• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕರೋನಾ ಕಷ್ಟದ ಪರಿಸ್ಥಿತಿಯಲ್ಲಿ ಅನಾವರಣಗೊಂಡ ಅರವಿಂದ ಕೇಜ್ರಿವಾಲರ ಇನ್ನೊಂದು ಮುಖ!

by
June 25, 2020
in ದೇಶ
0
ಕರೋನಾ ಕಷ್ಟದ ಪರಿಸ್ಥಿತಿಯಲ್ಲಿ ಅನಾವರಣಗೊಂಡ ಅರವಿಂದ ಕೇಜ್ರಿವಾಲರ ಇನ್ನೊಂದು ಮುಖ!
Share on WhatsAppShare on FacebookShare on Telegram

ಇತ್ತೀಚಿಗೆ ದೇಶದಲ್ಲಿ ಭರವಸೆ ಮೂಡಿಸಿದ್ದ ರಾಜಕಾರಣಿ ಅರವಿಂದ ಕೇಜ್ರಿವಾಲ್. ಹೋರಾಟದ ಮೂಲಕ ರಾಜಕೀಯಕ್ಕೆ ಬಂದು, ಅಧಿಕಾರ ಪಡೆದು ಉತ್ತಮ ಆಡಳಿತಗಾರ ಮತ್ತು ಹೊಸಬಗೆಯ ರಾಜಕಾರಣಿ ಎಂದು ವಿಶ್ವಾಸ ಮೂಡಿಸಿದ್ದರು.‌ ಕರೋನಾ ಬಂದು ಅರವಿಂದ ಕೇಜ್ರಿವಾಲ್ ಅವರಲ್ಲಿ ಅಡಗಿಕುಳಿತಿದ್ದ ಅನಾನುಭವಿಯನ್ನು, ಅಸಮರ್ಥ ಆಡಳಿತಗಾರನನ್ನು, ಅಸೂಕ್ಷ್ಮಮತಿಯನ್ನು ಅನಾವರಣಗೊಳಿಸಿದೆ.

ADVERTISEMENT

ಆರಂಭದಲ್ಲಿ ಕರೋನಾ ನಿಯಂತ್ರಿಸುವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಹೋಲಿಸಲಾಗುತ್ತಿತ್ತು. ಕ್ರಮೇಣ ಬದಲಾಗಿದೆ‌. ಈಗ ಮಹಾರಾಷ್ಟ್ರದ ಮುಖ್ಯಮಂತ್ರಿ, ಅನಾನುಭವಿ, ಕೇಜ್ರೀವಾಲ್ ರಂತೆಯೇ ಹೋರಾಟದ ಮೂಲಕ‌ ರಾಜಕಾರಣಕ್ಕೆ ಬಂದ ಉದ್ಧವ್ ಠಾಕ್ರೆ ಜೊತೆ ನಿಲ್ಲಿಸಲಾಗುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕರೋನಾ ಪರಿಸ್ಥಿತಿ ಹೇಗಿದೆ ಎಂದು ಬಿಡಿಸಿ‌ ಹೇಳಬೇಕಾಗಿಲ್ಲ.

ಗಂಭೀರವಾದ ಇನ್ನೊಂದು ವಿಷಯವೆಂದರೆ ಮಾಮೂಲಿ ರಾಜಕಾರಣಿಗಳ ಮೇಲೆಯೂ ಬಾರದಿರುವಂತಹ‌ ಗುರುತರ ಆರೋಪ ವಿಭಿನ್ನ ಎಂದು ವ್ಯಾಖ್ಯಾನಿಸಲ್ಪಡುವ ಅರವಿಂದ ಕೇಜ್ರೀವಾಲ್ ಮೇಲೆ ಬಂದಿದೆ. ನಮ್ಮ ಟಿಪಿಕಲ್ ರಾಜಕಾರಣಿಗಳು ಎಂಥದೇ ವಿಷಯದಲ್ಲೂ ರಾಜಕಾರಣ ಮಾಡುತ್ತಾರೆ, ಸುಳ್ಳು ಹೇಳುತ್ತಾರೆ ಎಂಬುದು ಗೊತ್ತಿರುವ ಸತ್ಯವೇ ಆಗಿದೆ. ಆದರೂ ಕರೋನಾ ಸಂದರ್ಭದಲ್ಲಿ ಯಾವ ಮುಖ್ಯಮಂತ್ರಿಯ ಮೇಲೂ ಅವರ ರಾಜ್ಯಗಳಲ್ಲಿ ಸೋಂಕು ಪೀಡಿತರ ಸಂಖ್ಯೆಯಲ್ಲಿ, ಕರೋನಾದಿಂದ ಸತ್ತವರ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿಬರಲಿಲ್ಲ. ತಮಿಳುನಾಡಿನಲ್ಲಿ ಕೇಳಿಬಂದಿತ್ತಾದರೂ ತಕ್ಷಣವೇ ಅಲ್ಲಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸ್ಪಷ್ಟೀಕರಣ ನೀಡಿದರು. ‌ಮತ್ತು ಆ ಆರೋಪದಲ್ಲಿ ಹುರುಳಿಲ್ಲದ ಕಾರಣಕ್ಕೆ ಹಾಗೇ ಮರೆಯಾಯಿತು.‌

ಆದರೆ ದೆಹಲಿ ಸರ್ಕಾರದ ವಿಚಾರದಲ್ಲಿ ಇಂಥ ಸ್ಪಷ್ಟತೆ, ಪಾರದರ್ಶಕತೆಗಳು ಗೋಚರಿಸುತ್ತಿಲ್ಲ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಮಾರ್ಚ್ 1ರಿಂದ ಮತ್ತು ಜೂನ್ 10ರ ನಡುವೆ ದೆಹಲಿಯಲ್ಲಿ 2,098 ಜನ ಕರೋನಾಗೆ ಬಲಿಯಾಗಿದ್ದಾರೆ ಎಂದು ಹೇಳಿದರೆ, ಅರವಿಂದ ಕೇಜ್ರಿವಾಲ್ ಅವರ ದೆಹಲಿ ಸರ್ಕಾರದ ಆರೋಗ್ಯ ಬುಲೆಟಿನ್ ಇದೇ ಅವಧಿಯಲ್ಲಿ 984 ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳುತ್ತದೆ. ಇದೇ ರೀತಿ ಕರೋನಾ ಸೋಂಕು ಪೀಡಿತರ ಸಂಖ್ಯೆ ವಿಷಯದಲ್ಲೂ ಒಂದೆರಡು ಬಾರಿ ಗೊಂದಲ‌ ಉಂಟಾಗಿತ್ತು. ಎಲ್ಲವನ್ನೂ ‌ಪ್ರಶ್ನೆ ಮಾಡುತ್ತಿದ್ದ ಕೇಜ್ರೀವಾಲ್ ತಮ್ಮ ಬಗ್ಗೆ‌ ಎದ್ದ ಪ್ರಶ್ನೆಗಳಿಗೂ ಉತ್ತರಿಸಬೇಕಿತ್ತು.

ಅರವಿಂದ ಕೇಜ್ರೀವಾಲ್ ರಾಷ್ಟ್ರ ನಾಯಕನಾಗುವ ಪ್ರಯತ್ನ ಪಟ್ಟು ವಿಫಲರಾದವರು. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಕರೋನಾ ಹಾವಳಿ ಹೆಚ್ಚಾಗುತ್ತಿದ್ದಂತೆ ದೆಹಲಿ ನಿವಾಸಿಗಳಿಗೆ ಮಾತ್ರ ಚಿಕಿತ್ಸೆ, ಉಳಿದವರಿಗಿಲ್ಲ ಎಂದು ಹೇಳಿದರು. ಹಲವು ಕಾರಣಗಳಿಗೆ ದೆಹಲಿಯ ಅಧಿಕೃತ ನಿವಾಸಿಗಳಾಗದ ಹಲವು ಜನರಿದ್ದಾರೆ. ಆ ಪೈಕಿ ಅವರ ಪಕ್ಷದ ಹೆಸರೇ ಹೇಳುವ ರೀತಿಯಲ್ಲಿ ‘ಆಮ್ ಆದ್ಮಿ’ಗಳೇ ಹೆಚ್ಚಾಗಿದ್ದಾರೆ. ಅವರೆಲ್ಲರಿಗೂ ಚಿಕಿತ್ಸೆ ನಿರಾಕರಿಸುವುದು ಬಡವರ ಪರ, ಜನಸಾಮಾನ್ಯರ ಪರ ಯೋಚನೆಯಾಗುತ್ತದೆಯೇ?

ಕೇಜ್ರೀವಾಲ್ ಬಗ್ಗೆ ಭಿನ್ನ ರೀತಿಯ ನಿರೀಕ್ಷೆಗಳಿದ್ದವು. ಅದೇ ಕಾರಣಕ್ಕೆ ದೆಹಲಿಯಲ್ಲಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿಯಂತೂ ಆಮ್ ಆದ್ಮಿ ಪಕ್ಷ ತಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿರುವುದಾಗಿ ಪ್ರಚಾರ ಮಾಡಿ ಅಧಿಕಾರಕ್ಕೆ ಬಂತು. ಆದರೆ ಕರೋನಾ ಸಂದರ್ಭದಲ್ಲಿ ಬರೊಬ್ಬರಿ ಎರಡು ತಿಂಗಳ ಕಾಲ ಲಾಕ್‌ಡೌನ್ ಜಾರಿಯಲ್ಲಿದ್ದರೂ ದೆಹಲಿಯ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸುವ ಕಡೆ ಗಮನ ನೀಡಲಿಲ್ಲ. ವೈದ್ಯರು, ದಾದಿಯರು ಮತ್ತು ಇತರೆ ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಸಂಬಳವನ್ನೇ ಕೊಡದೆ ಸತಾಯಿಸಲಾಯಿತು. ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿತು.‌ ದೆಹಲಿ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಗಳ ನಡುವೆ ಜಟಾಪಟಿ ನಡೆಯಿತು. ಇವರಿಬ್ಬರ ಜಗಳದಲ್ಲಿ ಬಡವಾದದ್ದು ದೆಹಲಿಯ ಆರೋಗ್ಯ ಸೇವಾ ವ್ಯವಸ್ಥೆ. ಬಲಿಯಾಗುತ್ತಿರುವವರು ಆಮ್ ಆದ್ಮಿಗಳು.

ಇತ್ತೀಚೆಗೆ ಕೇಜ್ರೀವಾಲ್ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಇಬ್ಬರೂ ದಿನದಿಂದ ದಿನಕ್ಕೆ ದೆಹಲಿಯಲ್ಲಿ ಕರೋನಾ ಇನ್ನೂ‌ ಹೆಚ್ಚಾಗಲಿದೆ ಎನ್ನುವ ವಿಷಯವನ್ನು ಪುನರುಚ್ಛರಿಸುತ್ತಿದ್ದಾರೆ‌. ಈ ಮೂಲಕ ‘ಕರೋನಾದೊಂದಿಗೆ ಬದುಕುವುದನ್ನು ಕಲಿಯಬೇಕು’ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳುತ್ತಿರುವುದನ್ನೇ ಕೇಜ್ರೀವಾಲ್-ಸಿಸೋಡಿಯಾ ಜೋಡಿ ಪರೋಕ್ಷವಾಗಿ ಹೇಳುತ್ತಿದೆ.

ದೆಹಲಿ ಸರ್ಕಾರವೇ ರಚಿಸಿರುವ ಕರೋನಾ ವೈರಸ್ ರೆಸ್ಪಾನ್ಸ್ ಕಮಿಟಿ ಮುಖ್ಯಸ್ಥ ಡಾ. ಎಸ್.ಕೆ. ಸರೈನ್ ಮೇ 13ರಂದೇ ಪ್ರತಿದಿನ 400 ರಿಂದ 500 ಮಂದಿ ಕರೋನಾ ಪೀಡಿತರಾದರೆ ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿಸುವುದು, ಕ್ವಾರಂಟೈನ್ ಮಾಡುವುದು, ಐಸೋಲೇಷನ್ ಮಾಡುವುದು ದೆಹಲಿ ಸರ್ಕಾರಕ್ಕೆ ದುಸ್ಸರವಾಗಲಿದೆ. ಹಾಲಿ ರೋಗಿಗಳ ಹಾರೈಕೆ ಮಾಡುವಷ್ಟರಲ್ಲಿ‌ ಹೊಸ ರೋಗಿಗಳು ಬಂದು ಇಡೀ‌ ದೆಹಲಿಯ ಆರೋಗ್ಯ ಸೇವಾ ಸಿಬ್ಬಂದಿ ಹೈರಾಣರಾಗುತ್ತಾರೆ. ಪರಿಸ್ಥಿತಿ ಕೈ ಮೀರುವ ಹಂತ ತಲುಪಲಿದೆ ಎಂದು ಎಚ್ಚರಿಸಿದ್ದರು‌. ಜೂನ್ ಮತ್ತು ಜುಲೈ ತಿಂಗಳಲ್ಲಿ ತಾರಕ್ಕೇರಲಿದೆ ಎಂಬ ಭವಿಷ್ಯವನ್ನೂ ನುಡಿದಿದ್ದರು. ಆದರೆ ಎಲ್ಲಾ ಸರ್ಕಾರಗಳು ಮಾಡುವಂತೆ ಕೇಜ್ರೀವಾಲ್ ಸರ್ಕಾರ ಕೂಡ ಡಾ. ಎಸ್.ಕೆ. ಸರೈನ್ ಅವರ ಎಚ್ಚರಿಕೆಯ ಮಾತುಗಳೆಡೆಗೆ ನಿರ್ಲಕ್ಷ್ಯ ತೋರಿತು.

ಈಗ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗತೊಡಗಿವೆ. ಸರ್ಕಾರ ಪರದಾಡುತ್ತಿದೆ. ಈ ನಡುವೆ ಕೇಜ್ರೀವಾಲ್ ದೆಹಲಿಯ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಅವರೊಂದಿಗೆ ಜಟಾಪಟಿಗೆ ಇಳಿದಿದ್ದಾರೆ. ಇನ್ನೊಂದೆಡೆ ಹೆಚ್ಚುತ್ತಿರುವ ಕರೋನಾ ಪರಿಸ್ಥಿತಿ ನಿಭಾಯಿಸಲಾಗದೆ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಭೆ ನಡೆಸಿ ಸೂಚಿಸುವವರೆಗೂ ಪರೀಕ್ಷೆಗಳನ್ನು ಹೆಚ್ಚಿಸುವ ಕೆಲಸಕ್ಕೆ ಕೈಹಾಕಿರಲಿಲ್ಲ.

ಇಂಥ ದೊಡ್ಡ ವೈಫಲ್ಯಕ್ಕೆ ಅರವಿಂದ ಕೇಜ್ರಿವಾಲರ ಅನಾನುಭವ ಮಾತ್ರ ಕಾರಣವಲ್ಲ. ಅವರ ಸರ್ವಾಧಿಕಾರಿ ಧೋರಣೆ ಕೂಡ ಕಾರಣ. ಎಲ್ಲವೂ ತಾವು ಅಂದುಕೊಂಡಂತೆ ಆಗಬೇಕೆಂದು ಈ ಕಡುಕಷ್ಟದ ಸಂದರ್ಭದಲ್ಲೂ ಪಟ್ಟುಹಿಡಿದು ಕೂತಿದ್ದೂ ಕಾರಣ. ದೆಹಲಿಯವರಿಗೆ ಚಿಕಿತ್ಸೆ ಇಲ್ಲ ಎನ್ನುವ ಅಸೂಕ್ಷ್ಮತೆಯೂ ಕಾರಣ. ಹೊರಗಿನವರಿಗೆ ಚಿಕಿತ್ಸೆ ಕೊಡದಿದ್ದರೆ ಅವರಿಂದ ದೆಹಲಿ ವಾಸಿಗಳಿಗೆ ಸೋಂಕು ಹರಡುತ್ತಿರಲಿಲ್ಲವೇ? ಅವರವರ ಊರಿಗೆ ಕಳುಹಿಸಲು ಕೇಜ್ರೀವಾಲ್ ಬಳಿ‌ ಯಾವ ಸಾಧನಗಳಿದ್ದವು? ಒಟ್ಟಿನಲ್ಲಿ ಕರೋನಾ ಕಷ್ಟದ ಸಂದರ್ಭದಲ್ಲಿ ಅರವಿಂದ ಕೇಜ್ರೀವಾಲ್ ನಿಜಮುಖದ ಅನಾವರಣವಾಗಿದೆ.

Tags: ಅರವಿಂದ ಕೇಜ್ರಿವಾಲ್ಆಮ್ ಆದ್ಮಿ ಪಾರ್ಟಿದೆಹಲಿ
Previous Post

ಖಾಸಗಿಯವರಿಗೆ ತಾತ್ಕಾಲಿಕವಾಗಿ ನೀಡಿದ್ದ ಜಮೀನನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ

Next Post

ಪಶ್ಚಿಮ ಬಂಗಾಳ: ಜುಲೈ 31 ರ ವರೆಗೆ ಲಾಕ್‌ಡೌನ್‌ ವಿಸ್ತರಣೆ

Related Posts

ಸೆಪ್ಟೆಂಬರ್ 28 ರಿಂದ ಬ್ಯಾಂಕ್ ಮುಷ್ಕರ : ಗ್ರಾಹಕರಿಗೆ SBI ಮಹತ್ವದ ಸಲಹೆ
Top Story

ಸೆಪ್ಟೆಂಬರ್ 28 ರಿಂದ ಬ್ಯಾಂಕ್ ಮುಷ್ಕರ : ಗ್ರಾಹಕರಿಗೆ SBI ಮಹತ್ವದ ಸಲಹೆ

by ಪ್ರತಿಧ್ವನಿ
September 21, 2026
0

ನವದೆಹಲಿ : ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ...

Read moreDetails
ಸೇತುವೆ ಮೇಲಿಂದ BMW ಕಾರ್ ಕೆಳಗೆ ಬಿದ್ದು ಮೂವರು ವಿದ್ಯಾರ್ಥಿಗಳು ಸಾವು : ಬೆಚ್ಚಿ ಬೀಳಿಸೋ ವಿಡಿಯೋ ವೈರಲ್ | WATCH VIDEO

ಸೇತುವೆ ಮೇಲಿಂದ BMW ಕಾರ್ ಕೆಳಗೆ ಬಿದ್ದು ಮೂವರು ವಿದ್ಯಾರ್ಥಿಗಳು ಸಾವು : ಬೆಚ್ಚಿ ಬೀಳಿಸೋ ವಿಡಿಯೋ ವೈರಲ್ | WATCH VIDEO

September 21, 2026
ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆ! ಇಂದಿನಿಂದಲೇ ಜಾರಿ!

`LPG’ ಗ್ರಾಹಕರ ಗಮನಕ್ಕೆ : ಸಬ್ಸಿಡಿ ಸಿಲಿಂಡರ್ ಪಡೆಯಲು ತಪ್ಪದೇ ಈ ಕೆಲಸ ಮಾಡಿ.!

September 21, 2026
ಭಾರತದಲ್ಲಿ `ಎಲ್-ನಿನೋ’ ಎಫೆಕ್ಟ್ ನಿಂದ ಬಯಲುಸೀಮೆಗೆ ತೀವ್ರ ಬರ : ತಜ್ಞರಿಂದ ಎಚ್ಚರಿಕೆ

ಭಾರತದಲ್ಲಿ `ಎಲ್-ನಿನೋ’ ಎಫೆಕ್ಟ್ ನಿಂದ ಬಯಲುಸೀಮೆಗೆ ತೀವ್ರ ಬರ : ತಜ್ಞರಿಂದ ಎಚ್ಚರಿಕೆ

September 20, 2026
ಮಹಿಳೆಯ ವೇಷ ಧರಿಸಿ `ನೈಟ್ ರೈಡ್’ ಮಾಡಿದ  ಯುವಕನಿಗೆ ಕಾದಿತ್ತು ಶಾಕಿಂಗ್ ಅನುಭವ | WATCH VIDEO

ಮಹಿಳೆಯ ವೇಷ ಧರಿಸಿ `ನೈಟ್ ರೈಡ್’ ಮಾಡಿದ  ಯುವಕನಿಗೆ ಕಾದಿತ್ತು ಶಾಕಿಂಗ್ ಅನುಭವ | WATCH VIDEO

September 20, 2026
Next Post
ಪಶ್ಚಿಮ ಬಂಗಾಳ: ಜುಲೈ 31 ರ ವರೆಗೆ ಲಾಕ್‌ಡೌನ್‌ ವಿಸ್ತರಣೆ

ಪಶ್ಚಿಮ ಬಂಗಾಳ: ಜುಲೈ 31 ರ ವರೆಗೆ ಲಾಕ್‌ಡೌನ್‌ ವಿಸ್ತರಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada