• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿರುವುದು ಆಘಾತ ತಂದಿದೆ- ಅಝೀಂ ಪ್ರೇಮ್‌ಜಿ

by
May 17, 2020
in ದೇಶ
0
ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿರುವುದು ಆಘಾತ ತಂದಿದೆ- ಅಝೀಂ ಪ್ರೇಮ್‌ಜಿ
Share on WhatsAppShare on FacebookShare on Telegram

ದುರ್ಬಲ ಕಾರ್ಮಿಕ ಕಾನೂನುಗಳನ್ನು ಹೇರಲು ಹಲವಾರು ರಾಜ್ಯ ಸರ್ಕಾರಗಳು ತೆಗೆದುಕೊಂಡ ನಿರ್ಧಾರವು ನನ್ನನ್ನು ಆಘಾತಕ್ಕೊಳಗಾಗಿಸಿತು. ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚುವುದಿಲ್ಲ ಎಂದು ಭಾರತದ ಬಿಲಿಯೇನರ್‌ ಅಝೀಂ ಪ್ರೇಮ್ ಜಿ ಎಕಾನಾಮಿಕ್‌ ಟೈಮ್ಸ್‌ ಗೆ ಬರೆದ ಲೇಖನದಲ್ಲಿ ಹೇಳಿದ್ದಾರೆ.

ADVERTISEMENT

ಔರಂಗಾಬಾದ್‌ ಅಪಘಾತ ಉಲ್ಲೇಖಿಸಿ ಈ ದುರಂತವು ನಮ್ಮ ಸಹ ನಾಗರೀಕರು ಅನುಭವಿಸುತ್ತಿರುವ ನೋವಿನ, ಬಡತನದ ಭೀಕರ ಗುರುತು ಎಂದು ಪ್ರೇಮ್‌ ಜಿ ಅಭಿಪ್ರಾಯ ಪಟ್ಟಿದ್ದಾರೆ.

ಇದು ನಮ್ಮ ಬದುಕಿನ ಸುತ್ತಲೂ ನಡೆಯುವ ವಾಸ್ತವ. ಹಾಗೂ ಅನೇಕ ರಾಜ್ಯಗಳು ಕೈಗಾರಿಕಾ ವಿವಾದ, ಔದ್ಯೋಗಿಕ ಭದ್ರತೆ, ಕಾರ್ಮಿಕರ ಕೆಲಸದ ಪರಿಸ್ಥಿತಿ, ಕನಿಷ್ಟ ವೇತನ ಗುತ್ತಿಗೆ ಹಾಗೂ ವಲಸೆ ಕಾರ್ಮಿಕರ ಪರವಾಗಿರುವ ಹಲವಾರು ಕಾನೂನುಗಳನ್ನು ರದ್ದುಪಡಿಸುತ್ತವೆ (ಈಗಾಗಲೇ ಕೆಲವು ರದ್ದು ಪಡಿಸಿವೆ) ಎಂದು ಕೇಳುವಾಗ ಆಘಾತವಾಗುತ್ತದೆ.

ಕಳೆದ ಎರಡು ವಾರಗಳಲ್ಲಿ ಬಿಜೆಪಿ ನೇತೃತ್ವವಿರುವ ಗುಜರಾತ್‌, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಸರ್ಕಾರಗಳು ನಾಟಕೀಯ ಬೆಳವಣಿಗೆಯಲ್ಲಿ ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ರದ್ದುಗೊಳಿಸಿತ್ತು.

ಭಾರತದಲ್ಲಿ ಸಾಮಾಜಿಕ ಭದ್ರತೆ ಹಾಗೂ ಕಾರ್ಮಿಕರಿಗೆ ಕನಿಷ್ಟ ಭದ್ರತೆಯೂ ಇಲ್ಲದಿರುವುದರಿಂದ ಔರಾಂಗಾಬಾದ್‌ನಲ್ಲಿ ಹದಿನಾರು ಕಾರ್ಮಿಕರು ಮರಣಹೊಂದಿದ್ದಾರೆ ಎಂದು ಪ್ರೇಮ್‌ಜಿ ಹೇಳಿದ್ದಾರೆ.

ಕಳೆದ ಐವತ್ತು ವರ್ಷಗಳಿಂದ ಕಾರ್ಮಿಕ ಸಂಘ ಹಾಗೂ ಕಾರ್ಮಿಕ ಕಾನೂನುಗಳೊಂದಿಗೆ ವ್ಯವಹರಿಸುತ್ತಿದ್ದೇನೆ. ಕಳೆದ ಹಲವು ದಶಕಗಳಲ್ಲಿ ಹಲವಾರು ಕಾರ್ಮಿಕ ಕಾನೂನುಗಳು ಬದಲಾಗಿವೆ. ಆದರೆ ಇದು ಹೆಚ್ಚಿನ ಸಾಮಾಜಿಕ ಭದ್ರತೆಯನ್ನು ನೀಡಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಗಳು ಈಗ ಇರುವ ಸಡಿಲ ಕಾನೂನುಗಳನ್ನು ಇನ್ನಷ್ಟು ದುರ್ಬಲಗೊಳಿಸುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚುವುದಿಲ್ಲ. ಬದಲಾಗಿ ಕಡಿಮೆ ವೇತನ ಪಡೆಯುವ ಕಾರ್ಮಿಕರನ್ನು ಹಾಗೂ ಬಡತನವನ್ನು ಹೆಚ್ಚಿಸುತ್ತದೆ.

ಇಂತಹ ನಡೆ ಕಾರ್ಮಿಕರು ಹಾಗೂ ಉದ್ಯಮಗಳನ್ನು ಪರಸ್ಪರ ವಿರುಧ್ಧ ದಿಕ್ಕಿನಲ್ಲಿ ಎಳೆಯುತ್ತದೆ. ಇದು ತಪ್ಪಾದ ಆಯ್ಕೆ. ಕಳೆದ ಕೆಲವು ವಾರಗಳ ಅನುಭವಗಳನ್ನೇ ನಾವು ಗಮನಿಸಿದರೆ, ವಲಸೆ ಕಾರ್ಮಿಕರೊಂದಿಗೆ ತೋರಿದ ವರ್ತನೆಗಳು ಕಾರ್ಮಿಕ ಹಾಗು ಉದ್ಯಮಗಳಿಗಿರುವ ಸಾಮಾಜಿಕ ಅಂತರವನ್ನು ಒಪ್ಪಿಕೊಂಡಿತು. ಅಲ್ಲದೆ ಕಾರ್ಮಿಕರಿಗೆ ಹಿಮ್ಮುಖ ವಲಸೆ ಮಾಡುವಂತೆ ಪ್ರಚೋದಿಸಿತು, ಇದು ಉದ್ಯಮಗಳ ನ್ನು ದುರ್ಬಲಗೊಳಿಸಿತು. ಆದ್ದರಿಂದ ಇಂತಹ ನಡೆಯು(ಕಾನೂನುಗಳ ರದ್ದು ಪಡಿಸುವಿಕೆ) ಅನ್ಯಾಯುತವಾದದ್ದು ಹಾಗೂ ನಿಷ್ಕ್ರಿಯವಾದದ್ದು. ಕಾರ್ಮಿಕರ ಹಿತಾಸಕ್ತಿ ಹಾಗೂ ವ್ಯವಹಾರಗಳು ಆಳವಾಗಿ ಒಂದಕ್ಕೊಂದು ಬೆಸೆದುಕೊಂಡಿದೆ.

Also Read: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾರ್ಮಿಕ ಹಿತರಕ್ಷಣಾ ಕಾಯ್ದೆಗಳಿಗೆ ಕತ್ತರಿ: ಸುಪ್ರೀಂ ಕೋರ್ಟ್‌ಗೆ PIL

ಪ್ರತಿ ಬಡ ವಲಸೆ ಕಾರ್ಮಿಕರಿಗೆ ಮೂರು ತಿಂಗಳ ಕಾಲ 7 ಸಾವಿರ ನಗದನ್ನು ತುರ್ತು ಪರಿಹಾರವಾಗಿ ನೀಡಬೇಕು ಎಂದು ಅಝೀಂ ಪ್ರೇಮ್‌ ಜಿ ಬರೆದಿದ್ದಾರೆ.

“ಲಾಕ್‌ಡೌನ್ ಅವಧಿಗೆ ಎಲ್ಲಾ ಬಡ ನಗರವಾಸಿಗಳಿಗೆ ತಿಂಗಳಿಗೆ 25 ದಿನಗಳ ಕನಿಷ್ಠ ವೇತನವನ್ನು ಬಿಡುಗಡೆ ಮಾಡಬೇಕು ಮತ್ತು ಲಾಕ್‌ಡೌನ್ ಮುಗಿದ ನಂತರ ಕನಿಷ್ಠ ಎರಡು ತಿಂಗಳವರೆಗೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳುವಾಗ, ತಮ್ಮ ಪ್ರಯಾಣದ ಯೋಜನೆಗಳನ್ನು ನಿರ್ಧರಿಸುವಲ್ಲಿ ಬಾಕಿಯಾದ ವಲಸೆ ಕಾರ್ಮಿಕರಿಗೆ ಪೂರ್ಣ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಒದಗಿಸಬೇಕು. ಉಳಿಯಲು ಅಥವಾ ತಮ್ಮ ರಾಜ್ಯಗಳಿಗೆ ಮರಳಲು ಯಾರನ್ನೂ ಒತ್ತಾಯಿಸಬಾರದು. ಸಿಕ್ಕಿಬಿದ್ದ ವಲಸೆ ಕಾರ್ಮಿಕರಿಗೆ ಬಸ್ಸುಗಳು ಮತ್ತು ರೈಲುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕು ”ಎಂದು ಅವರು ಲೇಖನದಲ್ಲಿ ಹೇಳಿದ್ದಾರೆ.

Tags: azim prem jiMigrant Workersಕಾರ್ಮಿಕ ಕಾನೂನುಗಳು
Previous Post

ಜನರನ್ನು ನಯವಾಗಿ ವಂಚಿಸುತ್ತಿರುವ ಪ್ರಧಾನಿ ಮೋದಿಗೆ ಅಧಿಕಾರದಲ್ಲಿರಲು ನೈತಿಕತೆ ಇದೆಯೇ?

Next Post

ಕರ್ನಾಟಕದಲ್ಲಿ ಕ್ವಾರಂಟೈನ್ ಕೇಂದ್ರಗಳಿಂದಲೇ ಹರಡುತ್ತಿದೆಯೇ ಸೋಂಕು?

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಕರ್ನಾಟಕದಲ್ಲಿ ಕ್ವಾರಂಟೈನ್ ಕೇಂದ್ರಗಳಿಂದಲೇ ಹರಡುತ್ತಿದೆಯೇ ಸೋಂಕು?

ಕರ್ನಾಟಕದಲ್ಲಿ ಕ್ವಾರಂಟೈನ್ ಕೇಂದ್ರಗಳಿಂದಲೇ ಹರಡುತ್ತಿದೆಯೇ ಸೋಂಕು?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada