ವೊಡಾ ಪೋನ್ ಮತ್ತು ಇಂಡಿಯಾ ಟೆಲಿಕಾಂ ಸಂಸ್ಥೆಗಳು (Vi) ಹಣಕಾಸಿನ ಸಮಸ್ಯೆಗೆ ಸಿಲುಕಿಕೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಆದಾಯದ ಪಾಲುದಾರಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಐಐಎಫ್ಎಲ್(ಇಂಡಿಯಾ ಇನ್ಫೋಲೈನ್ ಫೈನಾನ್ಸ್ ಲಿಮಿಟೆಡ್) ತನ್ನ ವರದಿಯಲ್ಲಿ ಪ್ರಕಟಿಸಿದೆ.
ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ದೂರ ಸಂಪರ್ಕ ವಲಯದ ಆದಾಯ ಮಾರುಕಟ್ಟೆಯ ಪಾಲನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಆದಾಯ ವೃದ್ಧಿಯಲ್ಲಿ ಮುಂದಿರುವ ಸಂಸ್ಥೆಗಳೆಂಬ ಹೆಗ್ಗಳಿಕೆಗೂ ಪಾತ್ರವಾಗಿವೆ. 2020 ರ ಎರಡನೇ ತ್ರೈ ಮಾಸಿಕದಲ್ಲಿ ಏರ್ಟೆಲ್ ಸಂಸ್ಥೆಯ ಆದಾಯದ ಪಾಲು ಶೇಕಡಾ 33, ಮುಂದಿನ ದಿನಗಳಲ್ಲಿ 37 ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ. ಹಾಗೆಯೇ ಜಿಯೋ ಸಂಸ್ಥೆಯದ್ದು ಶೇಕಡಾ 38, ವೊಡಾ ಮತ್ತು ಐಡಿಯಾ (Vi) ಸಂಸ್ಥೆಯದ್ದು ಶೇಕಡಾ 22, ಬಿಎಸ್ಎನ್ಎಲ್ ಸಂಸ್ಥೆಯದ್ದು ಶೇಕಡಾ 7 ರಷ್ಟು ಆದಾಯ ಮಾರುಕಟ್ಟೆಯ ಪಾಲು ಹೊಂದಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತ್ತ ಐಐಎಫ್ಎಲ್ ಸೆಕ್ಯುರಿಟೀಸ್ ವರದಿಯಲ್ಲಿ ಮತ್ತೊಂದು ಅಂಶವನ್ನು ಪ್ರಕಟಿಸಿದೆ. ದೂರ ಸಂಪರ್ಕ ಉದ್ಯಮದಲ್ಲಿ ಕೇವಲ ಎರಡು ಸಂಸ್ಥೆಗಳು ಉಳಿದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಜೀಯೋ ಪರಿಚಿತಗೊಂಡ ನಂತರ ಟೆಲಿಕಾಂ ಉದ್ಯಮದಲ್ಲಿ ಭಾರೀ ಬದಲಾವಣೆಗೊಂಡಿದ್ದು, ಇದರಿಂದ 4 ಸಂಸ್ಥೆಗಳ ಉಳಿವಿಗೂ ಸಂಕಷ್ಟ ಎದುರಾಗಿತ್ತು. ಆದರೀಗ ಎರಡು ಸಂಸ್ಥೆಗಳು ಮಾತ್ರ ಉಳಿದುಕೊಳ್ಳುವ ಸಾಧ್ಯತೆಯಿದೆ. ವೊಡಾ ಪೋನ್ ಮತ್ತು ಐಡಿಯಾ ಸಂಸ್ಥೆಗಳು ಹಣಕಾಸಿನ ಸಮಸ್ಯೆಗೆ ಸಿಲುಕಿ ಆದಾಯದ ಪಾಲು ಕಳೆದುಕೊಳ್ಳುವ ಕಾರಣ ಉಳಿವಿನ ಸಂಕಷ್ಟವೂ ಎದುರಾಗಿದೆ.
ಶಾಸನಬದ್ಧ ಪಾವತಿ ಮಾಡಲು ನಿಯಂತ್ರಣ ಕ್ರಮ ಮತ್ತು ಗಡುವು ಇರುವುದರಿಂದ ವೊಡಾ-ಇಂಡಿಯಾ ಆದಾಯದ ಪಾಲ ಕಳೆದುಕೊಳ್ಳಬಹುದು ಉಳಿದ ಎರಡು ಕಂಪನಿ ಅದರಲ್ಲಿಯೂ ಏರ್ಟೆಲ್ ತನ್ನ ಆದಾಯದ ಪಾಲುನ್ನು ಹೆಚ್ಚು ವೃದ್ಧಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೂರಸಂಪರ್ಕ ಸೇವಾ ಸಂಸ್ಥೆಗಳು ಈಗಾಗಲೆ ಸೇವಾ ಶುಲ್ಕ ಹೆಚ್ಚಿಸುವ ಸಾಧ್ಯತೆಯಿಲ್ಲ, ಮುಂದಿನ 12 ರಿಂದ 18 ತಿಂಗಳ ಕಾಲಾವಧಿಯಲ್ಲಿ ಹೆಚ್ಚು ಮಾಡುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.
Also Read: ರೈತರ ಪ್ರತಿಭಟನೆಗೆ ಬಂಡವಾಳ ಹೂಡಿದೆ ಏರ್ಟೆಲ್, ವಿಐ – ಜಿಯೋ ಆರೋಪ