗೂ ಜಗದೀಶ್ ಶೆಟ್ಟರ್ ಸಿಎಂ ಅಗಿದ್ದರು.ಈ ಬಾರಿ ಯಡಿಯೂರಪ್ಪ ಸಿಎಂ ಆಗಿದ್ದರು. ಇದೀಗ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಮುರುಗೇಶ ನಿರಾಣಿ ಸಿಎಂ ಆಗುತ್ತಾರಂತ ಅವರ ಪಕ್ಷದವರೇ ಹೇಳುತ್ತಿದ್ದಾರೆ.ಹೀಗಾಗಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ ಎಂದರು.

ಬಿಜೆಪಿಯವರು ಅಧಿಕಾರಕ್ಕೆ ಬಂದಿರುವುದು ೪೦ ಪರ್ಸೆಂಟ್ ಕಮಿಷನ್ ಏಜೆಂಟ್ ಆಗಿ ಬಂದಿರುವುದು. ಈ ಬಜೆಟ್ ಬಳಿಕ ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ. ಹೀಗಾಗಿ ಎಲ್ಲರೂ ಲೂಟಿಗೆ ಇಳಿದಿದ್ದಾರೆ.ಇಂಥ ಭ್ರಷ್ಟ ಹಾಗೂ ಸತ್ತು ಹೋಗಿರುವ ಸರ್ಕಾರವನ್ನು ಹಿಂದೆಂದೂ ನೋಡಿಲ್ಲ. ಎಲ್ಲದರಲ್ಲೂ ಹಣ ಹೊಡೆಯಲು ನಿಂತಿದ್ದಾರೆ. ವೈಟ್‌ ಟ್ಯಾಪಿಂಗ್‌ ದರ ನೋಡಿ ದ್ವಿಗುಣಕ್ಕಿಂತಲೂ ಹೆಚ್ಚು ನೀಡಲಾಗಿದೆ. ಬಜೆಟ್‌ ನಂತರ ಸಿಎಂ ಬದಲಾಗುವ ಆತಂಕ ಎದುರಾಗಿರೋದ್ರಿಂದ ಆದಷ್ಟು ಬಾಚಿಕೊಳ್ಳಲು ಬಿಜೆಪಿ ನಾಯಕರು ಶುರುವಿಟ್ಟಿದ್ದಾರೆ.

ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದಲ್ಲಿ ಇಲ್ಲ ಎನ್ನುತ್ತಿದ್ದಾರೆ.ಆದರೆ ಮುಂದೆ ಬಿಜೆಪಿ ಇರುತ್ತದೆಯೋ ಎಂಬುದನ್ನು ನೋಡಿಕೊಳ್ಳಲಿ. ಕಾಂಗ್ರೆಸ್ ಸದೃಢವಾಗಿದೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ.ಆದರೆ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ೧೪೦ ಸ್ಥಾನದಲ್ಲಿ ಗೆಲ್ಲುತ್ತೇವೆ ಎನ್ನುತ್ತಾರೆ.ಆದರೆ ಯಡಿಯೂರಪ್ಪ ಅವರನ್ನೇ ಕೆಳಗಿಳಿಸಿದ್ದಾರೆ. ಇನ್ನೆಲ್ಲಿ ಗೆಲ್ಲುವುದು ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ ಸರ್ಕಾರ ಬದುಕಿದ್ಯೋ ಇಲ್ಲೋ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಈಶ್ವರಪ್ಪ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷ ಪುನಃ ಪುನಃ ಅಧಿಕಾರಕ್ಕೆ ಬರಲು ಶಕ್ತವಾಗಿದೆ. ಕಾಂಗ್ರೆಸ್‌ ಬದುಕಿದೆ ಆದರೆ ಬಿಜೆಪಿ ಬದುಕಿದ್ಯಾ ನೋಡಬೇಕು. ಯಡಿಯೂರಪ್ಪ ನೂರ್‌ನಲವತ್ತು ಸೀಟ್‌ ಬರುತ್ತೆ ಎಂದು ಹೇಳುತ್ತಾರೆ. ಯಡಿಯೂರಪ್ಪನವರನ್ನೇ ಅಧಿಕಾರದಿಂದ ಇಳಿಸಿಬಿಟ್ಟಿದ್ದಾರೆ. ಕಳೆದ ಸಲವೂ ಅಷ್ಟೇ ಮಿಷನ್‌ ೧೫೦ ಅಂತ ಯಡಿಯೂರಪ್ಪ ಹೋದರೂ ಸಿಕ್ಕಿದ್ದು ಮಾತ್ರ ನೂರು ಚಿಲ್ಲರೇ ಸೀಟ್‌ ಮಾತ್ರ. ಈಗ ಬೊಮ್ಮಾಯಿಯನ್ನ ಕಟ್ಕೊಂಡು ಹೋಗ್ತೊರೋ ಅಥವಾ ನಿರಾಣಿ ಕಟ್ಕೊಂಡು ಹೋಗ್ತಿರೋ ಎಂದು ಬೇಳೂರು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲ ಸತ್ತಿದೆಯೋ ತಿಳಿಯುತ್ತಿಲ್ಲ.ಅತಿ ವೃಷ್ಟಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ರೈತರು ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಆದರೆ ಬಿಜೆಪಿ ಸಚಿವರು ಹಾಗೂ ಶಾಸಕರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ರೈತರ ಕಣ್ಣೀರು ಒರೆಸುವವರೇ ಇಲ್ಲವಾಗಿದೆ. ಅಡಿಕೆ, ಭತ್ತ, ಜೋಳ, ರಾಗಿ ಎಲ್ಲವೂ ಮಳೆಯಿಂದ ನಾಶವಾಗಿವೆ. ಆದರೂ, ಶಾಸಕರಾಗಲೀ, ಸಂಸದರಾಗಲೀ, ಅಧಿಕಾರಿಗಳಾಗಲೀ ಚೆಕಾರ ಎತ್ತುತ್ತಿಲ್ಲ. ರೈತರ ಶಾಪ ಇವರನ್ನು ತಟ್ಟದೇ ಬಿಡದು ಎಂದರು.

Tags: BJPCongress PartyCovid 19ಕೋವಿಡ್-19ಗೋಪಾಲಕೃಷ್ಣ ಬೇಳೂರುನರೇಂದ್ರ ಮೋದಿಬಿಜೆಪಿ
Previous Post

ಪತ್ರಕರ್ತರಿಗೆ ಉದ್ಯೋಗ, ನಿರಾಣಿ ಕುರಿತಾದ ಹೇಳಿಕೆ ತಿರುಚಿವೆ ಎಂದ ಈಶ್ವರಪ್ಪ..!

Next Post

40 ಪರ್ಸೆಂಟ್‌ ಕಮಿಷನ್‌, ಮೂರು ಸಿಎಂ ಇದೇ ಬಿಜೆಪಿ ಸರ್ಕಾರ : ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

Related Posts

ಯಾರ ಒತ್ತಡಕ್ಕೂ ಮಣಿಯಬೇಡಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ : ಸಿಎಂ ಡಿಕೆಶಿ ಖಡಕ್‌ ಸೂಚನೆ
Top Story

ಯಾರ ಒತ್ತಡಕ್ಕೂ ಮಣಿಯಬೇಡಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ : ಸಿಎಂ ಡಿಕೆಶಿ ಖಡಕ್‌ ಸೂಚನೆ

by ಪ್ರತಿಧ್ವನಿ
June 4, 2026
0

ಬೆಂಗಳೂರು : ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು...

Read moreDetails
ಖಾತೆಗಾಗಿ ಪಟ್ಟು ಹಿಡಿದ “ಕೈ” ಹಿರಿಯ ಸಚಿವ : ಆರಂಭದಲ್ಲೇ ಸಿಎಂ ಡಿಕೆಶಿಗೆ ಹೊಸಟೆನ್ಷನ್..!

ಖಾತೆಗಾಗಿ ಪಟ್ಟು ಹಿಡಿದ “ಕೈ” ಹಿರಿಯ ಸಚಿವ : ಆರಂಭದಲ್ಲೇ ಸಿಎಂ ಡಿಕೆಶಿಗೆ ಹೊಸಟೆನ್ಷನ್..!

June 4, 2026
ಸಚಿವ ಎಂ ಬಿ ಪಾಟೀಲ್ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ : ಕೈ ಹಿರಿಯ ನಾಯಕನಿಗೆ ಆಶೀರ್ವಾದ..!

ಸಚಿವ ಎಂ ಬಿ ಪಾಟೀಲ್ ಮನೆಗೆ ಸಿದ್ಧಗಂಗಾ ಶ್ರೀ ಭೇಟಿ : ಕೈ ಹಿರಿಯ ನಾಯಕನಿಗೆ ಆಶೀರ್ವಾದ..!

June 4, 2026
ಬತ್ತಿ ಹೋಯ್ತು ಡಾಕ್ಟರ್‌ ಆಗುವ ಕನಸು : NEET ವಿದ್ಯಾರ್ಥಿನಿ ಆಕಾಂಕ್ಷಾ ಆತ್ಮಹತ್ಯೆಗೆ ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

ಬತ್ತಿ ಹೋಯ್ತು ಡಾಕ್ಟರ್‌ ಆಗುವ ಕನಸು : NEET ವಿದ್ಯಾರ್ಥಿನಿ ಆಕಾಂಕ್ಷಾ ಆತ್ಮಹತ್ಯೆಗೆ ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ

June 4, 2026
ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ : KPCC ಪಟ್ಟ ಕರುಣಿಸಿದ ಹೈಕಮಾಂಡ್‌ಗೆ ಹರಿಪ್ರಸಾದ್‌ ಥ್ಯಾಂಕ್ಸ್‌…!

ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ : KPCC ಪಟ್ಟ ಕರುಣಿಸಿದ ಹೈಕಮಾಂಡ್‌ಗೆ ಹರಿಪ್ರಸಾದ್‌ ಥ್ಯಾಂಕ್ಸ್‌…!

June 4, 2026
Next Post
40  ಪರ್ಸೆಂಟ್‌ ಕಮಿಷನ್‌, ಮೂರು ಸಿಎಂ ಇದೇ ಬಿಜೆಪಿ ಸರ್ಕಾರ : ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

40 ಪರ್ಸೆಂಟ್‌ ಕಮಿಷನ್‌, ಮೂರು ಸಿಎಂ ಇದೇ ಬಿಜೆಪಿ ಸರ್ಕಾರ : ಗೋಪಾಲಕೃಷ್ಣ ಬೇಳೂರು ವಾಗ್ದಾಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!