ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಗೆ ಎರಡು ಬಾರಿ ಕೋವಿಡ್ ಪಾಸಿಟಿವ್ ಧೃಡಪಟ್ಟಿರುವುದು ವರದಿಯಾಗಿದೆ. ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯ ವೈದ್ಯರು ರೋಗಿಯನ್ನು ಕರ್ನಾಟಕದ ರಾಜಧಾನಿಯಲ್ಲಿ “ಕೋವಿಡ್ -19 ಎರಡನೇ ಬಾರಿ ಬಂದ ಮೊದಲ ಪ್ರಕರಣ” ಎಂದು ಖಚಿತಪಡಿಸಿದ್ದಾರೆ.
ಈ ಪ್ರಕರಣದಲ್ಲಿ, ಒಂದು ತಿಂಗಳ ಹಿಂದೆ ಸೋಂಕಿನಿಂದ ಚೇತರಿಸಿಕೊಂಡಿದ್ದ 27 ವರ್ಷದ ಮಹಿಳೆ ಮತ್ತೆ ವೈರಸ್ಗೆ ತುತ್ತಾಗಿದ್ದಾರೆ ಫೋರ್ಟಿಸ್ ಆಸ್ಪತ್ರೆ ತಿಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಎರಡನೇ ಬಾರಿ ಕೋವಿಡ್ ಪತ್ತೆಯಾದ ಮಹಿಳೆಗೆ ಕಳೆದ ಜುಲೈನಲ್ಲಿ ಸಣ್ಣ ಜ್ವರ ಹಾಗೂ ಕೆಮ್ಮು ಒಳಗೊಂಡ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ನಗರದ ಆಸ್ಪತ್ರೆಯೊಂದರಲ್ಲಿ ಪರೀಕ್ಷಿಸಿದಾಗ ಮೊದಲ ಬಾರಿಗೆ ಕೋವಿಡ್ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆಗೆ ಸಕರಾತ್ಮಕವಾಗಿ ಸ್ಪಂದಿಸಿದ ಮಹಿಳೆ ರೋಗಲಕ್ಷಣಗಳಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದರು.
ಜುಲೈ 24 ರಂದು ಮಹಿಳಾರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು ಎಂದು ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ಪ್ರತಿಕ್ ಪಾಟೀಲ್ ಹೇಳಿದ್ದಾರೆ. “ಆದಾಗ್ಯೂ, ಸುಮಾರು ಒಂದು ತಿಂಗಳ ನಂತರ, ಆಗಸ್ಟ್ ಕೊನೆಯ ವಾರದಲ್ಲಿ, ಆಕೆಯಲ್ಲಿ ಮತ್ತೆ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಂಡಿದೆ ಮತ್ತು ಎರಡನೇ ಬಾರಿ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಅವರು ಹೇಳಿದ್ದಾರೆ. “ಇದು ಬಹುಶಃ ಬೆಂಗಳೂರಿನಲ್ಲಿ ಕೋವಿಡ್ -19 ಎರಡನೇ ಬಾರಿ ಕಾಣಿಸಿಕೊಂಡ ಮೊದಲ ವರದಿಯಾಗಿದೆ” ಎಂದು ಡಾ ಪಾಟೀಲ್ ಹೇಳಿದ್ದಾರೆ.
“ಸಾಮಾನ್ಯವಾಗಿ, ಸೋಂಕಿನ ಸಂದರ್ಭದಲ್ಲಿ, ಕೋವಿಡ್ ಇಮ್ಯುನೊಗ್ಲಾಬ್ಯುಲಿನ್ ಜಿ(IgG) ಪ್ರತಿಕಾಯವನ್ನು 2-3 ವಾರಗಳ ಸೋಂಕಿನ ನಂತರ ಧನಾತ್ಮಕವಾಗಿ ಪರೀಕ್ಷಿಸಲಾಗುತ್ತದೆ. ಆದರೆ ಈ ರೋಗಿಯಲ್ಲಿ, ರೋಗ ಪ್ರತಿಕಾಯವನ್ನು ನಕಾರಾತ್ಮಕವಾಗಿ ಕಂಡುಬಂದಿದೆದೆ, ಅಂದರೆ ಸೋಂಕಿನ ನಂತರ ಆಕೆ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲಿಲ್ಲ”ಎಂದು ಅವರು ತಿಳಿಸಿದ್ದಾರೆ.
“ಮತ್ತೊಂದು ಸಾಧ್ಯತೆಯೆಂದರೆ, IgG ಪ್ರತಿಕಾಯಗಳು ಸುಮಾರು ಒಂದು ತಿಂಗಳಲ್ಲಿ ಕಣ್ಮರೆಯಾಗಿವೆ. ಅಥವಾ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗದಿರಬಹುದು ಅಥವಾ ಅವು ಅಭಿವೃದ್ಧಿ ಹೊಂದಿದರೆ ಅವು ಹೆಚ್ಚು ಕಾಲ ಉಳಿಯದಿರಬಹುದು, ಇದರಿಂದಾಗಿ ವೈರಸ್ ದೇಹಕ್ಕೆ ಪ್ರವೇಶಿಸಿ ಮತ್ತೆ ರೋಗವನ್ನು ಉಂಟುಮಾಡುತ್ತದೆ ”ಎಂದು ಡಾ ಪಾಟೀಲ್ ಹೇಳಿದ್ದಾರೆ.
ಆದಾಗ್ಯೂ, ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ (ಪಿಎಚ್ಎಫ್ಐ) ಪ್ರಾಧ್ಯಾಪಕ ಮತ್ತು ಲೈಫ್ ಕೋರ್ಸ್ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಗಿರಿಧರ್ ಆರ್ ಬಾಬು, 3.8 ಲಕ್ಷ ದೃಢಪಡಿಸಿದ ಪ್ರಕರಣಗಳು ಕಂಡುಬಂದಾಗಲೇ ಒಂದು ವ್ಯಕ್ತಿಯಲ್ಲಿ ಮರುಸೋಂಕು ಕಂಡುಬಂದಿದೆ. ಎರಡನೇ ಬಾರಿ ಸೋಂಕು ಕಾಣಿಸಿಕೊಳ್ಳುವುದು ಅಪರೂಪ. ಒಳ್ಳೆಯ ಸುದ್ದಿ ಎಂದರೆ ಎರಡನೆಯ ಸೋಂಕು ಮೊದಲಿಗಿಂತ ಕಡಿಮೆ ತೀವ್ರವಾಗಿರುತ್ತದೆ, ”ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ಸದ್ಯ ರಾಜ್ಯದ ಒಟ್ಟು ಪ್ರಕರಣಗಳಲ್ಲಿ 40% ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ದಾಖಲಾಗಿದೆ. ಸೆಪ್ಟಂಬರ್ 6 ರ ವರದಿಯಂತೆ ನಗರದಲ್ಲಿ ಪ್ರಸ್ತುತ 41,479 ಸಕ್ರಿಯ ಪ್ರಕರಣಗಳಿವೆ. ಮಾರ್ಚ್ 8 ರಂದು ಬೆಂಗಳೂರಿನಲ್ಲಿ ಮೊದಲ ಪ್ರಕರಣ ವರದಿಯಾದಾಗಿನಿಂದ ಕರ್ನಾಟಕವು ಒಟ್ಟು 3.89 ಲಕ್ಷ ಕೋವಿಡ್ -19 ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಹೊರಡಿಸಿದ ಅಂಕಿಅಂಶಗಳ ಪ್ರಕಾರ, 6298 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇವುಗಳಲ್ಲಿ 2125 ಮಂದಿ ಬೆಂಗಳೂರಿನಲ್ಲಿ ಮಾತ್ರ ಮೃತಪಟ್ಟಿದ್ದಾರೆ.
ಈ ಹಿಂದೆ, ದೆಹಲಿಯ 50 ವರ್ಷದ ವ್ಯಕ್ತಿಯೊಬ್ಬರಲ್ಲಿ ಎರಡನೇ ಬಾರಿ ಮರುಸೋಂಕು ಕಂಡುಬಂದದ್ದು ವರದಿಯಾಗಿತ್ತು. ಪಶ್ಚಿಮ ಬಂಗಾಳದ ಆರೋಗ್ಯ ಕಾರ್ಯಕರ್ತರೊಬ್ಬರು ಮರು ಸೋಂಕಿಗೆ ತುತ್ತಾದದ್ದು ದಾಖಲೆಯಾಗಿತ್ತು. ಇದಲ್ಲದೆ ಬಂಗಾಳದಲ್ಲಿ ಇಂತಹದ್ದೇ ಇನ್ನೂ ಮೂರು ಪ್ರಕರಣಗಳು ಪತ್ತೆಯಾಗಿವೆ.