• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ ಸರಿಯೋ? ತಪ್ಪೋ?

by
June 22, 2020
in ಅಭಿಮತ
0
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕೆ ಸರಿಯೋ? ತಪ್ಪೋ?
Share on WhatsAppShare on FacebookShare on Telegram

ಭಾರತ ಸಂಕಷ್ಟದಲ್ಲಿ ಸಿಲುಕಿ ನರಳಾಡುತ್ತಿದೆ. ಒಂದು ಕರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಯಾಗುತ್ತ ಸಾಗುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ನಿಯಂತ್ರಣ ಮಾಡುವುದು ದೂರದ ಮಾತು. ಆದರೆ ಸೋಂಕಿತರು ತೀವ್ರ ಗಂಭೀರ ಸ್ಥಿತಿಗೆ ತಲುಪುತ್ತಿದ್ದು. ಚಿಕಿತ್ಸೆ ನೀಡುವುದೇ ದೊಡ್ಡ ಸಮಸ್ಯೆಯಾಗುತ್ತಿದೆ. ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌ನಲ್ಲಿ ಪರಿಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪುತ್ತಿದೆ. ಉತ್ತರ ಪ್ರದೇಶದ ಸೇರಿದಂತೆ ದೇಶದ ನಾನಾ ರಾಜ್ಯಗಳು ರೈಲ್ವೆ ಬೋಗಿಗಳಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಅವಶ್ಯಕತೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿವೆ.

ಈ ನಡುವೆ ಚೀನಾ ದೇಶದ ಕ್ಯಾತೆ ಭಾರತವನ್ನು ಕಂಗಾಲಾಗಿದೆ. ಗಾಲ್ವಾನ್‌ ಗಡಿಯಲ್ಲಿ ಮೋಸದ ಕದನಕ್ಕೆ ಇಳಿದಿರುವ ಚೀನಾ ಸೇನೆ ಭಾರತೀಯ 20 ಸೈನಿಕರನ್ನು ಹತ್ಯೆ ಮಾಡಿದೆ. ಹುತಾತ್ಮರಾದ 20 ಸೈನಿಕರಿಗೆ ಬದಲಾಗಿ ಭಾರತ ಕೂಡ 43 ಚೀನಾ ಸೈನಿಕರನ್ನು ಕೊಂದಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ, ಇಲ್ಲೀವರೆಗೂ ನೀಚ ಚೀನಾ ಒಪ್ಪಿಕೊಂಡಿಲ್ಲ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇನಾ ಘರ್ಷಣೆ ನಡೆದ ದಿನದಿಂದಲೂ ಟೀಕೆ ಮಾಡುತ್ತಲೇ ಇದ್ದಾರೆ. ದಾಳಿ ಆದ ಬಳಿಕ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ, ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಗೆ ಎಷ್ಟು ಧೈರ್ಯ ಎನ್ನುವ ಜೊತೆಗೆ ಜೊತೆಗೆ ನಮ್ಮ ದೇಶದ ಭೂಮಿಯನ್ನು ಆಕ್ರಮಿಸಿಕೊಳ್ಳಲು ಎಷ್ಟು ಧೈರ್ಯ ಎಂದು ಕಿಡಿಕಾರಿದ್ದರು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನಕ್ಕೂ ಕಿಡಿಕಾರಿದ್ದ ರಾಹುಲ್‌, ಏನನ್ನು ಮುಚ್ಚಿಡುತ್ತಿದ್ದೀರಿ..? ಯಾಕೀ ಮೌನ ಎಂದು ಖಾರವಾಗಿ ಪ್ರಶ್ನಿಸಿದ್ದರು. .

ನಿಲ್ಲದ ರಾಹುಲ್‌ ಗಾಂಧಿ ನಿರಂತರ ದಾಳಿ..!

ಭಾರತ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿರುವ ರಾಜನಾಥ್‌ ಸಿಂಗ್‌, ಭಾರತೀಯ ಸೇನೆ ಮೇಲೆ ದಾಳಿ ನಡೆದರೂ ಅದನ್ನು ಖಂಡಿಸಲು ತೆಗೆದುಕೊಂಡ ಸಮಯ ಬರೋಬ್ಬರಿ 2 ದಿನಗಳ ಕಾಲಾವಾಧಿ. ಅಂದರೆ ಜೂನ್‌ 15ರ ರಾತ್ರಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದ ವಿಚಾರ ಭಾರತ ಸರ್ಕಾರಕ್ಕೆ ಗೊತ್ತಾಗಿತ್ತು. ಆ ಬಳಿಕ ರಕ್ಷಣಾ ಮಂತ್ರಿ ಆಗಿರುವ ರಾಜನಾಥ್‌ ಸಿಂಗ್‌ ಎಲ್ಲರಿಗಿಂತಲೂ ಮೊದಲು ಈ ವಿಚಾರವನ್ನು ಖಂಡನೆ ಮಾಡಬೇಕಿತ್ತು. ಆದರೆ ಸೇನೆ ಮೇಲಿನ ದಾಳಿಯನ್ನು ಭಾರತ ಎಂದಿಗೂ ಮರೆಯುವುದಿಲ್ಲ. ಹುತಾತ್ಮರಾಗಿರುವ ಯೋಧರ ಕುಟುಂಬ ಜೊತೆಗೆ ಭಾರವಾದ ಹೃದಯೊದೊಂದಿಗೆ ನಿಲ್ಲುತ್ತೇವೆ ಎಂದು ಟ್ವೀಟ್‌ ಮಾಡಿದ್ದು ಜೂನ್‌ 17ರಂದು. ಜೂನ್‌ 15ರಂದು ರಾಮಜನ್ಮ ಭೂಮಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕ್ರಮದ ಬಗ್ಗೆ ಟ್ವೀಟ್‌ ಮಾಡಿದ್ದ ರಾಜನಾಥ್‌ ಸಿಂಗ್‌ ಜೂನ್‌ 16ರಂದು ದಿನಪೂರ್ತಿ ಮೌನಕ್ಕೆ ಶರಣಾಗಿದ್ದರು. ಒಂದೇ ಒಂದು ಟ್ವೀಟ್‌ ಸಹ ಮಾಡಿರಲಿಲ್ಲ.

The loss of soldiers in Galwan is deeply disturbing and painful. Our soldiers displayed exemplary courage and valour in the line of duty and sacrificed their lives in the highest traditions of the Indian Army.

— Rajnath Singh (@rajnathsingh) June 17, 2020


If it was so painful:

1. Why insult Indian Army by not naming China in your tweet?
2. Why take 2 days to condole?
3. Why address rallies as soldiers were being martyred?
4. Why hide and get the Army blamed by the crony media?
5. Why make paid-media blame Army instead of GOI? https://t.co/mpLpMRxwS7

— Rahul Gandhi (@RahulGandhi) June 17, 2020


ರಾಜನಾಥ್‌ ಸಿಂಗ್‌ ಟ್ವೀಟ್‌ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ಈ ವಿಚಾರ ತುಂಬಾ ನೋವಿನ ವಿಚಾರ. ಚೀನಾ ಬಗ್ಗೆ ನೇರವಾಗಿ ಖಂಡನೆ ವ್ಯಕ್ತಪಡಿಸಿಲ್ಲ. ಟ್ವೀಟ್‌ನಲ್ಲಿ ಒಂದೇ ಒಂದು ಪದ ಚೀನಾ ಎಂದು ಬರೆದಿಲ್ಲ. ಇದು ಭಾರತೀಯ ಸೇನೆಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ. ಅದು ಅಲ್ಲದೆ ಯೋಧರು ಹುತಾತ್ಮರಾದ ಬಗ್ಗೆ ಟ್ವೀಟ್‌ ಮಾಡಲು 2 ದಿನಗಳು ಬೇಕಾಯಿತೇ..? ಯೋಧರು ಹುತಾತ್ಮರಾದ ವೇಳೆಯಲ್ಲೂ ನಿಮಗೆ ನಿಮ್ಮ ಪಕ್ಷದ ಜನ ಸಂವಾದ ರ್ಯಾಲಿಯೇ ಮುಖ್ಯವಾಯಿತೇ..? ನಿಮ್ಮ ಸ್ನೇಹಿತ ಮಾಧ್ಯಮಗಳು ದೇಶದ ಸೇನೆಯನ್ನೇ ದೂರುತ್ತಿರುವುದು ಯಾಕೆ..? ಭಾರತ ಸರ್ಕಾವರನ್ನು ಟೀಕಿಸಿರುವ ಬದಲು ಮಾರಿಕೊಂಡ ಮಾಧ್ಯಮಗಳು ಸೇನೆಯನ್ನು ದೂರುತ್ತಿರುವುದು ಯಾಕೆ ಎಂದು 5 ಪ್ರಶ್ನೆಗಳನ್ನು ಕೇಳಿದ್ದರು.

ಇಂದೂ ಸಹ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಟೀಕೆ ಮಾಡಿದ್ದಾರೆ. ಮೋದಿ ತನಗೆ ತಾನೇ ಶರಣಾಗಿದ್ದಾರೆ ಎಂದು ಕಿಚಾಯಿಸಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಭಾರತದ ಗಡಿ ವಿಚಾರದಲ್ಲಿ ಚೀನಾದ ಆಕ್ರಮಣಶೀಲತೆ ಮುಂದೆ ಶರಣಾಗಿದ್ದಾರೆ. ನಮ್ಮ ಸೈನಿಕರನ್ನು ಚೀನಾ ಹತ್ಯೆ ಮಾಡಿದ್ದು ಎಲ್ಲಿ ಎಂದು ಗುಡುಗಿದ್ದಾರೆ. ಇನ್ನೂ ಒಂದು ಹೆಚ್ಚೆ ಮುಂದಿಟ್ಟಿರುವ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ಒಂದಿಂಚು ಭೂಮಿಯನ್ನು ಯಾರಿಗೂ ಬಿಟ್ಟುಕೊಡಲ್ಲ. ನಮ್ಮ ಗಡಿಯೊಳಕ್ಕೆ ಯಾರೂ ಪ್ರವೇಶಿಸಿಲ್ಲ, ಯಾರೂ ಆಕ್ರಮಿಸಿಕೊಂಡಿಲ್ಲ ಎಂದು ಹೇಳಿದ್ದರು. ಆದರೆ ಪಾಂಗೋಂಗ್‌ ಸರೋವರದ ಬಳಿ ಚೀನಾ ಭಾರತದ ಭೂಮಿಯನ್ನು ವಶಕ್ಕೆ ಪಡೆದಿರುವ ಉಪಗ್ರಹ ಆಧಾರಿತ ಚಿತ್ರಗಳಿಂದ ಸಾಬೀತಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದರ ಸುದ್ದಿಯನ್ನು ಸೇರಿಸಿ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಟೀಕೆಯನ್ನು ಕೇಂದ್ರ ಸರ್ಕಾರದ ಮಂತ್ರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಹುಲ್‌ ಗಾಂಧಿ ಪ್ರಶ್ನೆ ಮಾಡುತ್ತಿರುವುದರಲ್ಲಿ ಒಂದಕ್ಷರವೂ ತಪ್ಪಿಲ್ಲ. ರಾಹುಲ್‌ ಗಾಂಧಿ ಇಲ್ಲೀವರೆಗೂ ಚೀನಾ ಬೆಂಬಲಿಸಿ ಒಂದಕ್ಷರವನ್ನೂ ಟ್ವೀಟ್‌ ಮಾಡಿಲ್ಲ, ಹಾಗೆ ನೋಡಿದರೆ ಕೇಂದ್ರ ರಕ್ಷಣಾ ಸಚಿವರು ಕೇವಲ ಹುತಾತ್ಮ ಯೋಧರಿಗೆ 2 ದಿನಗಳ ಬಳಿಕ ಸಾಂತ್ವನದ ಮಾತುಗಳನ್ನು ಹಾಕಿದ್ದಾರೆಯೇ ಹೊರತು, ಚೀನಾ ವಿರುದ್ಧ ಹಾಗೂ ಅದು ನಡೆದುಕೊಂಡ ರೀತಿಯನ್ನು ಖಂಡಿಸುವ ಗೋಜಿಗೆ ಹೋಗಿಲ್ಲ.

ಇನ್ನೊಂದು ಸಂಕಟದ ವಿಚಾರ ಎಂದರೆ ಎಲ್ಲದಕ್ಕೂ ಟ್ವಿಟರ್‌ ಖಾತೆ ಮೂಲಕವೇ ಮಾಹಿತಿ ನೀಡುವ ಪ್ರಧಾನಿ ನರೇಂದ್ರ ಮೋದಿ ಸಹ 17ರ ಜೂನ್‌ ರಾತ್ರಿ 10:15ಕ್ಕೆ ಹುತಾತ್ಮರಾದ ನಮ್ಮ ವೀರ ಸೈನಿಕರಿಗೆ ಗೌರವ ಪೂರ್ಕವಾಗಿ ಬರೆದಿದ್ದಾರೆ. ಅಲ್ಲೀತನಕ ಪ್ರಧಾನಿ ನರೇಂದ್ರ ಮೋದಿ ಕೂಡ ಮೌನಕ್ಕೆ ಶರಣಾಗಿದ್ದರು ಎನ್ನುವುದು ಸತ್ಯ. ಸಣ್ಣ ಸಣ್ಣ ಭಾಷಣ ಮಾಡುವಾಗಲು ಟ್ವೀಟ್‌ ಮೂಲಕ ಮಾಹಿತಿ ಕೊಡುವ ನರೇಂದ್ರ ಮೋದಿ ನಮ್ಮ ಸೈನಿಕರು ಹುತಾತ್ಮರಾದಾಗ ಒಂದೇ ಒಂದು ಪದ ಬರೆದಿದ್ದರೂ ಒಪ್ಪಬಹುದಿತ್ತು. ಆದರೆ 2 ದಿನಗಳ ಕಾಲ ಮೌನ ಉತ್ತರವಾಗಿತ್ತು.

ಚೀನಾದ ಮೇಲೆ ಯುದ್ಧ ಸಾರುವುದು, ನಾವು ಎಲ್ಲದಕ್ಕೂ ಸಿದ್ಧ ಎಂದು ಘರ್ಜಿಸುವುದು ಬೇಕಿಲ್ಲ, ಹೃದಯ ತುಂಬಾ ನೊಂದಿದೆ ಎಂದು ಟ್ವೀಟ್‌ ಮಾಡಿದ್ರೂ ಜನರಿಗೆ ಅರ್ಥವಾಗುತ್ತಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ತನ್ನ ಭಾಷಣಗಳನ್ನು ಮಾತ್ರ ಪ್ರಚಾರ ಮಾಡುವ ಮೋದಿಗೆ ಅಷ್ಟದಾರೂ ಗೊತ್ತಿರಬೇಕಿತ್ತು ಅಲ್ಲವೇ..? ಈ ವಿಚಾರದಲ್ಲಿ ಇಡೀ ದೇಶದ ರಾಜಕೀಯ ಪಕ್ಷಗಳು ಮೌನಕ್ಕೆ ಶರಣಾದರೂ ರಾಹುಲ್‌ ಮಾತನಾಡುತ್ತಿರುವುದನ್ನು ದೇಶದ ಜನರು ಸ್ವಾಗತ ಮಾಡಲೇಬೇಕು. ಒಂದು ವಿರೋಧ ಪಕ್ಷ ಇಲ್ಲದಿದ್ದರೆ ಆಡಳಿತ ಪಕ್ಷ ಏಕಚಕ್ರಾಧಿಪತಿಯಂತೆ ವರ್ತಿಸುವ ಸಾಹಸ ಮಾಡುತ್ತದೆ. ಭಾರತದಲ್ಲಿ ಈಗಾಗಲೇ ವಿರೋಧ ಪಕ್ಷಗಳು ಸೋತು ಸುಣ್ಣವಾಗಿರುವ ಈ ಸಮಯದಲ್ಲಿ ಟೀಕೆ ಸರಿಯಾದ ಕ್ರಮವೇ ಸರಿ.

Tributes to the martyrs who lost their lives protecting our nation in Eastern Ladakh. Their supreme sacrifice will never be forgotten.

India is proud of the valour of our armed forces. They have always shown remarkable courage and steadfastly protected India’s sovereignty. pic.twitter.com/43dqBCaX1Z

— Narendra Modi (@narendramodi) June 17, 2020


ADVERTISEMENT
Tags: PM ModiRahul Gandhiಪ್ರಧಾನಿ ಮೋದಿರಾಹುಲ್ ಗಾಂಧಿ
Previous Post

ಸರ್ವಾಧಿಕಾರಿ ಚೀನಾದಿಂದ ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ!

Next Post

2021 ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ಪಾಲಿಗೆ ಸೆಮಿಫೈನಲ್?

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post
2021 ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ಪಾಲಿಗೆ ಸೆಮಿಫೈನಲ್?

2021 ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿ ಪಾಲಿಗೆ ಸೆಮಿಫೈನಲ್?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada