ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 2 ಕ್ಷಿಪಣಿಗಳು ಉಕ್ರೇನ್ ನ ರೈಲ್ವೆ ನಿಲ್ದಾಣದ ಮೇಲೆ ಬಿದ್ದಿದ್ದರಿಂದ ಸುಮಾರು 30 ಮಂದಿ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಿಗ್ಗೆ ರಷ್ಯಾ, ಪೂರ್ವ ಉಕ್ರೇನ್ ನ ಕಾಮಟ್ರೊವಸ್ಕ್ ಪಟ್ಟಣದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ವೇಳೆ ರೈಲ್ವೆ ನಿಲ್ದಾಣದ ಮೇಲೆ ಬಿದ್ದ 2 ಕ್ಷಿಪಣಿಗಳಿಂದ ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 100ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.
ರಷ್ಯಾ ದಾಳಿ ಹಿನ್ನೆಲೆಯಲ್ಲಿ ನಾಗರಿಕರನ್ನು ಸುರಕ್ಷಿತ ಪ್ರದೇಶಗಳಿಗೆ ತಲುಪಿಸಲು ಈ ರೈಲ್ವೆ ನಿಲ್ದಾಣವನ್ನು ಬಳಸಲಾಗುತ್ತಿತ್ತು.






