• Home
  • About Us
  • ಕರ್ನಾಟಕ
Saturday, October 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸತ್ತು ಮಲಗಿದ ತಾಯಿಯನ್ನು ಎಬ್ಬಿಸುತ್ತಿರುವ ಮಗು : ಲಾಕ್‌ ಡೌನ್‌ ಅಧ್ಯಾಯ ಸೇರಿದ ಕಣ್ಣೀರ ಕಥೆ.!

by
May 27, 2020
in ದೇಶ
0
ಸತ್ತು ಮಲಗಿದ ತಾಯಿಯನ್ನು ಎಬ್ಬಿಸುತ್ತಿರುವ ಮಗು : ಲಾಕ್‌ ಡೌನ್‌ ಅಧ್ಯಾಯ ಸೇರಿದ ಕಣ್ಣೀರ ಕಥೆ.!
Share on WhatsAppShare on FacebookShare on Telegram

ಕಣ್ಣು ಹಾಗೂ ಮನಸ್ಸು ಒದ್ದೆಯಾಗುವ ಘಟನೆಯೊಂದು ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪುಟ್ಟ ಮಗುವೊಂದು ಸತ್ತು ಮಲಗಿರುವ ತನ್ನ ತಾಯಿಯನ್ನು ಎಬ್ಬಿಸುವ ಮನಕಲಕಿಸುವ ದೃಶ್ಯ ಅದು. ಆಕೆ ತನ್ನ ಕಂದಮ್ಮನ ಜತೆಗೆ ಗುಜರಾತ್‌ನಿಂದ ತವರಿಗೆ ರೈಲು ಹತ್ತಿದ್ದಳು. ಉಗಿಬಂಡಿ ಬಿಹಾರದ ಪಾಟ್ನಾದ ಮುಝಪ್ಪರಪುರ್‌ ರೈಲ್ವೇ ನಿಲ್ದಾಣ ತಲುಪುತ್ತಿದ್ದಂತೆ ಆಕೆ ಸಾವನ್ನಪ್ಪಿದ್ದಾಳೆ. ತೀವ್ರವಾದ ಬಾಯಾರಿಕೆ ಹಾಗೂ ಹಸಿವು ಆಕೆಯನ್ನು ಬಸವಳಿಯುವಂತೆ ಮಾಡಿದೆ. ಸಾವಪ್ಪಿದ ಆಕೆಯ ಮೃತ ದೇಹ ಮುಝಪ್ಪರಪುರ್‌ ರೈಲ್ವೇ ನಿಲ್ದಾಣದಲ್ಲಿದೆ. ಈ ವೇಳೆ ಆಕೆಯ ಮಗು ಆಕೆಯ ಮೇಲಿದ್ದ ಚಾದರವನ್ನು ಎಳೆದು ತಾಯಿಯನ್ನು ಎಬ್ಬಿಸುವ ದೃಶ್ಯ ಈ ಪ್ರಭುತ್ವವನ್ನು ಅಣಕಿಸುವಂತಿದೆ.

ADVERTISEMENT

ಮಗು ಎಷ್ಟೇ ಕರೆದರು, ಮೈ ಮೇಲಿದ್ದ ಚಾದರ ಎಳೆದಾಡಿದರೂ ಆಕೆ ಮಾತ್ರ ಏಳುವುದಿಲ್ಲ. ಆ ಕಂದಮ್ಮನಿಗೆ ಅದರ ಪರಿವೆಯೂ ಇಲ್ಲದೆ ತಾಯಿಯನ್ನು ಎಬ್ಬಿಸುವ ನಿರಂತರ ಪ್ರಯತ್ನ ಮಾಡುತ್ತಲೇ ಇತ್ತು. ಲಾಕ್‌ ಡೌನ್‌ನಿಂದ ಕಂಗೆಟ್ಟು ಊರು ಸೇರಲಾಗದೆ ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟ ವಲಸೆ ಕಾರ್ಮಿಕರ ಗೋಳು, ಸಂಕಟ, ಹತಾಶೆ ಹಾಗೂ ಅವರ ದುಸ್ಥಿತಿಯನ್ನು ಈ ದೃಶ್ಯಗಳು ಪ್ರತಿಬಿಂಬಿಸುತ್ತಿದೆ. ಆಳುವ ವರ್ಗ ಕಣ್ಣಿದ್ದು ಕುರುಡರಂತೆ, ಬಡವರ ಎದೆಯ ಮೇಲೆ ತಮ್ಮ ಸರ್ಕಾರವನ್ನು ನಿಲ್ಲಿಸಿರುವ ಪರಿ ಇದು.

ಮಾರ್ಚ್‌ ಅಂತ್ಯದಲ್ಲಿ ಭಾರತ ಸ್ಥಬ್ಧಗೊಂಡ ಮೇಲೆ ಲಕ್ಷಾಂತರ ಕಾರ್ಮಿಕರು ಹೆಣಗಾಡಿ ಹೋಗಿದ್ದರು. ಉದ್ಯೋಗವಿಲ್ಲ. ಕೈಯಲ್ಲಿ ಕಾಸಿಲ್ಲ. ಅತ್ತ ಮನೆಯೂ ಸೇರಲಾಗದೆ ಬಿಸಿಲ ಧಗೆಗೆ ನಡೆದು ಊರು ಸೇರಿದರು. ಈ ಮಧ್ಯೆ ಊರು ಸೇರಲಾಗದೆ ನಡು ರಸ್ತೆಯಲ್ಲೇ ಪ್ರಾಣ ಬಿಟ್ಟವರ ಸಂಖ್ಯೆ ಅದೆಷ್ಟೋ. ಈಗ ಈ ಮಗು. ನಿಜ. ಈ ಮಗುವಿನ ತಾಯಿ ರೈಲ್ವೆ ನಿಲ್ದಾಣದ ಮೇಲೆ ಸತ್ತು ಮಲಗಿರುವುದು, ದೇಶದಲ್ಲಿನ ಆಡಳಿತ ವರ್ಗ ಕುಂಭಕರ್ಣನ ರೀತಿ ನಿದ್ದೆಗೆ ಜಾರಿದೆ ಎಂಬುವುದಕ್ಕಿರುವ ಸಾಂಧರ್ಭಿಕ ನಿರ್ದಶನ.

ಇದೀಗ ಈ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಈ ದೃಶ್ಯಕಂಡು ನೆಟ್ಟಿಗರ ಕಣ್ಣಾಲಿ ಕಂಪಿಸಿಹೋಗಿದೆ. ಎಲ್ಲೆಲ್ಲೂ ಭಾವನಾತ್ಮಕ ಒಕ್ಕಣೆ ಬರೆದು ಹಂಚಿಕೊಳ್ಳಲಾಗುತ್ತಿದೆ. ಇದು ದೇಶ ಮುಂದೆ ಸಾಗಬಹುದಾದ ದಾರಿಯನ್ನು ನಿಚ್ಚಳಗೊಳಿಸಿದೆ. ಸರ್ಕಾರಗಳು, ದೇಶದ ಆಡಳಿತ ಯಂತ್ರ ಎಲ್ಲವೂ ಇದಕ್ಕೂ ಮರುಗದೆ ʻಪ್ಯಾಕೇಜ್‌ʼ ಸರ್ಕಾರ ನಡೆಸುವಲ್ಲಿ ನಿರತವಾಗಿದೆ. ಇದಕ್ಕಿಂತ ಕೆಟ್ಟ ದಿನಗಳು ದೇಶಕ್ಕೆ ಬಂದೊದಗಲಿದೆಯೇ..?

Tags: babybihar stationcovid19Lockdownmigrant tragedyMother Diedಎಬ್ಬಿಸುತ್ತಿರುವ ಮಗುಲಾಕ್ ಡೌನ್ಸತ್ತು ಮಲಗಿದ ತಾಯಿ
Previous Post

ವೈದ್ಯಕೀಯ ಉಪಕರಣ ಖರೀದಿ: ಸಮಗ್ರ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ

Next Post

ಕರ್ನಾಟಕಕ್ಕೂ ಮಿಡತೆ ಆತಂಕ : ಮತ್ತೆ ಕರೋನಾ ಮಾದರಿ ವೈಫಲ್ಯದತ್ತ ಕೇಂದ್ರ

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಕರ್ನಾಟಕಕ್ಕೂ ಮಿಡತೆ ಆತಂಕ : ಮತ್ತೆ ಕರೋನಾ ಮಾದರಿ ವೈಫಲ್ಯದತ್ತ ಕೇಂದ್ರ

ಕರ್ನಾಟಕಕ್ಕೂ ಮಿಡತೆ ಆತಂಕ : ಮತ್ತೆ ಕರೋನಾ ಮಾದರಿ ವೈಫಲ್ಯದತ್ತ ಕೇಂದ್ರ

Please login to join discussion

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ
Top Story

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

by ಪ್ರತಿಧ್ವನಿ
October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 24, 2025
ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ
Top Story

ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ್ ಸಿಂಹ

by ಪ್ರತಿಧ್ವನಿ
October 24, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ
Top Story

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ

by ಪ್ರತಿಧ್ವನಿ
October 24, 2025
ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ
Top Story

ಡಾಕ್ಟರ್ ಪತ್ನಿ ಕೊಲೆ; ಫಲಿಸಲಿಲ್ಲ ಆರೋಪಿ ಡಾ.ಮಹೇಂದ್ರ ರೆಡ್ಡಿ ಪ್ರಾರ್ಥನೆ

by ಪ್ರತಿಧ್ವನಿ
October 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

ಹಿಟ್ ಅಂಡ್ ರನ್ ಕೇಸ್: ದಿವ್ಯಾ ಸುರೇಶ್ ಮೊದಲ ಪ್ರತಿಕ್ರಿಯೆ

October 24, 2025
ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

ಜಿಬಿಎ ವ್ಯಾಪ್ತಿಗೆ ತರುವ ಹೊರವಲಯ ಪ್ರದೇಶಗಳ ಸಮೀಕ್ಷೆಗೆ ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್

October 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada