• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಶನಿವಾರ ಭಾರತಕ್ಕೆ ಆಗಮಿಸಲಿರುವ 12 ಚೀತಾಗಳು

ಪ್ರತಿಧ್ವನಿ by ಪ್ರತಿಧ್ವನಿ
February 16, 2023
in ಇತರೆ / Others, ದೇಶ, ವಿಶೇಷ
0
ಶನಿವಾರ ಭಾರತಕ್ಕೆ ಆಗಮಿಸಲಿರುವ 12 ಚೀತಾಗಳು
Share on WhatsAppShare on FacebookShare on Telegram

ನವದೆಹಲಿ:  ದೇಶದಲ್ಲಿ ಚೀತಾಗಳಿರುವ ಏಕೈಕ ರಾಷ್ಟ್ರೀಯ ಉದ್ಯಾನವನ ಎಂಬ ಗರಿಮೆಗೆ ಪಾತ್ರವಾಗಿರುವ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ ಮತ್ತೆ ೧೨ ಚೀತಾಗಳನ್ನು ಸ್ವಾಗತಿಸಲು ಸಜ್ಜಾಗಿದೆ. 

ADVERTISEMENT

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 12 ಚೀತಾಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು,  ಒ.ಆರ್.ಟಂಬೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌’ಗಳಲ್ಲಿ ಚೀತಾಗಳು ಆಗಮಿಸಲಿವೆ.

ಮಧ್ಯಪ್ರದೇಶದ ಗ್ವಾಲಿಯರ್‌’ನ ವಾಯುಪಡೆ ನೆಲೆಗೆ ಶನಿವಾರ ಬೆಳಿಗ್ಗೆ ಚೀತಾಗಳು ಆಗಮಿಸಲಿವೆ. ಅಲ್ಲಿಂದ ಶಿಯೋಪುರ್‌’ನ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗುತ್ತದೆ. ಭಾರಿ ತೂಕ ಸಾಗಣೆಯ ಸಾಮರ್ಥ್ಯದ ಹೆಲಿಕಾಪ್ಟರ್‌ ಅನ್ನು ಭಾರತೀಯ ವಾಯುಪಡೆಯು ಈ ಉದ್ದೇಶಕ್ಕಾಗಿ ಒದಗಿಸಿದೆ.

ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಬೇಕು ಎಂಬ ಚರ್ಚೆ ಆರಂಭವಾದ ಮೂರು ವರ್ಷಗಳ ತರುವಾಯ ಇದು ಕಾರ್ಯಗತಗೊಳ್ಳುತ್ತಿದೆ. ಮೊದಲಿನ ಯೋಜನೆಯಂತೆ, ಚೀತಾಗಳು 2022ರ ಮೊದಲ ಅವಧಿಯಲ್ಲಿ ಬರಬೇಕಿತ್ತು. ಆದರೆ, ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಡುವುದು ವಿಳಂಬವಾಗಿತ್ತು.

ಒಪ್ಪಂದ ವಿಳಂಬವಾದ ಕಾರಣ ಭಾರತಕ್ಕೆ ಕಳುಹಿಸಲು ಗುರುತಿಸಲಾಗಿದ್ದ ಚೀತಾಗಳು ಇಲ್ಲಿನ ಲಿಂಪೊಪೊ ಪ್ರಾಂತ್ಯದ ಮೀಸಲು ಅರಣ್ಯದಲ್ಲಿ ಸೀಮಿತ ಪ್ರದೇಶದಲ್ಲೇ ದೀರ್ಘ ಕಾಲ ಕ್ವಾರಂಟೈನ್‌’ನಲ್ಲಿ ಕಳೆಯಬೇಕಾಯಿತು. 

ದಕ್ಷಿಣ ಆಫ್ರಿಕಾದ ಚೀತಾಗಳನ್ನು ಭಾರತದಲ್ಲಿ ಅವುಗಳು ಜೀವಿಸಲು ಸೂಕ್ತವಾಗಿರುವ ಹವಾಮಾನವುಳ್ಳ ಪ್ರಾಂತ್ಯದಲ್ಲಿ ಪರಿಚಯಿಸಲು ಸುಪ್ರೀಂ ಕೋರ್ಟ್ ಜನವರಿ 2020ರಲ್ಲಿ ಅನುಮತಿ ನೀಡಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌’ಟಿಸಿಎ) ನಮೀಬಿಯಾದ ಚೀತಾ ತರಲು ಅನುಮೋದನೆ ಕೋರಿ ಅರ್ಜಿ ಸಲ್ಲಿಸಿತ್ತು.

ನಮೀಬಿಯಾದಿಂದ ಕಳೆದ ಸೆಪ್ಟೆಂಬರ್‌’ನಲ್ಲಿ ಎಂಟು ಚೀತಾಗಳನ್ನು ಕರೆತಂದಿದ್ದು, ಸದ್ಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿವೆ. 
ಭಾರತದಲ್ಲಿದ್ದ ಚೀತಾಗಳು ಬೇಟೆ, ನಗರೀಕರಣ, ಕುಗ್ಗಿದ ಅರಣ್ಯ ವ್ಯಾಪ್ತಿ ಕಾರಣದಿಂದ ಸಂತತಿ ನಶಿಸಿತ್ತು. ಮತ್ತೆ ಚೀತಾ ಸಂತತಿ ವೃದ್ಧಿಗಾಗಿ ಇಲ್ಲಿ ಮರುಪರಿಚಯಿಸಲಾಗುತ್ತಿದೆ.

Tags: cheeta
Previous Post

ಸಿದ್ದರಾಮಯ್ಯನನ್ನು ಹೊಡೆದು ಹಾಕಿ ಮತ್ತು 10 ನಾಡ ಪಿಸ್ತೂಲ್’​ಗಳ ಜಪ್ತಿ..!

Next Post

ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
Next Post
ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada