ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ರೈತರ ಕಷ್ಟಗಳಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಧಾವಿಸಿದೆ. ದೆಹಲಿ ಮತ್ತು ಹರ್ಯಾಣವನ್ನು ಬೇರ್ಪಡಿಸುವ ಸಿಂಘು ಗಡಿಯ ಸಮೀಪ ಬೀಡು ಬಿಟ್ಟಿರುವ ಕಾರ್ಮಿಕರಿಗಾಗಿ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿ ಜಮಾಯಿಸಿರುವ ರೈತರ ಮೇಲೆ ಹರ್ಯಾಣ ಪೊಲೀಸ್ ಕಳೆದ ಎರಡು ದಿನಗಳನಲ್ಲಿ ಸಾಕಷ್ಟು ದೌರ್ಜನ್ಯ ನಡೆಸಿತ್ತು. ಲಾಠಿ ಪ್ರಹಾರ, ಜಲ ಫಿರಂಗಿ ಪ್ರಯೋಗ, ಅಶ್ರುವಾಯು ಪ್ರಯೋಗ ನಡೆಸಿತ್ತು. ಇದರಿಂದಾಗಿ ಗಾಯಗೊಂಡಿರುವ ರೈತರ ಚಿಕಿತ್ಸೆಗಾಗಿ ಈ ವೈದ್ಯಕೀಯ ಕೇಂದ್ರಗಳನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಅವರ ನೇತೃತ್ವದಲ್ಲಿ ತೆರೆಯಲಾಗಿದೆ.






