• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕನ ವಿರುದ್ಧ ಪೋಕ್ಸೋ: ಕಾನೂನಿನ ದುರ್ಬಳಕೆ ಎಂದ ಆಲ್ಟ್‌ ನೂಸ್‌

by
September 7, 2020
in ದೇಶ
0
ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕನ ವಿರುದ್ಧ ಪೋಕ್ಸೋ: ಕಾನೂನಿನ ದುರ್ಬಳಕೆ ಎಂದ ಆಲ್ಟ್‌ ನೂಸ್‌
Share on WhatsAppShare on FacebookShare on Telegram

ಸಂಸ್ಥೆಯ ಸಹಸಂಸ್ಥಾಪಕ ಮಹಮ್ಮದ್‌ ಝುಬೈರ್‌ ಅವರ ವಿರುದ್ಧ ದಾಖಲಾಗಿರುವ FIR ಕಾನೂನಿನ ದುರ್ಬಳಕೆ ಎಂದು ಆಲ್ಟ್‌ ನ್ಯೂಸ್‌ ತಂಡ ಆರೋಪಿಸಿದೆ. ಝುಬೈರ್‌ ಅವರ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಎಂದೂ ಹೇಳಿದೆ. ಮಹಮ್ಮದ್‌ ಝುಬೈರ್‌ ಅವರ ವಿರುದ್ಧ ಪೋಸ್ಕೊ ಹಾಗೂ ಐಟಿ ಕಾಯ್ದೆಯಡಿಯಲ್ಲಿ ದೆಹಲಿ ಸೈಬರ್‌ ಸೆಲ್‌ ಹಾಗೂ ರಾಯಪುರ ಪೊಲೀಸ್‌ ಸ್ಟೇಷನ್‌ನಲ್ಲಿ ಎರಡು ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನು ವಿರೋಧಿಸಿ ಆಲ್ಟ್‌ ನ್ಯೂಸ್‌ ತಂಡ ತನ್ನ ಸಹಸಂಸ್ಥಾಪಕರ ಪರ ನಿಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗದಿಂದ (National Commission for Protection of Child Rights) ದೂರು ಬಂದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆನ್‌ಲೈನ್‌ನಲ್ಲಿ ಅಪ್ರಾಪ್ತ ಬಾಲಕಿಗೆ ಕಿರುಕುಳ ಹಾಗೂ ಹಿಂಸೆ ನೀಡಿದ ಆರೋಪದ ಮೇಲೆ ಪತ್ರಕರ್ತ ಮೇಲೆ ದೂರು ದಾಖಲಿಸಲಾಗಿದೆ.

ಸ್ವತಃ ಫ್ಯಾಕ್ಟ್‌ ಚೆಕರ್‌ ಹಾಗೂ ಫ್ಯಾಕ್ಟ್‌ ಚೆಕ್‌ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ ನ ಸಹ ಸಂಸ್ಥಾಪಕರಾಗಿರುವ ಮಹಮ್ಮದ್‌ ಝುಬೈರ್‌ ಆಗಸ್ಟ್‌ 6 ರಂದು ಜಗದೀಶ್‌ ಸಿಂಗ್‌(@JSINGH2252) ಎಂಬ ಖಾತೆಯಿಂದ ಬಂದಂತಹ ನಿಂದನೀಯ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರತಿಕ್ರಿಯಿಸುವಾಗ ಜಗದೀಶ್‌ ಅವರ ಪ್ರೊಫೈಲ್‌ ಫೊಟೊವನ್ನು ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲಿ ಆತನ ಮೊಮ್ಮಗಳ ಭಾವಚಿತ್ರವಿತ್ತು. ಆದರೆ ಮಗುವಿನ ಮುಖ ಕಾಣಿಸದಂತೆ ಬ್ಲರ್‌ ಮಾಡಿರುವ ಝುಬೈರ್‌, ಹೆಲೋ ಜಗದೀಶ್‌ ಸಿಂಗ್‌, ನಿಮ್ಮ ಮುದ್ದಾದ ಮೊಮ್ಮಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಕೆಲಸದ ಬಗ್ಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಅವರಿಗೆ ಸೂಚಿಸಿದ್ದಾರೆ.

ಈ ಕಾರಣಕ್ಕಾಗಿ ಮಹಮ್ಮದ್‌ ಝುಬೈರ್‌ ವಿರುದ್ಧ ಪೋಕ್ಸೋ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Alt News stands by Mohammed Zubair (@zoo_bear). pic.twitter.com/08ezUdBqII

— Pratik Sinha (@free_thinker) September 6, 2020


ADVERTISEMENT

ಝುಬೈರ್‌ ವಿರುದ್ಧ ಬಂದಿರುವ ಆರೋಪವನ್ನು ಆಲ್ಟ್‌ ನ್ಯೂಸ್‌ ತಂಡ ಸಂಪೂರ್ಣ ಅಲ್ಲಗೆಳೆದಿದೆ. ಕಾನೂನು ದುರುಪಯೋಗದ ಮೂಲಕ ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮಹಮ್ಮದ್ ಜುಬೈರ್ ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಲ್ಟ್‌ ನ್ಯೂಸ್‌ ನ ಇನ್ನೋರ್ವ ಸಹ ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಹೇಳಿದ್ದಾರೆ. ಅಲ್ಲದೆ, ಆಲ್ಟ್‌ ನ್ಯೂಸ್‌ ಝುಬೈರ್‌ ಬೆಂಬಲಕ್ಕೆ ನಿಲ್ಲುತ್ತದೆ ಎಂದೂ ಸೇರಿಸಿದ್ದಾರೆ.

ಸುಳ್ಳು ನಿರೂಪಣೆಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಝುಬೈರ್‌ರ ಕೆಲಸಗಳು ಭಾರತೀಯ ಪ್ರಜಾಪ್ರಭುತ್ವವನ್ನು ಮಟ್ಟಹಾಕಲು ಸುಳ್ಳು ಮಾಹಿತಿಯನ್ನೇ ಆಯುಧವನ್ನಾಗಿಸಿದವರಿಗೆ ನುಂಗಲಾರದ ತುತ್ತಾಗಿವೆ. ಹಾಗಾಗಿ ಝುಬೈರ್‌ರ ಸ್ಥೈರ್ಯವನ್ನು ಕುಗ್ಗಿಸಲು ಈ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಹಿಂದಿನ ಶನಿವಾರ, ಜುಬೇರ್ ತಮ್ಮ ವಿರುದ್ಧ ಬಂದಿರುವ ದೂರನ್ನು “ಸಂಪೂರ್ಣವಾಗಿ ನಿಷ್ಪ್ರಯೋಜಕ” ಎಂದು ಕರೆದಿದ್ದರು. “ನಾನು ಅದಕ್ಕೆ ಕಾನೂನುಬದ್ಧವಾಗಿ ಪ್ರತಿಕ್ರಿಯಿಸುತ್ತೇನೆ” ಎಂದು ಅವರು ಹೇಳಿದ್ದರು.

Tags: ಆಲ್ಟ್ ನ್ಯೂಸ್ಮಹಮ್ಮದ್‌ ಝುಬೈರ್
Previous Post

ಒಂದೇ ವ್ಯಕ್ತಿಯಲ್ಲಿ ಎರಡನೇ ಬಾರಿಗೆ ಕೋವಿಡ್: ಬೆಂಗಳೂರಿನಲ್ಲಿ ಮೊದಲ ಪ್ರಕರಣ ಪತ್ತೆ

Next Post

ಪಾರ್ಕ್‌‌ ನೈತಿಕ ಪೊಲಿಸ್‌ಗಿರಿ‌: ದೂರು ದಾಖಲಿಸಿದ ಸಂಯುಕ್ತಾ, ಭೇಷರತ್ ಕ್ಷಮೆಯಾಚಿಸಿದ ಕವಿತಾ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
Next Post
ಪಾರ್ಕ್‌‌ ನೈತಿಕ ಪೊಲಿಸ್‌ಗಿರಿ‌: ದೂರು ದಾಖಲಿಸಿದ ಸಂಯುಕ್ತಾ

ಪಾರ್ಕ್‌‌ ನೈತಿಕ ಪೊಲಿಸ್‌ಗಿರಿ‌: ದೂರು ದಾಖಲಿಸಿದ ಸಂಯುಕ್ತಾ, ಭೇಷರತ್ ಕ್ಷಮೆಯಾಚಿಸಿದ ಕವಿತಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada