ಫೆಬ್ರವರಿ 14, 2019, ಸಿಆರ್ಪಿಎಫ್ ಯೋಧರ ಮೇಲೆ ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹತ್ಯಾ ಬಾಂಬರ್ ನಡೆಸಿದ ದಾಳಿ ನಿಜಕ್ಕೂ ಇಡೀ ದೇಶವನ್ನೇ ಭೀತಿಗೊಳಿಸಿತ್ತು. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಷ್ ಎ ಮೊಹಮದ್ಗೆ ಸೇರಿದ ಆದಿಲ್ ಅಹ್ಮದ್ ದಾರ್ ಎಂಬಾತ, ಸ್ಫೋಟಕ ತುಂಬಿದ ವಾಹನವನ್ನು ಸಿಆರ್ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿ, ಸ್ಫೋಟ ಮಾಡಲಾಗಿತ್ತು. 40 ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದರು. ಕಳೆದ ಒಂದು ವರ್ಷದಿಂದಲೂ ರಾಷ್ಟ್ರೀಯ ತನಿಖಾ ದಳ ಪುಲ್ವಾಮಾ ಬಾಂಬ್ ದಾಳಿ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ. ಆದರೆ ಇಲ್ಲೀವರೆಗೂ ಯಾವುದೇ ಪ್ರಗತಿ ಕಾಣಿಸಿಲ್ಲ. ಕನಿಷ್ಟ ಪಕ್ಷ ಉಗ್ರ ಆದಿಲ್ ಆಹ್ಮದ್ ದಾರ್, ಕಾರ್ನಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ತುಂಬಿಕೊಂಡು ಬರಲು ಸಾಧ್ಯವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ.
ಪುಲ್ವಾಮಾ ಉಗ್ರ ದಾಳಿಗೆ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದ ಬಳಿಕ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಆದರೆ ಮೋಸದ ದಾಳಿಗೆ ಬಲಿಯಾದ ಯೋಧರ ವಿಚಾರದಲ್ಲಿ ಯಾವುದೇ ಪ್ರಗತಿ ಕಾಣದಿರುವುದು ನೊಂದ ಕುಟುಂಬಗಳ ದುಃಖ ಇಮ್ಮಡಿಸುವಂತೆ ಮಾಡಿದೆ. ಪುಲ್ವಾಮಾ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾದ ಶಂಕಿತ ಉಗ್ರರು ಯಾರೂ ಬದುಕಿಲ್ಲದ ಕಾರಣಕ್ಕೆ ಯಾರ ಮೇಲೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗ್ತಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕವನ್ನು ಅಂಗಡಿಯಿಂದ ಖರೀದಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಹಿರಿಯ ಸೇನಾ ಅಧಿಕಾರಿ. ಜೊತೆಗೆ ಯುದ್ಧದಲ್ಲಿ ಬಳಕೆಯಾಗಿರುವ ಅಮ್ಯುನೇಷನ್ ಅನ್ನು ಮಿಲಿಟರಿ ಸ್ಟೋರ್ಗಳಲ್ಲಿ ಶೇಖರಣೆ ಮಾಡಲಾಗಿತ್ತದೆ. ಫಾರೆನ್ಸಿಕ್ ರಿಪೋರ್ಟ್ ಹೊರಬಿದ್ದಿದ್ದು, 25 ಕೆಜಿ ಪ್ಲಾಸ್ಟಿಕ್ ಸ್ಫೋಟಕ ತುಂಬಿದ್ದರು ಎನ್ನುವುದು ಪತ್ತೆಯಾಗಿದೆ.
ಪುಲ್ವಾಮಾ ದಾಳಿಗೂ ಮೊದಲ 10 ದಿನಗಳ ಮುಂಚೆ ಈ ಕಾರ್ ಖರೀದಿ ಮಾಡಿದ್ದರು ಎನ್ನುವು ಅಂಶ ಬಯಲಾಗಿದೆ. ಆದರೆ ಸರ್ಕಾರ, ತನಿಖಾ ಸಂಸ್ಥೆ ನಿಖರ ಸಾಕ್ಷಿ, ಉದ್ದೆಶ ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ. ಆದರೆ 40 ಸೈನಿಕರು ಹುತಾತ್ಮರಾದ ನೆನಪಿಗಾಗಿ ಇಂದು ಸ್ಮಾರಕ ಉದ್ಘಾಟನೆ ಮಾಡಲಾಗುತ್ತಿದೆ. ಲೆತ್ಪೋರಾ ಕ್ಯಾಂಪ್ನಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಈ ಮೂಲಕ ನಾವು ಕಳೆದುಕೊಂಡ ಯೋಧರನ್ನು ಸ್ಮರಿಸಲಾಗುತ್ತಿದೆ ಎಂದು ಸಿಆರ್ಪಿಎಫ್ ಅಡಿಷನಲ್ ಡೈರೆಕ್ಟರ್ ಜನರಲ್ ಜುಲ್ಫಿಕರ್ ಹಸನ್ ತಿಳಿಸಿದ್ದಾರೆ. ಈ ಸ್ಮಾರಕದಲ್ಲಿ 40 ಮಂದಿ ಹುತಾತ್ಮರಾದ ಯೋಧರ ಹೆಸರಿನ ಜೊತೆ ಅವರ ಫೋಟೋ ಕೂಡ ಹಾಕಲಾಗಿದೆ. ಹುತಾತ್ಮ ಸ್ಮಾರಕಕ್ಕೆ ಸೆವಾ ಮತ್ತು ನಿಶ್ಟಾ ಎಂದು ನಾಮಕರಣ ಮಾಡಲಾಗಿದೆ. ಈ ಸ್ಥಳ ಘಟನೆ ನಡೆದ ಸ್ಥಳದಿಂದ ಕೇವಲ 2 ಕಿಲೋ ಮೀಟರ್ ದೂರವಿದ್ದು, 185 ಬೆಟಾಲಿಯನ್ ಯೋಧರಿಂದ ಗೌರ ಸಲ್ಲಿಸಲಾಗುತ್ತದೆ.
ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಬಾಲಾಕೋಟ್ ಮೇಲೆ ನಡೆಸಿದ ವಾಯುದಾಳಿ ಪಾಕಿಸ್ತಾನದಲ್ಲಿ ಅದೆಷ್ಟು ಜನರನ್ನು ಬಲಿ ಪಡೆಯಿತು ಎನ್ನುವ ಮಾಹಿತಿ ಕೂಡ ಬರಲಿಲ್ಲ. ಆದರೆ ಅದೇ ಪುಲ್ವಾಮಾ ದಾಳಿ 2019ರ ಲೋಕಸಭಾ ಚುನಾವಣೆಯಲ್ಲಿ ಹಾಟ್ ಕೇಕ್ ರೀತಿ ಸೇಲಾಯ್ತು. ಪುಲ್ವಾಮಾ ದಾಳಿ ಬಳಿಕ ಬಾಲಕೋಟ್ ಏರ್ಸ್ಟ್ರೈಕ್ ಜನರನ್ನು ಬಿಜೆಪಿಯತ್ತ ವಾಲುವಂತೆ ಮಾಡಿತ್ತು. ಅದೇ ಬಿಸಿಯಲ್ಲಿ ದೇಶಪ್ರೇಮದ ರಾಜಕಾರಣ ಮಾಡಿದ್ದ ಬಿಜೆಪಿ ನಾಯಕರು ಪುಲ್ವಾಮಾ ದಾಳಿಯ ಲಾಭ ಪಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಇನ್ನು ಮುಂದಾದರೂ ನಾವು ಕಳೆದುಕೊಂಡ ಯೋಧರ ಆತ್ಮಕ್ಕೆ ಶಾಂತಿ ಸಿಗುವಂತಾಗಬೇಕಿದೆ. ಕೇವಲ ರಾಜಕೀಯ ಪಡೆದುಕೊಂಡು ಸುಮ್ಮನಾದರೆ ದೇವರು ಕೂಡ ಮೆಚ್ಚುವುದಿಲ್ಲ ಎನಿಸುತ್ತದೆ.